atsapp ವೆಡ್ಡಿಂಗ್ ಕಾರ್ಡ್ ಡೇಂಜರ್ – ಕ್ಲಿಕ್ ಮಾಡಿದ್ರೆ ಅಕೌಂಟ್ ಖಾಲಿ ಖಾಲಿ
ಸೈಬರ್ ಕ್ರೈಂ ಲೋಕದ ಹೊಸ Chapter

ಮದುವೆ ಅಂದ್ರೆ ತುಂಬಾ ಕೆಲಸ ಇರುತ್ತೆ.. ಮನೆ ಕೆಲಸದ ಜೊತೆ ವೆಡ್ಡಿಂಗ್ ಕಾರ್ಡ್‌ಗಳನ್ನ ಹಂಚೋಂದು ದೊಡ್ಡ ಕೆಲಸ. ಆದ್ರೆ ಈ ವಾಟ್ಸಾಪ್ ಬಂದ್ ಮೇಲೆ ಸಾಕಷ್ಟು ಜನರಿಗೆ ಈ ಕೆಲಸ ತುಂಬ ಈಸಿ ಆಗಿದೆ.. ಎಲ್ಲಿ ಮದುವೆ, ಯಾವಾಗ ಮದುವೆ? ಯಾರಿಗೆಲ್ಲಾ ಮದುವೆ ಅಂತಾ ಒಂದು ಕಾರ್ಡ್ ಮಾಡಿ ವಾಟ್ಸಪ್‌ನಲ್ಲೇ ಕಳ್ಸಸ್ತಾರೆ.. ಹಾಗೇ ಫ್ರೀ ಇಲ್ಲ ಬರೋಕೆ ದಯವಿಟ್ಟು ಬನ್ನಿ ಅಂತಾ ಒಂದ್ ಮ್ಯಾಸೇಜ್ ಕೂಡ ಹಾಕ್ತಾರೆ..ಆದರೆ ಈಗ ಇದನ್ನೇ ಸೈಬರ್ ಕ್ರೈಮ್ ಕಿರಾತಕರು ಬಳಸಿಕೊಳ್ಳುತ್ತಿದ್ದಾರೆ. ಮದುವೆ ಕಾರ್ಡ್‌ನಿಂದ ಸೈಬರ್ ವಂಚರು ಏನ್ ಮಾಡ್ತಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಿಮ್ಮ BPL ಕಾರ್ಡ್ ರದ್ದಾಗುತ್ತೆ – ಯಾವ್ಯಾವ ಸೌಲಭ್ಯ ಕಟ್.. ಮುಂದೇನು?
ಡೇ ಬೈ ಡೇ ಜನ ಹೇಗೆ ಅಪ್ಡೇಟ್ ಆಗ್ತಾ ಇದ್ದಾರೋ ಹಾಗೇ ಸೈಬರ್ ಕಳ್ಳರು ಕೂಡ ಅಪ್ಡೇಟ್ ಆಗ್ತಿದ್ದಾರೆ. ತಮ್ಮೆಲ್ಲಾ ಕಳ್ಳತನ, ದರೋಡೆ, ವಸೂಲಿ ಪ್ಲ್ಯಾನ್‌ಗಳು ಜನರಿಗೆ ಗೊತ್ತಾಗುತ್ತಿದ್ದಂತೆ ಮೋಸ ಮಾಡಲು ಹೊಸ ಹೊಸ ಪ್ಲ್ಯಾನ್‌ಗಳನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ. ಈಗ ಜನರಿಗೆ ಟೋಪಿ ಹಾಕೋಕೆ ಸೈಬರ್ ಕಿರಾತಕರು ಮದುವೆಯ ಆಮಂತ್ರಣ ಪತ್ರಿಕೆಯ ಮೊರೆ ಹೋಗಿದ್ದಾರೆ.
