ನೀವು ಜಾಸ್ತಿ ವೆಬ್ ಸೀರೀಸ್ ನೋಡ್ತೀರಾ? –  ಹಾಗಿದ್ರೆ ಕತೆ ಗೋವಿಂದ!

ನೀವು ಜಾಸ್ತಿ ವೆಬ್ ಸೀರೀಸ್ ನೋಡ್ತೀರಾ? –  ಹಾಗಿದ್ರೆ ಕತೆ ಗೋವಿಂದ!

ನಮ್ಮ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಮೊದ್ಲೆಲ್ಲಾ ರಾತ್ರಿ ಊಟ ಮಾಡಿದ ಕೂಡ್ಲೇ ನಿದ್ದೆ ಮಾಡ್ತಿದ್ದೆವು. ಆದ್ರೀಗ ಬೆನ್ನಿಗೆ ಬಿದ್ದ ಬೇತಾಳನಂತೆ ನಮ್ಮ ಕೈಗೆ ಫೋನ್ ಅಂಟಿಕೊಂಡಿದೆ. ನಿದ್ದೆ ಮಾಡೋ ಟೈಮ್ನಲ್ಲಿ ಮೂವಿ, ಗೇಮ್ಸ್ ವೆಬ್ಸೀರಿಸ್ ನೋಡ್ತಾ ಟೈಮ್ಪಾಸ್ ಮಾಡ್ತಿದ್ದೀವಿ.  ಒಟಿಟಿ ಜನರಿಗೆ ಮನರಂಜನೆಯನ್ನು ಸುಲಭಗೊಳಿಸಿದೆ ನಿಜ, ಆದರೆ ಇದು ಜನರ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನೂ ಬೀರುತ್ತಿದೆ.

ಇದನ್ನೂ ಓದಿ: ಕಟೀಲ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ NSUI ಕಾರ್ಯಕರ್ತರು – ʼನಳಿನ್‌ ಹಠಾವೋ.. ದೇಶ್‌ ಬಚಾವೋ..ʼ ಎಂಬ ಘೋಷಣೆ ಕೂಗಿ ಆಕ್ರೋಶ

ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ಆರೋಗ್ಯವಾಗಿಡಲು ಮನರಂಜನೆ ಬೇಕೇ ಬೇಕು. ಆದ್ರೆ ಈಗ ಮನರಂಜನೆಗಾಗಿ ವೆಬ್ ಸೀರೀಸ್ ನೋಡುವ ಟ್ರೆಂಡ್ ಜಾಸ್ತಿಯಾಗಿದೆ.. ಈ ವೆಬ್ ಸೀರೀಸ್ ಕಥೆಯನ್ನು ಜನರು ಒಂದರ ನಂತರ ಒಂದರಂತೆ ನೋಡುತ್ತಲೇ ಇರುತ್ತಾರೆ. ಇಡೀ ಸೀರೀಸ್ ಒಟ್ಟಿಗೆ ನೋಡಿದ ನಂತರವೇ ಬೇರೆ ಕೆಲಸದ ಕಡೆಗೆ ಗಮನ ಹರಿಸ್ತಾರೆ. ಈ ನಶೆಯಲ್ಲಿ, ನಿದ್ರೆಯ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಈ ಕಾರಣದಿಂದಾಗಿ, ನಿದ್ರೆಯ ಸಮಸ್ಯೆಗಳು ಹೆಚ್ಚುತ್ತಿದ್ದು, ಇದರಿಂದ ಮಾನಸಿಕ ಸ್ಥಿತಿ ಹದಗೆಡುತ್ತದೆ.

ಆರೋಗ್ಯ ತಜ್ಞರು ಹೇಳುವ ಪ್ರಕಾರ, ಜನರು ತಮ್ಮ ಕೋಣೆಗಳಲ್ಲಿ ಕುಳಿತು ಮೊಬೈಲ್ ಅಥವಾ ಲ್ಯಾಪ್ ಟಾಪ್ ನಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದರೆ, ಇದು ಒಂಟಿತನ ಹೆಚ್ಚಿಸುತ್ತಿದೆ. ಅಲ್ಲದೆ ಮಾನಸಿಕ ಖಿನ್ನತೆಗೆ ದಾರಿ ಮಾಡಿಕೊಡುತ್ತದೆ. . ತಜ್ಞರು ಹೇಳುವಂತೆ ಒಬ್ಬ ವ್ಯಕ್ತಿಯ ಮಾನಸಿಕ ಗೊಂದಲ ಮತ್ತು ಒತ್ತಡ ಅವನ ನಡವಳಿಕೆ ಮತ್ತು ದೈಹಿಕ ಲಕ್ಷಣಗಳಲ್ಲಿ ಕಾಣಿಸಿಕೊಂಡರೆ, ಅವನನ್ನು ಮಾನಸಿಕ ಅಸ್ವಸ್ಥತೆಯ ಸಂತ್ರಸ್ತ ಎಂದು ಪರಿಗಣಿಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ, ವೆಬ್ ಸೀರೀಸ್ ಅಡಿಕ್ಟ್ ಆದವರಲ್ಲಿ‌ ಕೆಲವರು ಕ್ರಿಮಿನಲ್ ಚಟುವಟಿಕೆ ಮಾಡೋದು, ಆಕ್ರಮಣಕಾರಿ ಗುಣಗಳನ್ನು ಬೆಳೆಸಿಕೊಳ್ಳುತ್ತಿರುವುದು ವರದಿಯಾಗುತ್ತಿದೆ.  ಇದರ‌ಜೊತೆಗೆ ವೆಬ್ ಸೀರೀಸ್‌ ನೋಡುವ ಉತ್ಸಾಹ ದಲ್ಲಿ, ಜನರು ಹೆಚ್ಚು ತಿನ್ನುತ್ತಾರೆ. ಇದು ಬೊಜ್ಜಿನ‌ ಸಮಸ್ಯೆಗೆ ಕಾರಣವಾಗುತ್ತದೆ. ಬೊಜ್ಜು, Bp, ಹೃದಯ ಸಂಬಂಧಿತ ಸಮಸ್ಯೆಗಳನ್ನು ಉತ್ತೇಜಿಸುತ್ತದೆ. ಹಾಗಾಗಿ ಆದಷ್ಟು ವೆಬ್ ಸೀರಿಸ್ ನೋಡೋದಕ್ಕೆ‌ ನಿರ್ದಿಷ್ಟ ಸಮಯ ಮಾತ್ರ ಫಿಕ್ಸ್ ಮಾಡಿ.. ಉಳಿದಂತೆ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಕಾಲ ಕಳೀರಿ..

Shwetha M