ಫಿಟ್ನೆಸ್ ಆಗಿಲ್ಲ, ಆರೋಗ್ಯ ಸರಿಯಿಲ್ಲ!! ಶತ್ರುಸೇನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ!
ಪಾಕ್ ಸೇನೆಗೆ ಇದೆಂಥಾ ಗತಿ?

ಫಿಟ್ನೆಸ್ ಆಗಿಲ್ಲ, ಆರೋಗ್ಯ ಸರಿಯಿಲ್ಲ!! ಶತ್ರುಸೇನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ!ಪಾಕ್ ಸೇನೆಗೆ ಇದೆಂಥಾ ಗತಿ?

ಪಾಕಿಸ್ತಾನದ ಸೇನೆಯಲ್ಲಿ ಭ್ರಷ್ಟಾಚಾರ ಕುಣಿದು ಕುಪ್ಪಳಿಸುತ್ತಿದೆ. ನಾನ್ ಮಾಡಿದ್ದೇ ಸರಿ ಅನ್ನೋ ಧೋರಣೆ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡಿ ಈಗಾಗಲೇ ವಿಶ್ವದ ಎದುರು ಪಾಕ್ ಬೆತ್ತಲಾಗಿ ನಿಂತಿದೆ. ಹಲವು ವಿವಾದಾತ್ಮಕ ವಿಷಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಾ ಕಾಶ್ಮೀರ ಸುದ್ದಿಗೆ ಬರೋ ಪಾಕ್‌ಗೆ ಈಗಾಗಲೇ ಸಾಕಷ್ಟು ಪೆಟ್ಟನ್ನ ಭಾರತ ಕೊಟ್ಟಿದೆ. ಆದ್ರೂ ಪಾಕ್ ಪಾಠ ಕಲಿತಿಲ್ಲ. ಅದ್ರಲ್ಲೂ ಪಾಕ್ ಸರ್ಕಾರಕ್ಕಿಂತ ಪಾಕ್ ಸೇನೆಯ ಕಾರುಬಾರು ಬೆಚ್ಚು. ಪಾಕಿಸ್ತಾನ ಸರ್ಕಾರವು ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಸುಧಾರಿಸುವ ಪ್ರಯತ್ನ ನಡೆಸಿದಾಗ ಸೇನೆಯು ಏನಾದರೊಂದು ಸಂಚು ರೂಪಿಸಿ ಅದನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತದೆ. ಇದು ಸಾಕಷ್ಟು ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಪಾಕಿಸ್ತಾನದಲ್ಲಿ ಸೇನೆಯು ಸರ್ಕಾರದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಪಾಕಿಸ್ತಾನದ ಬಜೆಟ್‌ನ ಶೇಕಡಾ 20 ಕ್ಕಿಂತ ಹೆಚ್ಚಿನ ಪಾಲನ್ನು ಸೇನೆಯೇ ಪಡೆಯುತ್ತಿದೆ. ಇದರಿಂದ ಈ ದೇಶದಲ್ಲಿ ಬಡತನ ಇನ್ನೂ ಮುಂದುವರಿದಿದೆ.

ಪಾಕಿಸ್ತಾನ ಸೇನೆಯೊಳಗೆ ಆಂತರಿಕ ಭಿನ್ನಾಭಿಪ್ರಾಯ
ಪಾಕಿಸ್ತಾನ ಸೇನೆಯೊಳಗೆ ಆಂತರಿಕ ಭಿನ್ನಾಭಿಪ್ರಾಯಗಳಿವೆ. ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ವಿರುದ್ಧ ಕೆಳ ಮತ್ತು ಮಧ್ಯಮ ವರ್ಗದ ಅಧಿಕಾರಿಗಳು ಭ್ರಷ್ಟಾಚಾರ, ರಾಜಕೀಯ ಕಿರುಕುಳದ ಆರೋಪ ಮಾಡಿದ್ದಾರೆ. ಅಲ್ಲದೇ ದಂಗೆ ಏಳುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಇದು ಸೇನೆಯ ಏಕತೆ ಮತ್ತು ಶಿಸ್ತಿನ ಬಗ್ಗೆ ಆತಂಕವನ್ನು ಉಂಟು ಮಾಡಿದೆ.

