ಬುಧವಾರ ಗಣೇಶನನ್ನೇಕೆ ಪೂಜಿಸಬೇಕು.? – ಬುಧವಾರ ಪಠಿಸಬೇಕಾದ ಗಣಪತಿ ಮಂತ್ರಗಳು ಯಾವುವು?

ಬುಧವಾರ ಗಣೇಶನನ್ನೇಕೆ ಪೂಜಿಸಬೇಕು.? – ಬುಧವಾರ ಪಠಿಸಬೇಕಾದ ಗಣಪತಿ ಮಂತ್ರಗಳು ಯಾವುವು?

ಶಿವ ಪುರಾಣದ ಪ್ರಕಾರ ಗಣೇಶನನ್ನು ಬುಧವಾರದ ದಿನದಂದು ಪೂಜಿಸಬೇಕೆನ್ನುವ ನಿಯಮವಿದೆ.  ಹಾಗಿದ್ರೆ  ಬುಧವಾರ ಯಾಕೆ ಗಣಪತಿಯನ್ನ ಪೂಜೆಸಬೇಕು ಅನ್ನೋದ್ದನ್ನ ನೋಡೋಣ.

.ಬುಧವಾರ ಗಣೇಶನ ಪೂಜೆ ಮಹತ್ವವೇನು.?
ಬುಧವಾರದ ದಿನವನ್ನು ಗಣೇಶನ ಪೂಜೆಗೆ ಅಥವಾ ಆರಾಧನೆಗೆ ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಬುಧವಾರದ ದಿನದಂದು ನಾವು ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿ ಯಶಸ್ಸನ್ನು ಮತ್ತು ಮಾನಸಿಕ ಶಾಂತಿಯನ್ನು ಪಡೆದುಕೊಳ್ಳಬಹುದು. ಒಬ್ಬ ವ್ಯಕ್ತಿಯ ಜೀವನದಿಂದ ಎಲ್ಲಾ ರೀತಿಯ ಕಷ್ಟಗಳನ್ನು ಪರಿಹರಿಸುವಲ್ಲೂ ಇದು ಸಹಕಾರಿಯಾಗಿದೆ.

 ಬುಧವಾರ ಗಣೇಶನನ್ನು ಪೂಜಿಸುವುದು ಹೇಗೆ.?
– ಬುಧವಾರದ ದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುದ್ಧರಾದ ಬಳಿಕ ಸ್ವಚ್ಛವಾದ ಬಟ್ಟೆಯನ್ನು ಧರಿಸಬೇಕು.
– ಗಣೇಶನ ಮೂರ್ತಿಗೆ ಗಂಗಾಜಲದಿಂದ ಅಭಿಷೇಕವನ್ನು ಮಾಡಬೇಕು.
– ದೇವರ ಕೋಣೆಯಲ್ಲಿ ಅಥವಾ ಪೂಜೆ ಮಾಡುವ ಸ್ಥಳದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು.
– ಬಳಿಕ ಗಣೇಶನಿಗೆ ದೀಪವನ್ನು ಹಚ್ಚಿ ಉಪವಾಸ ವ್ರತ ಮಾಡುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ.
– ಗಣೇಶನಿಗೆ ಹಾಲು, ದುರ್ವಾ ಹುಲ್ಲು, ಹೂವುಗಳು ಮತ್ತು ಸಿಂಧೂರವನ್ನು ಅರ್ಪಿಸಿ
– ಮೋದಕ ಅಥವಾ ಲಡ್ಡುಗಳನ್ನು ನೈವೇದ್ಯವಾಗಿ ನೀಡಿ.
– ಗಣೇಶನಿಗೆ ಆರತಿಯನ್ನು ಮಾಡಿ ಮತ್ತು ದಿನವನ್ನು ಭಕ್ತಿಯಿಂದ ಕಳೆಯಿರಿ.
– ರಾತ್ರಿ ಚಂದ್ರನನ್ನು ನೋಡಿದ ನಂತರವೇ ಪ್ರಸಾದವನ್ನು ಸೇವಿಸುವ ಮೂಲಕ ವ್ರತವನ್ನು ತ್ಯಜಿಸಿ.

Kishor KV

Leave a Reply

Your email address will not be published. Required fields are marked *