ಕಾರು ಖರೀದಿ ವಿಚಾರವಾಗಿ ದಂಪತಿ ಮಧ್ಯೆ ಜಗಳ! – ಪತಿಯ ಸಿಟ್ಟಿಗೆ ಹೆಂಡತಿ ಬಲಿ!

ಕಾರು ಖರೀದಿ ವಿಚಾರವಾಗಿ ದಂಪತಿ ಮಧ್ಯೆ ಜಗಳ! – ಪತಿಯ ಸಿಟ್ಟಿಗೆ ಹೆಂಡತಿ ಬಲಿ!

ಅವರಿಬ್ಬರು ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ಇಬ್ಬರು ಅನ್ಯೋನ್ಯವಾಗಿದ್ದರು. ಯಾವುದಕ್ಕೂ ಕೊರತೆಯಿರಲಿಲ್ಲ. ಸುಖವಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಅವರಿಬ್ಬರ ಮಧ್ಯೆ ಕಾರು ಖರೀದಿ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶಿಕ್ಷಕರೊಬ್ಬರು ಪತ್ನಿಯನ್ನು ಹತ್ಯೆ ಮಾಡಿ, ಬೆಂಕಿ ಹಚ್ಚಿರುವ ಹೃದಯ ವಿದ್ರಾವಕ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಏನಿದು ಘಟನೆ?

ಈ ದಂಪತಿ ಉತ್ತರ ಪ್ರದೇಶ ಮೂಲದವರಾಗಿದ್ದು, ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಸೆಂಟ್ರಲ್ ಕೋಲ್ಕತ್ತಾದ 24 ಜಾದುನಾಥ್​ ಡೇ ರಸ್ತೆಯಲ್ಲಿರುವ ಎರಡನೇ ಮಹಡಿಯ ಫ್ಲಾಟ್​ನಲ್ಲಿ ವಾಸಿಸುತ್ತಿದ್ದರು. ಈ ದಂಪತಿ ಕಾರು ಖರೀದಿಸಬೇಕು ಅಂತಾ ಅಂದುಕೊಂಡಿದ್ದರು. ಕಾರಿನ ವಿಚಾರವಾಗಿ ಅವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ಈ ಮನಸ್ಥಾಪ ಕೊನೆಗೆ ಜಗಳಕ್ಕೆ ತಿರುಗಿದೆ. ಇದೇ ಸಿಟ್ಟಿನಲ್ಲಿ ಆತ ಪತ್ನಿಯ ಕಪಾಳಕ್ಕೆ ಹೊಡೆದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪತ್ನಿಯ ಸಾವನ್ನು ಮರೆ ಮಾಚಲು ದೇಹಕ್ಕೆ ಬೆಂಕಿ ಹಚ್ಚಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಿಸಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಬೂಬು ಹೇಳಿದ್ದಾನೆ.

ಇದನ್ನೂ ಓದಿ: 20 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಐವರು ಸಾವು! – ತನಿಖೆ ವೇಳೆ ಬಯಲಾಯ್ತು ಭಯಾನಕ ರಹಸ್ಯ!

ಪೊಲೀಸರ ಮುಂದೆ ಶಿಕ್ಷಕನ ನಿಜ ಬಣ್ಣ ಬಯಲು!

ಅರ್ಧ ಸುಟ್ಟ ಶವದ ಮರಣೋತ್ತರ ಪರೀಕ್ಷೆ ನಡೆಸಿ ಆರೋಪಿ ಶ್ರೀಕಾಂತ್ ತಿವಾರಿಯನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಕೂಡಲೇ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ತಕ್ಷಣ ಪೊಲೀಸರು ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಘಟನೆ ಬಯಲಾಗಿದ್ದು ಹೇಗೆ?

ಆರೋಪಿ ಈ ಕೊಲೆಯನ್ನು ಮರೆಮಾಚಬೇಕೆಂದು ಪ್ಲಾನ್‌ ಮಾಡಿದ್ದಾನೆ. ಹೆಂಡತಿಯ ಸಾವನ್ನು ಆತ್ಮಹತ್ಯೆ ಅಂತಾ ಬಿಂಬಿಸಲು ಮುಂದಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತ ಹೆಂಡತಿಯ ಶವಕ್ಕೆ ಬೆಂಕಿ ಹಚ್ಚಿದ್ದಾನೆ. ಫ್ಲಾಟ್​ನಿಂದ ಹೊಗೆ ಬರುತ್ತಿರುವುದನ್ನು ಅಕ್ಕಪಕ್ಕದ ಮನೆಯವರು ನೋಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ತಿವಾರಿ ಪತ್ನಿ ದೀಪ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತ ನಾಟಕವಾಡಿದ್ದಾನೆ.

ಆದರೆ ಆತ ಹೇಳಿದ ಸುಳ್ಳು ಹೆಚ್ಚು ಸಮಯಗಳ ಕಾಲ ಉಳಿಯಲಿಲ್ಲ. ಆರೋಪಿಯನ್ನು ಸರಿಯಾಗಿ ವಿಚಾರಿಸಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಕಾರು ಕೊಳ್ಳುವ ವಿಚಾರದಲ್ಲಿ ಇಬ್ಬರೂ ಜಗಳವಾಡಿದ್ದು, ಈ ವೇಳೆ ತಾನೇ ಹೊಡೆದು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.

Shwetha M