ಸೈಬರ್ ಕಳ್ಳರ ಮಾಸ್ಟರ್ ಪ್ಲ್ಯಾನ್
ಡಿಜಿಟಲ್ ವೆಡ್ಡಿಂಗ್ ಆಮಂತ್ರಣ ಐಡಿಯಾವನ್ನು ಬಳಸಿ ಸೈಬರ್ ಕ್ರೈ ಕಿರಾತಕರು ವಂಚನೆ ಮಾಡುತ್ತಿದ್ದಾರೆ. ನಿಮ್ಮ ವಾಟ್ಸಾಪ್ ನಂಬರ್‌ಗೆ ಪರಿಚಯ ಇಲ್ಲದವರು ಆಮಂತ್ರಣ ಪತ್ರಿಕೆ ಕಳುಹಿಸುತ್ತಾರೆ. ಇದೊಂದು ಡೌನ್ಲೋಡ್ ಫೈಲ್ ಆಗಿದ್ದು, ಮೇಲ್ನೋಟಕ್ಕೆ ಎಲ್ಲರೂ ಕಳುಹಿಸುವ ಆಮಂತ್ರಣ ಪತ್ರಿಕೆಯಂತೆ ಕಾಣಿಸುತ್ತದೆ. ಈ ಆಮಂತ್ರಣ ಪತ್ರಿಕೆಯಲ್ಲಿ ವರ-ವಧು ಹೆಸರು, ದಿನಾಂಕ, ಮುಹೂರ್ತ, ಸ್ಥಳ ಸೇರಿ ಎಲ್ಲಾ ಮಾಹಿತಿ ಇರುತ್ತದೆ. ಈ ಫೈಲ್ ಕಳುಹಿಸುವುದರ ಜೊತೆಗೆ ಮೆಸೇಜ್ ಕೂಡ ರವಾನೆ ಮಾಡಲಾಗುತ್ತದೆ. ‘ದಯವಿಟ್ಟು ಮದುವೆಗೆ ಬಂದು ಹರಸಿ, ಸಮಯದ ಅಭಾವದಿಂದ ವಾಟ್ಸಾಪ್ ಮಾಡಿದ್ದೇವೆ. ಅನ್ಯತಾ ಭಾವಿಸದೇ ದಯವಿಟ್ಟು ಮದುವೆಗೆ ಬನ್ನಿ’ ಎಂದು ಬರೆಯುತ್ತಾರೆ. ಇಲ್ಲಿ ನಿಮ್ಮನ್ನು ಮಾತ್ರ ಟಾರ್ಗೆಟ್ ಮಾಡಿ ಕಳುಹಿಸದೇ ಸಿಕ್ಕ ಸಿಕ್ಕ ನಂಬರ್‌ಗೆ ಆಮಂತ್ರಣ ಪತ್ರಿಕೆ ಕಳುಹಿಸುತ್ತಾರೆ. ಲಕ್ಷಾಂತರ ಮಂದಿಗೆ ಈ ಆಮಂತ್ರಣ ಪತ್ರಿಕೆಯನ್ನು ಫಾರ್ವರ್ಡ್ ಮಾಡಲಾಗುತ್ತದೆ. ಈ ಪೈಕಿ ಸಾವಿರ ಜನ ಇದನ್ನು ಡೌನ್‌ಲೌಡ್ ಮಾಡಿದರೂ ಅವರ ಪ್ಲ್ಯಾನ್ ಸಕ್ಸಸ್ ಅಂತಲೇ ಅರ್ಥ. ಆ ಫೈಲ್ ಅನ್ನು ಡೌನ್‌ಲೋಡ್ ಮಾಡಿದರೆ, ನಿಮ್ಮ ಖಾತೆಯಿಂದ ದುಡ್ಡು ಮಾಯವಾಗಬಹುದು. ನಿಮ್ಮ ಖಾಸಗಿ ಮಾಹಿತಿ ಕಳ್ಳತನವಾಗಬಹುದು. ನಿಮ್ಮ ವಿರುದ್ಧ ಅದನ್ನು ಬಳಸಿಕೊಂಡು ಬ್ಲಾಕ್‌ಮೇಲ್ ಮಾಡಿ ಹಣ ಕೀಳಬಹುದು. ಹಿಮಾಚಲ ಪ್ರದೇಶ ಪೊಲೀಸರಿಗೆ ಸೈಬರ್ ಕಳ್ಳರು ಈ ರೀತಿ ಹಣ ದೋಚಿರುವ ದೂರು ಬಂದಿದೆ. ಈ ವೆಡ್ಡಿಂಗ್ ಕಾರ್ಡ್ ಸೈಬರ್ ಕಳ್ಳರ ಬಗ್ಗೆ ಕ್ರೈಂ ಪೊಲೀಸರು ದೇಶದೆಲ್ಲೆಡೆ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ನಿಮಗೆ ಗೊತ್ತಿಲ್ಲದ ನಂಬರ್‌ನಿಂದ ಇಂತಹ ಕಾರ್ಡ್ ಬಂದ್ರೆ ಅಪ್ಪಿ ತಪ್ಪಿಯೂ ಕೂಡ ಡೌನ್‌ಲೋಡ್ ಮಾಡಬೇಡಿ.