ವಿ ಕಾಂಟ್ ಈವನ್ ಸ್ಲೀಪ್ ಎಂದ ದರ್ಶನ್ಗೆ ಕಂಬಳಿ ಭಾಗ್ಯ! – ಕೋರ್ಟ್ನಲ್ಲಿ ಇಂದು ಏನೇನಾಯ್ತು?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಜೈಲು ಸೇರುವಂತೆ ಆಗಿದೆ. ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ಗೆ ಅಲ್ಲಿನ ವ್ಯವಸ್ಥೆ ನೆಮ್ಮದಿ ಕೆಡಿಸಿದೆ. ಮೂಲಕ ಸೌಕರ್ಯ ಕೊಡಿ ಎಂದು ಕೋರ್ಟ್ ಮೊರೆ ಹೋಗಿದ್ರು. ಇದೀಗ ದರ್ಶನ್ಗೆ ಕಡೆಗೂ ಕೊಂಚ ರಿಲೀಫ್ ಸಿಕ್ಕಿದೆ. ಇದೀಗ ದರ್ಶನ್ಗೆ ಕಂಬಿಳಿ ಕೊಡಲು ಕೋರ್ಟ್ ಸೂಚನೆ ನೀಡಿದೆ.
ಇದನ್ನೂಓದಿ: ರಕ್ಷಿತಾ ಮೇಲಿನ ಸಿಟ್ಟಿಗೆ ರಘು ಸೇಡು – ನಾಮಿನೇಟ್ ಮಾಡಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ್ರಾ?
ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ಗೆ ಜೈಲುವಾಸ ಕಷ್ಟಕರವಾಗಿದೆ. ಈ ಬಗ್ಗೆ ದರ್ಶನ್ ಅವರು ಕೋರ್ಟ್ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಮೂಲ ಸೌಕರ್ಯ ಕೊಡುವಂತೆ ದರ್ಶನ್ ಮನವಿ ಮಾಡಿದ್ದರು. ಇಂದು ದರ್ಶನ್ ಪ್ರಕರಣದ ವಿಚಾರಣೆ ಇತ್ತು. ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ವಿಚಾರಣೆಗೆ ಹಾಜರಿ ಹಾಕಿದ್ದಾರೆ. ಸಿಆರ್ಪಿಸಿ 294 ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಆರೋಪಿಗಳ ಪರ ವಕೀಲರಿಂದ ಕಾಲಾವಕಾಶ ಕೋರಿಕೆ ಸಲ್ಲಿಕೆ ಆಗಿದೆ.
ಆರೋಪಿ ನಾಗರಾಜ್ ಕೋರ್ಟ್ಗೆ ಮನವಿ ಒಂದನ್ನು ಮಾಡಿದರು. ಮನೆಯಿಂದ ತಂದುಕೊಟ್ಟ ಕಂಬಳಿ ನೀಡುತ್ತಿಲ್ಲ. ಜಾಸ್ತಿ ಚಳಿ ಇದ್ದರೂ ಹೆಚ್ಚುವರಿ ಕಂಬಳಿ ನೀಡುತ್ತಿಲ್ಲ ಎಂದು ಕೋರ್ಟ್ ಎದುರು ಹೇಳಿದ್ದಾರೆ. ಅತ್ತ ವಿ ಕಾಂಟ್ ಈವನ್ ಸ್ಲೀಪ್ ಎಂದು ದರ್ಶನ್ ಇಂಗ್ಲಿಷ್ನಲ್ಲಿ ಮಾತು ಆರಂಭಿಸಿದರು. ತುಂಬಾನೇ ಚಳಿ ಇದೆ. ನಾವ್ಯಾರೂ ರಾತ್ರಿ ಮಲಗುತ್ತಿಲ್ಲ. ಹೆಚ್ಚುವರಿ ಕಂಬಳಿ ಕೊಡಿಸಿ ಎಂದು ಕೋರ್ಟ್ಗೆ ದರ್ಶನ್ ಮನವಿ ಮಾಡಿದರು. ಈ ಮನವಿ ಬಳಿಕ ಜಡ್ಜ್, ಪದೇ ಪದೇ ಆದೇಶ ಮಾಡಿದರೂ ಹೀಗ್ಯಾಕೆ ಮಾಡುತ್ತಾರೆ? ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು. ದರ್ಶನ್ಗೆ ಕಂಬಳಿಕೊಡಲು ಜೈಲು ಅಧಿಕಾರಿಗಳಿಗೆ ಜಡ್ಜ್ ಸೂಚನೆ ನೀಡಿದರು.
ಸದ್ಯ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ವಿಚಾರಣೆ ಡಿ.3ಕ್ಕೆ ಮುಂದೂಡಿದೆ. ಅಲ್ಲದೆ, ಆರೋಪಿ 14 ಪ್ರದೋಷ್ ಮಧ್ಯಂತರ ಜಾಮೀನನ್ನು ನ.22ರವರೆಗೆ ವಿಸ್ತರಣೆ ಮಾಡಲಾಗಿದೆ. ದರ್ಶನ್ ತಮ್ಮ ಮೇಲೆ ಬಂದ ಆರೋಪ ಎಲ್ಲವನ್ನೂ ತಿರಸ್ಕರಿಸಿದ್ದಾರೆ. ಇದರಿಂದ ಅವರು ವಿಚಾರಣೆ ಎದುರಿಸಬೇಕಿದೆ.

ನೋಡಿರಿ

