ಬುಧವಾರ ಯಾವೆಲ್ಲಾ ಕೆಲಸ ಮಾಡಬೇಕು? ಏನೆಲ್ಲಾ ಕೆಲಸ ಮಾಡಬಾರದು?

ಗಣೇಶನ ದಿನವಾದ ಬುಧವಾರದ ದಿನದಂದು ನಾವು ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ವ್ಯಾಪಾರ, ವ್ಯವಹಾರದಲ್ಲಿ ಹೇಗೆ ಪ್ರಗತಿಯನ್ನು ಸಾಧಿಸುತ್ತೇವೆಯೋ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತೇವೆ. ಬುಧವಾರದ ದಿನದಂದು ನಾವು ಯಾವೆಲ್ಲಾ ಕೆಲಸ ಮಾಡಬೇಕು ಏನು ಮಾಡಬಾರದು ಅನ್ನೋದ್ದನ್ನ ನೋಡೋಣ.
ಬುಧವಾರದ ದಿನವು ಒಂದೆಡೆ ಗಣೇಶನಿಗೆ ಸಮರ್ಪಿತವಾದ ದಿನವಾದರೆ, ಮತ್ತೊಂದೆಡೆ ಬುಧ ಗ್ರಹಕ್ಕೆ ಸಂಬಂಧಿಸಿದ ದಿನವಾಗಿದೆ. ಬುಧವಾರದ ದಿನದಂದು ನಾವು ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆಯಾಗುವುದು. ಆದ್ದರಿಂದ, ಬುಧವಾರಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸಬೇಕು. ಇದು ಬುಧ ಗ್ರಹವನ್ನು ಬಲಪಡಿಸುತ್ತದೆ ಮತ್ತು ಗಣೇಶನ ಆಶೀರ್ವಾದದಿಂದ, ವ್ಯವಹಾರದಲ್ಲಿ ಎರಡು ಪಟ್ಟು ಪ್ರಗತಿಯನ್ನು ಸಾಧಿಸಲು ಮತ್ತು ಜೀವನದ ಕಷ್ಟಗಳಿಂದ ಮುಕ್ತಿಯನ್ನು ಪಡೆದುಕೊಳ್ಳಲು ಸಹಾಯ ಮಾಡುವುದು. ಇದಕ್ಕಾಗಿ ನಾವು ಬುಧವಾರದ ದಿನದಂದು ಈ ಕೆಲಸಗಳನ್ನು ಮಾಡುವುದು ತುಂಬಾನೇ ಒಳ್ಳೆಯದು.
ಹೊಸ ವ್ಯವಹಾರ ಮಾಡಬಾರದು
ಬುಧವಾರದ ದಿನದಂದು ನಾವು ಎಂದಿಗೂ ಹೊಸ ವ್ಯವಹಾರದಲ್ಲಿ ಹೂಡಿಕೆಯನ್ನು ಮಾಡಬಾರದು ಎನ್ನುವ ನಂಬಿಕೆಯಿದೆ. ಬುಧವಾರದ ದಿನದಂದು ನಾವು ಹೊಸ ಕೆಲಸದಲ್ಲಿ ಹೂಡಿಕೆ ಮಾಡುವುದರಿಂದ ಅದು ನಮಗೆ ಲಾಭದ ಬದಲು ನಷ್ಟವನ್ನೇ ತಂದುಕೊಡುತ್ತದೆ. ಅದಕ್ಕಾಗಿಯೇ ಬುಧವಾರದಂದು ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡುವುದು ನಿಷಿದ್ಧ ಎಂದು ಪರಿಗಣಿಸಲಾಗುತ್ತದೆ. ಹಾಗೆ ಮಾಡುವುದರಿಂದ ಅಶುಭ ಫಲಿತಾಂಶಗಳು ದೊರೆಯಬಹುದು. ಇದಲ್ಲದೆ, ಈ ದಿನದಂದು ಯಾವುದೇ ಪ್ರಮುಖ ಅಥವಾ ಹೊಸ ವ್ಯವಹಾರ ಅಥವಾ ವ್ಯಾಪಾರ ಯೋಜನೆ ಪ್ರಾರಂಭಿಸುವುದನ್ನು ತಪ್ಪಿಸಬೇಕು.
