ರಸಗುಲ್ಲಕ್ಕಾಗಿ ಮದುವೆ ಮನೆ ರಣರಂಗ! – ಸ್ವೀಟ್‌ಗಾಗಿ ಮದುವೆಯೇ ರದ್ದು!

ಮದುವೆ ಮನೆ ಅಂದಾಗ ಸಂಭ್ರಮದ ಜೊತೆ ಜೊತೆಗೆ ಕೆಲವೊಮ್ಮೆ ಸಣ್ಣ ಪುಟ್ಟ ಮನಸ್ತಾಪ ಕೂಡ ಇರುತ್ತದೆ. ಮದುವೆ ಮನೆಯಲ್ಲಿ ಊಟ ಚೆನ್ನಾಗಿಲ್ಲ. ಚೆನ್ನಾಗಿ ನೋಡಿಕೊಂಡಿಲ್ಲ ಅಂತ ಸಂಬಂಧಿಕರು ಮದುವೆ ಆಯೋಜಿಸಿದವರನ್ನ ಆಡಿಕೊಳ್ಳುವುದು ಉಂಟು. ಆದ್ರೀಗ ಇಲ್ಲೊಂದು ಕಡೆ ರಸಗುಲ್ಲದಿಂದಾಗಿ ಮದುವೆಯೇ ರದ್ದಾಗಿದೆ.
ಇದನ್ನೂ ಓದಿ: ನನ್ನಂತ ವೃದ್ಧರಿಗೆ ತೊಂದರೆ ಆಗ್ತಿದೆ! – ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸೋನಿಯಾ ಗಾಂಧಿ
ಮದುವೆ ಮನೆಯಲ್ಲಿ ವರದಕ್ಷಿಣೆ ವಿಚಾರವಾಗಿ ಅಥವಾ ಹುಡುಗ- ಹುಡುಗಿಗೆ ಮದುವೆ ಇಷ್ಟ ಇಲ್ಲ ಅಂದ್ರೆ ಮದುವೆ ರದ್ದಾಗುವುದನ್ನ ನಾವು ಕೇಳಿದ್ದೇವೆ. ಇದೀಗ ಇಲ್ಲೊಂದು ಕಡೆ ಮದುವೆ ಸಮಾರಂಭದಲ್ಲಿ ರಸಗುಲ್ಲ ಕಡಿಮೆಯಾಗಿದೆ ಎಂಬ ಕಾರಣಕ್ಕೆ 2 ಕುಟುಂಬದವರ ನಡುವೆ ದೊಡ್ಡ ಜಗಳ ನಡೆದಿದೆ. ಇದ್ರಿಂದಾಗಿ ಮದುವೆಯೇ ರದ್ದಾಗಿದೆ. ಮದುವೆ ಮನೆಯಲ್ಲಿ ನಡೆದ ಜಗಳದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಹಾರದ ಬೋಧ್ ಗಯಾದಲ್ಲಿ ಈ ಘಟನೆ ನಡೆದಿದೆ. ನವೆಂಬರ್ 29ರಂದು ಬೋಧ್ ಗಯಾದ ಹೋಟೆಲ್‌ನಲ್ಲಿ ಮದುವೆ ಕಾರ್ಯಕ್ರಮ ನಿಗಧಿಪಡಿಸಲಾಗಿತ್ತು. ಹೋಗಾಗಿ ವಧುವಿನ ಕುಟುಂಬದವರು ಒಂದು ದಿನ ಮೊದಲೇ ಬಂದು ಆ ಹೋಟೆಲ್‌ನಲ್ಲಿ ತಂಗಿದ್ದರು. ವರ ಮತ್ತು ಆತನ ಕುಟುಂಬ ಹತ್ತಿರದ ಹಳ್ಳಿಯಿಂದ ಅಲ್ಲಿಗೆ ಆಗಮಿಸಿತ್ತು. ಎರಡು ಕುಟುಂಬದವರು ಸೇರಿಕೊಂಡು ಮದುವೆಯ ಕೆಲವು ಶಾಸ್ತ್ರ, ವಿಧಿ ವಿಧಾನ ನೆರವೇರಿಸಿದರು. ಇದಾದ ಬಳಿಕ ನೆಂಟರ ನಡುವೆ ರಸಗುಲ್ಲ ಖಾಲಿಯಾಗಿದೆ ಎಂಬ ಕಾರಣಕ್ಕೆ ಜಗಳವಾಗಿದೆ. ವರನ ಕಡೆಯವರಿಂದಲೇ ಈ ಸಮಸ್ಯೆ ದೊಡ್ಡ ಮಟ್ಟಿಗೆ ಹೊಡೆದಾಟವಾಗಿ ಮಾರ್ಪಟ್ಟಿತು ಎಂದು ವಧುವಿನ ಕಡೆಯವರು ಪೊಲೀಸರ ದೂರು ನೀಡಿದ್ದಾರೆ. ಅಲ್ಲದೇ ವರನ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ.
ಈ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ವೈರಲ್ ಆದ ವಿಡಿಯೋವನ್ನ ಪರಿಶೀಲನೆ ನಡೆಸಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಮದುವೆ ಸಮಾರಂಭದ ಊಟದ ಹಾಲ್‌ನಲ್ಲಿ ಜನರು ಗುಂಪಾಗಿ ಜಮಾಯಿಸಿರುವುದು ವಿಡಿಯೊದಲ್ಲಿ ಕಾಣಬಹುದು. ಧಾರ್ಮಿಕ ವಿಧಿವಿಧಾನಗಳ ನಂತರ ಜೋಡಿ ಮದುವೆ ಮಂಟಪಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಎರಡು ಗುಂಪುಗಳ ನಡುವೆ ಜಗಳ ಏರ್ಪಟ್ಟಿತು. ಅನೇಕರು ಹೊಡೆಯಲು ಕುರ್ಚಿ, ತಟ್ಟೆ, ಲೋಟ, ಸೌಟು ಇತ್ಯಾದಿ ಕೈಗೆತ್ತಿಕೊಂಡರು. ಘಟನೆಯಲ್ಲಿ ಎರಡು ಕಡೆಯವರೂ ಗಾಯಗೊಂಡಿದ್ದಾರೆ.
ಘಟನೆಯ ನಂತರ ವಧುವಿನ ಕುಟುಂಬದವರು ವರದಕ್ಷಿಣೆ ಪ್ರಕರಣ ದಾಖಲಿಸಿದೆ. ಆದರೆ ಇದು ಸುಳ್ಳು. ರಸಗುಲ್ಲದ ಕೊರತೆಯಿಂದಾಗಿ ಜಗಳ ನಡೆದಿದೆ. ನಾವು ಕುಟುಂಬವು ಮದುವೆಯನ್ನು ಮುಂದುವರಿಸಲು ಒಪ್ಪಿಕೊಂಡರೆ, ವಧುವಿನ ಕುಟುಂಬವು ಮದುವೆ ರದ್ದುಗೊಳಿಸಲು ನಿರ್ಧರಿಸಿದೆ ಎಂದು ಹೇಳಲಾಗ್ತಿದೆ.

ನೋಡಿರಿ

