ನೀವು ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುತ್ತೀರಾ? ಗೊತ್ತಿಲ್ಲದೇ ನಿಮ್ಮ ಕಾಲಿಗೆ ಏನೆಲ್ಲಾ ಸೇರುತ್ತೆ ಗೊತ್ತಾ?

ನೀವು ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುತ್ತೀರಾ? ಗೊತ್ತಿಲ್ಲದೇ ನಿಮ್ಮ ಕಾಲಿಗೆ ಏನೆಲ್ಲಾ ಸೇರುತ್ತೆ ಗೊತ್ತಾ?

ಈ ಇಂಟರ್‌ನೆಟ್ ಯುಗದಲ್ಲಿ ತಂತ್ರಜ್ಞಾನ ಮಾತ್ರವಲ್ಲದೆ ನಾವು ತಿನ್ನುವ, ಕುಡಿಯುವ, ಬಟ್ಟೆ ಧರಿಸುವ ವಿಧಾನವೂ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುತ್ತಾರೆ. ಒಂದು ವೇಳೆ ಸಾಕ್ಸ್ ಧರಿಸಿದರೂ ಚಿಕ್ಕದಾದ ಸಾಕ್ಸ್ ಧರಿಸಲು ಇಷ್ಟಪಡುತ್ತಾರೆ. ಆದರೆ ನೀವು ಸಹ ಸಾಕ್ಸ್ ಇಲ್ಲದೆ ಶೂ ಧರಿಸುವ ಅಭ್ಯಾಸ ಬೆಳೆಸಿಕೊಂಡಿದ್ದರೆ ಇಂದೇ ಆ ಅಭ್ಯಾಸ ಬಿಟ್ಟು ಬಿಡಿ. ಇದರಿಂದಾಗಿ ನಿಮ್ಮ ಆರೋಗ್ಯಕ್ಕೆ ಅಪಾಯ ಗ್ಯಾರಂಟಿ.

ಇದನ್ನೂ ಓದಿ: ಚಪ್ಪಲಿ ಅಥವಾ ಶೂ ಕಚ್ಚಿ ಕಾಲಿಗೆ ಗಾಯವಾಗಿದ್ಯಾ? – ಕಡೆಗಣಿಸಿದ್ರೆ ಕಾಡುತ್ತೆ ಗಂಭೀರ ಸಮಸ್ಯೆ!

ಇತ್ತೀಚಿನ ಸಂಶೋಧನೆಯ ಪ್ರಕಾರ ಸಾಕ್ಸ್ ಇಲ್ಲದೆ ಶೂ ಧರಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರಿಂದ ಕಾಲಿನ ರೋಗಗಳಷ್ಟೇ ಅಲ್ಲದೆ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಕಾಯಿಲೆಗಳೂ ಬರುವ ಅಪಾಯವಿದೆ ಅಂತಾ ಗೊತ್ತಾಗಿದೆ. ಸಂಶೋಧನೆಯ ಪ್ರಕಾರ, ಸಾಕ್ಸ್ ಇಲ್ಲದೆ ನಡೆಯುವಾಗ ದಿನಕ್ಕೆ 300 ಮಿಲಿಯಷ್ಟು ಬೆವರು ಪಾದಗಳಿಂದ ಉತ್ಪತ್ತಿಯಾಗುತ್ತದೆ. ಇದ್ರಿಂದಾಗಿ ಪಾದಗಳಲ್ಲಿ ತೇವಾಂಶ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಅನೇಕ ರೀತಿಯ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನ ಅಪಾಯವೂ ಹೆಚ್ಚಾಗುತ್ತದೆ.

ಇನ್ನು ಕೆಲವರ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಸಿಂಥಟಿಕ್ ವಸ್ತುಗಳ ಜೊತೆಗಿನ ಸಂಪರ್ಕವು ಅಲರ್ಜಿಯನ್ನು ಉಂಟುಮಾಡುತ್ತದೆ. ಸಾಕ್ಸ್ ಇಲ್ಲದೆ ಶೂ ಧರಿಸುವುದರಿಂದ ಪಾದಗಳಿಗೆ ಹಾನಿಯಾಗುವುದಲ್ಲದೆ ರಕ್ತ ಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಉಂಟಾಗೋ ಸಾದ್ಯತೆ ಇದೆ. ಹೀಗಾಗಿ ಶೂ ಜೊತೆ ಸಾಕ್ಸ್ ಧರಿಸುವುದು ಉತ್ತಮ.

Shwetha M