ಹಣದ ವಹಿವಾಟುಗಳನ್ನು ನಡೆಸಲು ಶುಭ ದಿನವಲ್ಲ
ಬುಧವಾರದ ದಿನವು ಹಣದ ವಹಿವಾಟುಗಳನ್ನು ನಡೆಸಲು ಶುಭ ದಿನವಲ್ಲ. ಈ ದಿನದಂದು ನಾವು ಹಣವನ್ನು ಸಾಲವಾಗಿ ಪಡೆಯುವುದನ್ನು ಅಥವಾ ಇತರರಿಂದ ಸಾಲವಾಗಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಬುಧವಾರದ ದಿನದಂದು ನಾವು ಯಾರಿಗಾದರೂ ಸಾಲ ನೀಡಿದರೆ ಅದು ನಿಮಗೆ ಮರಳಿ ದೊರೆಯುವುದಿಲ್ಲವೆಂದು ಕೂಡ ಹೇಳಲಾಗುತ್ತದೆ. ಅದೇ ರೀತಿ, ಈ ದಿನದಂದು ತೆಗೆದುಕೊಂಡ ಸಾಲವು ಮರುಪಾವತಿಸುವಲ್ಲಿ ತೊಂದರೆಗಳನ್ನು ಎದುರಿಸಬಹುದು ಮತ್ತು ಭಾರೀ ಸಾಲಕ್ಕೆ ಕಾರಣವಾಗಬಹುದು. ಶಾಸ್ತ್ರದ ಪ್ರಕಾರ, ಬುಧವಾರದಂದು ಹಣವನ್ನು ಸಾಲವಾಗಿ ನೀಡುವುದು ಅಥವಾ ಸಾಲವಾಗಿ ಹಣವನ್ನು ಪಡೆದುಕೊಳ್ಳುವುದು ಜೀವನದಲ್ಲಿ ಸಮಸ್ಯೆಗಳನ್ನು ಮತ್ತು ಅಡೆತಡೆಗಳನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ಬುಧವಾರ ಈ ಚಟುವಟಿಕೆಗಳನ್ನು ಮಾಡುವುದು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ
ಹಸಿರು ಬಟ್ಟೆ ಧರಿಸಿದ್ರೆ ಶುಭ
ಬುಧವಾರದಂದು ಹಸಿರು ಬಟ್ಟೆಗಳನ್ನು ಧರಿಸುವುದು ತುಂಬಾ ಶುಭ ಎನ್ನುವ ನಂಬಿಕೆಯಿದೆ. ಬುಧವಾರದ ದಿನದಂದು ನಾವು ಹಸಿರು ಬಣ್ಣದ ಬಟ್ಟೆಯನ್ನು ಧರಿಸಿದರೆ ಅದು ನಮ್ಮ ಜೀವನಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಸಿರು ಬಣ್ಣವು ಬುಧ ಗ್ರಹದೊಂದಿಗೆ ಸಂಬಂಧಿಸಿದೆ. ಆದ್ದರಿಂದ, ಪ್ರತಿ ಬುಧವಾರ ಹಸಿರು ಬಟ್ಟೆಗಳನ್ನು ಧರಿಸುವುದರಿಂದ ಜಾತಕದಲ್ಲಿನ ಬುಧನ ಸ್ಥಾನ ಬಲವಾಗುವುದು. ಇದು ವ್ಯವಹಾರದಲ್ಲಿ ಪ್ರಗತಿ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಶುಭ ಅವಕಾಶಗಳನ್ನು ಸೃಷ್ಟಿಸುತ್ತದೆ.

ನೋಡಿರಿ