ಭಯೋತ್ಪಾದನೆಗೆ ಸೇನೆ ಸಾಥ್
ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನ ಸೇನೆ ಮೃದು ಧೋರಣೆ ತಾಳುತ್ತಿದೆ. ಭಯೋತ್ಪಾದಕರನ್ನು ಪೋಷಿಸುವಲ್ಲಿ ಅದರ ಪಾತ್ರದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಿಮಾರಿಯನ್ನು ಎದುರಿಸಿದೆ. ಅಲ್ಲದೇ ಉಗ್ರರಿಗೆ ಪಾಕ್‌ ಸೇನೆಯೆ ಭದ್ರತೆಯನ್ನ ಒದಗಿಸುತ್ತಿದೆ. ಹಾಗೇ ತನ್ನ ಜೊತೆಗೆ ಸೇರಿಸಿಕೊಂಡು ಶತ್ರು ದೇಶದ ಮೇಲೆ ಚೂ ಬಿಡುವ ಕೆಲಸವನ್ನ ಪಾಕ್ ಸೇನೆಯೇ ಮಾಡುತ್ತಿದೆ.

ಎಲ್ಲಾ ಕ್ಷೇತ್ರದಲ್ಲಿ ಕೈ ಹಾಕುವ ಕೆಲಸ
ಸೇನೆಯು ಕೇವಲ ಮಿಲಿಟರಿ ಕಾರ್ಯವನ್ನು ಮಾತ್ರ ನಡೆಸುತ್ತಿಲ್ಲ. ರಾಜಕೀಯ, ರಿಯಲ್ ಎಸ್ಟೇಟ್, ಆಹಾರ ವಹಿವಾಟು, ಟಿವಿ ನಾಟಕ ನಿರ್ಮಾಣ ಸೇರಿದಂತೆ ವಿವಿಧ ಕೈಗಾರಿಕೆಗಳ ಮೇಲೂ ಹಸ್ತಕ್ಷೇಪ ನಡೆಸುತ್ತಿದೆ.

ಸೇನಾ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ
ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿವೆ. ಇಲ್ಲಿನ ಹಲವು ಜನರಲ್‌ಗಳು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ಡಾಲರ್‌ಗಳನ್ನು ಹೊಂದಿರುವುದನ್ನು ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ ತನಿಖೆಗಳಿಂದ ಬಹಿರಂಗವಾಗಿದೆ. ಇದು ಸೇನೆಯ ಮೇಲೆ ಜನರ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದೆ.

ಕುಸಿದ ಸೈನಿಕರ ತರಬೇತಿ, ಆಹಾರದ ಗುಣಮಟ್ಟ
ಸೈನಿಕರ ತರಬೇತಿ, ಆಹಾರದ ಗುಣಮಟ್ಟ ಕುಸಿದಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು, ಇದು ಅವರ ಫಿಟ್‌ನೆಸ್ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಪಾಕಿಸ್ತಾನಿ ಸೈನಿಕರ ಉತ್ಸಾಹ ಮತ್ತು ಫಿಟ್ನೆಸ್ ಮಟ್ಟಗಳು ಕ್ಷೀಣಿಸುತ್ತಿವೆ. ಅದರಲ್ಲೂ ಬಲೂಚಿಸ್ತಾನ್ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಸೈನಿಕರ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷೀಣಿಸಿದೆ ಅನ್ನೋ ಬಗ್ಗೆ ಕೂಡ ವರದಿಯಾಗಿದೆ. ಪಾಕ್ ಸೇನೆಯೊಳಗೆ ಯಾವುದು ಸರಿ ಇಲ್ಲ.. ಒಂದು ವೇಳೆ ಭಾರತ ಯುದ್ಧ ಸಾರಿದ್ರೆ ಪಾಕ್ ಭಾರತದ ಮುಂದೆ ಒಂದು ತಿಂಗಳು ಕೂಡ ನಿಲ್ಲೋಲ್ಲ. ಆದ್ರೂ ತನ್ನ ದುಷ್ಠ ಬುದ್ಧಿಯನ್ನ ಪಾಕ್ ಬಿಡುತ್ತಿಲ್ಲ ಅನ್ನೋದೆ ವಿಪರ್ಯಾಸ..

Kishor KV

Leave a Reply

Your email address will not be published. Required fields are marked *