ಪೊಲೀಸರ ಬಿಗಿ ಭದ್ರತೆಯಲ್ಲಿ ದಸರಾ ಆನೆಗಳ ತೂಕ ಪರೀಕ್ಷೆ! – ತೂಕದಲ್ಲಿ ಮಾಜಿ ಕ್ಯಾಪ್ಟನ್‌ ಅರ್ಜುನ ಫಸ್ಟ್‌, ಅಭಿಮನ್ಯು ಸೆಕೆಂಡ್‌!

ಪೊಲೀಸರ ಬಿಗಿ ಭದ್ರತೆಯಲ್ಲಿ ದಸರಾ ಆನೆಗಳ ತೂಕ ಪರೀಕ್ಷೆ! – ತೂಕದಲ್ಲಿ ಮಾಜಿ ಕ್ಯಾಪ್ಟನ್‌ ಅರ್ಜುನ ಫಸ್ಟ್‌, ಅಭಿಮನ್ಯು ಸೆಕೆಂಡ್‌!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ನಾಡಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಜಂಬೂಸವಾರಿ ಕೂಡ ಒಂದು. ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ತೂಕ ತಪಾಸಣೆ ನಡೆಸಲಾಗಿದ್ದು, 8 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಮಾಜಿ ಕ್ಯಾಪ್ಟನ್​ ಅರ್ಜುನ ಅತಿ ಹೆಚ್ಚು ತೂಕದ ಆನೆ ಎಂಬ ಹೆಸರನ್ನು ಈ ಬಾರಿಯೂ ಉಳಿಸಿಕೊಂಡಿದ್ದಾನೆ.

ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳು ಈಗಾಗಲೇ ಮೈಸೂರಿಗೆ ಆಗಮಿಸಿವೆ. ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ನಿತ್ಯವೂ ತಾಲೀಮು ನಡೆಸುತ್ತಿವೆ. ಇದೀಗ ದಸರಾದಲ್ಲಿ ಭಾಗವಹಿಸುವ 14 ಆನೆಗಳ ತೂಕ ಪರೀಕ್ಷೆಯನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಮಾಡಲಾಗಿದೆ. ಎರಡನೇ ಹಂತದ ಆನೆಗಳ ಜೊತೆ ಮೊದಲನೇ ಹಂತದ ಆನೆಗಳಿಗೂ ತೂಕ ಪರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ: ಮಂತ್ರಾಲಯದ ರಾಯರ ಮಠಕ್ಕೆ ಹರಿದು ಬಂತು ಭರ್ಜರಿ ಕಾಣಿಕೆ! ಇತಿಹಾಸದಲ್ಲೇ  ಮೊದಲ ಬಾರಿಗೆ ಗರಿಷ್ಠ ಆದಾಯ!

5685 ಕೆಜಿಯೊಂದಿಗೆ ಈ ಬಾರಿಯೂ ಅರ್ಜನನೇ ಮೊದಲ ಸ್ಥಾನದಲ್ಲಿದ್ದಾನೆ. 5300 ಕೆಜಿ ತೂಕದೊಂದಿಗೆ ಅಂಬಾರಿ ಹೊರುವ ಅಭಿಮನ್ಯು ಎರಡನೇ ಸ್ಥಾನದಲ್ಲಿದ್ದಾನೆ. ತೂಕ ಹೆಚ್ಚಿಸಿಕೊಳ್ಳವ ವಿಚಾರದಲ್ಲಿ ಭೀಮ ಎಲ್ಲರಿಗಿಂತ ಮುಂದಿದ್ದಾನೆ. ಭೀಮ ಬರೋಬ್ಬರಿ 315 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.

ದಸರಾ ಗಜಪಡೆಯ ತೂಕದ ವಿವರ.. 

  1. ಅಭಿಮನ್ಯು – 5,300
  2. ವಿಜಯ – 2,885
  3. ಭೀಮ – 4,685
  4. ವರಲಕ್ಷ್ಮಿ – 3,170
  5. ಮಹೇಂದ್ರ – 4660
  6. ಧನಂಜಯ – 4,990
  7. ಕಂಜನ್ – 4,395
  8. ಗೋಪಿ – 5145
  9. ಹಿರಣ್ಯ – 2915
  10. ರೋಹಿತ್ – 3360
  11. ಸುಗ್ರೀವ – 5035
  12. ಪ್ರಶಾಂತ್ – 4970
  13. ಲಕ್ಷ್ಮಿ – 3235
  14. ಅರ್ಜುನ – 5680

Shwetha M