Horror ಫಿಲ್ಮ್ ನೋಡೋದು ಆರೋಗ್ಯಕ್ಕೆ ಒಳ್ಳೇದಾ? – ಭೂತದ ಸಿನಿಮಾಗಳಿಂದ ಸಣ್ಣ ಆಗಬಹುದು!

Horror ಫಿಲ್ಮ್ ನೋಡೋದು ಆರೋಗ್ಯಕ್ಕೆ ಒಳ್ಳೇದಾ? – ಭೂತದ ಸಿನಿಮಾಗಳಿಂದ ಸಣ್ಣ ಆಗಬಹುದು!

ದೇಹದ ತೂಕ ಇಳಿಸಿಕೊಳ್ಳೋಕೆ ವಾಕಿಂಗ್, ಜಾಗಿಂಗ್, ಯೋಗ, ವರ್ಕೌಟ್, ಡಯಟ್ ಅಂತಾ ಏನೇನೋ ಮಾಡ್ತಾರೆ. ಆದರೆ ಹಾರರ್ ಮೂವಿ ನೋಡೋದ್ರಿಂದ ತೂಕ ಇಳಿಸಿಕೊಳ್ಳಬಹುದು ಅನ್ನೋದು ಸಂಶೋಧನೆಯಿಂದ ಗೊತ್ತಾಗಿದೆ.

ಇದನ್ನೂ ಓದಿ : ಬಿಪಿ, ಕಿಡ್ನಿ ಸ್ಟೋನ್ ನಿವಾರಣೆಗೆ ರಾಮಬಾಣ – ಬಾಳೆದಿಂಡು ಸೇವನೆಯಿಂದ ಎಷ್ಟೊಂದು ಪ್ರಯೋಜನ?

ಭಯಾನಕ ಹಾರರ್ ಮೂವೀಸ್ ನೋಡೋದ್ರಿಂದ ದೇಹದ ಕ್ಯಾಲೋರಿಗಳನ್ನ ಕಡಿಮೆ ಮಾಡಬಹುದಂತೆ.  ಲಂಡನ್​ನ ವೆಸ್ಟ್​​ಮಿನಿಸ್ಟರ್ ಯುನಿವರ್ಸಿಟಿ ನಡೆಸಿದ ಸಂಶೋಧನೆಯಲ್ಲಿ ಈ ಅಚ್ಚರಿಯ ಮಾಹಿತಿ ಹೊರ ಬಿದ್ದಿದೆ. ಈ ಅಧ್ಯಯನದಲ್ಲಿ ಹತ್ತು ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಅವ್ರಿಗೆಲ್ಲಾ ವಿಭಿನ್ನ ರೀತಿಯ ಹಾರರ್ ಚಲನಚಿತ್ರಗಳನ್ನು ತೋರಿಸಲಾಗಿತ್ತು. ಹಾರ್ಟ್ ಬೀಟ್, ಆಕ್ಸಿಜನ್ ಸೇವನೆ ಮತ್ತು ಇಂಗಾಲದ ಡೈ ಆಕ್ಸೈಡ್ ಉತ್ಪಾದನೆಯನ್ನು ಅಳೆಯುವ ಸಾಧನಗಳನ್ನು ಧರಿಸಿ ಸಿನಿಮಾ ವೀಕ್ಷಿಸಿದ್ದರು. ಈ ವೇಳೆ ಅವರ ಹೃದಯದ ಬಡಿತ ಹೆಚ್ಚುತ್ತದೆ ಅನ್ನೋದು ಗೊತ್ತಾಗಿದೆ. ಭಯದ ಕಾರಣ ಅಡ್ರಿನಾಲ್ ಹಾರ್ಮೋನ್ ಬಿಡುಗಡೆಯಾಗಿ ಹಸಿವು ಕಡಿಮೆಯಾಗುತ್ತದೆ. ಮತ್ತೆ ಚಯಾಪಚಯಕ್ರಿಯೆಯ ವೇಗ ಹೆಚ್ಚಾಗುತ್ತದೆ. 90 ನಿಮಿಷಗಳ ಕಾಲ ದೆವ್ವದ ಸಿನಿಮಾ ವೀಕ್ಷಿಸೋದ್ರಿಂದ ಸುಮಾರು 150 ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತೆ. ಇದು 30 ನಿಮಿಷಗಳ ವಾಕಿಂಗ್​ನಷ್ಟೇ ಪರಿಣಾಮಕಾರಿಯಾಗಿರುತ್ತೆ. ಈ ಮೂಲಕ ದೇಹದ ತೂಕ ಕಡಿಮೆಯಾಗುತ್ತೆ ಅನ್ನೋದು ಸಂಶೋಧನೆಯಿಂದ ಗೊತ್ತಾಗಿದೆ.

Shantha Kumari