RRಗೆ ಕನ್ನಡಿಗನ ಮಾಸ್ಟರ್ ಸ್ಟ್ರೋಕ್ ಮಿಡ್ಲ್ ಓವರ್ನಲ್ಲೇ ಪ್ರಸಿದ್ಧ್ ಚಮತ್ಕಾರ!
ಟೀಂ ಇಂಡಿಯಾಕ್ಕೆ ಕೃಷ್ಣ ಕಂಬ್ಯಾಕ್?

ಈ ಬಾರಿಯ ಐಪಿಎಲ್‌ನಲ್ಲಿ ಅಬ್ಬರದ ಪ್ರದರ್ಶನವನ್ನು ನೀಡುವ ಮೂಲಕ ಟೀಮ್ ಇಂಡಿಯಾ ಸಖತ್ ಕಂಬ್ಯಾಕ್ ಮಾಡುವ ಕನಸು ಕಾಣುತ್ತಿರುವ ಪ್ರಸಿದ್ಧ ಕೃಷ್ಣಾ, ಇದೇ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ತಮ್ಮ ಲೈನ್ ಹಾಗೂ ಲೆಂಥ್ ಮೇಲೆ ಕಂಟ್ರೋಲ್ ಇಟ್ಟುಕೊಂಡಿರುವ ಪ್ರಸಿದ್ಧ ಪಂದ್ಯದಿಂದ ಪಂದ್ಯಕ್ಕೆ ಸಖತ್ ಶೈನ್ ಆಗುತ್ತಿದ್ದಾರೆ. ಸಾಗುತ್ತಿದ್ದಾರೆ. ಇವರು ರಾಜಸ್ಥಾನ ವಿರುದ್ಧದ ಪಂದ್ಯದಲ್ಲೂ ರನ್‌ಗಳನ್ನು ನೀಡದೆ ಕಾಡಿದರು.
ಸಾಮಾನ್ಯವಾಗಿ ವೇಗದ ಬೌಲರ್ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡುವುದನ್ನು ನೋಡಿರುತ್ತೇವೆ. ಆದರೆ ಈ ಐಪಿಎಲ್‌ನಲ್ಲಿ ಪ್ರಸಿದ್ಧ ಕೃಷ್ಣ ಮಿಡ್ಲ್ ಓವರ್‌ಗಳಲ್ಲಿ ಬೌಲಿಂಗ್ ಮಾಡಿ ಎದುರಾಳಿ ಬ್ಯಾಟರ್‌ಗಳಿಗೆ ಕಾಡಿದ್ದಾರೆ. ಈ ಅವಧಿಯಲ್ಲಿ ರನ್‌ಗಳಿಗೆ ಕಡಿವಾಣ ಹಾಕುವ ಪ್ರಸಿದ್ಧ, ತಮ್ಮ ಶಿಸ್ತು ಬದ್ಧ ದಾಳಿಯಿಂದ ಬ್ಯಾಟರ್‌ಗಳಿಗೆ ಪೆವೆಲಿಯನ್ ಹಾದಿ ತೋರಿಸುತ್ತಿದ್ದಾರೆ. ಕಳೆದ ಗುಜರಾತ್ ಮತ್ತು ರಾಜಸ್ಥಾನ್ ಮ್ಯಾಚ್‌ನಲ್ಲಿ ಸಂಜುಗೆ ಪ್ರಸಿದ್ಧ ಕೃಷ್ಣಾ ಕಾಡಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಡೆದು ಅಬ್ಬರಿಸಿದರು. ಈ ವೇಳೆ ಪ್ರಸಿದ್ಧ ಅವರನ್ನು ಸಖತ್ ಸೆಟಪ್ ಮಾಡಿದ್ದರು. ಪ್ರಸಿದ್ಧ ಎಕ್ಸ್‌ಟ್ರಾ ಬೌನ್ಸ್ ಇರುವ ಎಸೆತವನ್ನು ಶಾರ್ಟ್ ಥರ್ಡ್ ಮೇಲಿನಿಂದ ಬೌಂಡರಿ ಬಾರಿಸುವ ಯೋಚನೆಯನ್ನು ಹೊಂದಿದ್ದ ಸಂಜು ಸ್ಯಾಮ್ಸನ್‌ಗೆ ಶಾಕ್ ಕಾದಿತ್ತು. 30 ಯಾರ್ಡ್ ಸರ್ಕಲ್‌ನ ಶಾರ್ಟ್ ಥರ್ಡ್ ನಲ್ಲಿ ನಿಲ್ಲಿಸಿಕೊಂಡಿದ್ದ ಸಾಯಿ ಕಿಶೋರ್ ಸಂಜು ಅವರ ಕ್ಯಾಚ್ ಪಡೆದು ಬೀಗಿದರು. ಇದು ರಾಜಸ್ಥಾನ ತಂಡಕ್ಕೆ ದೊಡ್ಡ ಹೊಡೆತವನ್ನು ನೀಡಿತು. 3 ವಿಕೆಟ್ ಪಡೆದು ಮಿಂಚಿದು ಗುಜರಾತ್ ಗೆಲುವಿನಲ್ಲಿ ಮಹತ್ವದ ಪಾತ್ರವನ್ನ ವಹಿಸಿದ್ರು.
ಇನ್ನು 2018ಕ್ಕೆ ಐಪಿಎಲ್ ಅಂಗಳಕ್ಕೆ ಪ್ರಸಿದ್ಧ ಕೃಷ್ಣಾ ಕಾಲಿಟ್ರು. 2018 ರ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗಾಯಗೊಂಡ ಕಮಲೇಶ್ ನಾಗರ್ಕೋಟಿ ಬದಲಿಗೆ ಇವರನ್ನ ಖರೀದಿಸಿತು. ಈ ಬಾರಿಯ ಐಪಿಎಲ್ ಬಿಡ್ಡಿಂಗ್‌ನಲ್ಲಿ 9.50 ಕೋಟಿಗೆ ಗುಜರಾತ್ ತಂಡವನ್ನ ಸೇರಿದ್ರು. ಬಲಗೈ ವೇಗದ-ಮಧ್ಯಮ ಬೌಲರ್ ಆಗಿರೋ ಕೃಷ್ಣಾ ಅಪ್ಪಟ ಕನ್ನಡಿಗ. ಇವರು ಮಾರ್ಚ್ 23, 2021 ರಂದು ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ತಮ್ಮ ಏಕದಿನ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ 4 ವಿಕೆಟ್‌ಗಳನ್ನು ಪಡೆದರು, ODI ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 24 ವರ್ಷಗಳ ಹಳೆಯ ಭಾರತೀಯ ದಾಖಲೆಯನ್ನು ಇವರು ಮುರಿದರು. 2023 ರ ಏಷ್ಯಾ ಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು ಮತ್ತು 2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆದ್ರು. ಒಟ್ನಲ್ಲಿ ಐಪಿಎಲ್ ಪ್ರಸಿದ್ದ ಕೃಷ್ಣಾ ಸೂಪರ್ ಆಟ ಆಡುತ್ತಿದ್ದು, ಫಾನ್ಸ್‌ಗೆ ರಸದೌತಣವನ್ನ ನೀಡುತ್ತಿದ್ದಾರೆ. ಇ