ಸೂರ್ಯಕುಮಾರ್ ಯಾದವ್ ಮತ್ತು ಅರ್ಶ್ ದೀಪ್ ಸಿಂಗ್ ನಡುವೆ ಗಲಾಟೆ – ಬಸ್ ನಲ್ಲೇ ಜಗಳ ಮಾಡಿಕೊಂಡ ಆಟಗಾರರು

ಸೂರ್ಯಕುಮಾರ್ ಯಾದವ್ ಮತ್ತು ಅರ್ಶ್ ದೀಪ್ ಸಿಂಗ್ ನಡುವೆ ಗಲಾಟೆ – ಬಸ್ ನಲ್ಲೇ ಜಗಳ ಮಾಡಿಕೊಂಡ ಆಟಗಾರರು

ಅತ್ಯುತ್ತಮ ಫಾರ್ಮ್ ನಲ್ಲಿರುವ ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ ಸೂರ್ಯಕುಮಾರ್, ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮೂರು ಪಂದ್ಯಗಳ ಸರಣಿಯ ಮೂರನೇ ಮತ್ತು ಅಂತಿಮ ಟಿ20ಐ ಪಂದ್ಯದಲ್ಲಿ ಭಾರತವು ಹರಿಣಗಳ ಪಡೆಯನ್ನು 106 ರನ್‌ಗಳಿಂದ ಸೋಲಿಸಿತು. ಈ ಮೂಲಕ ಟಿ20 ಸರಣಿ ಸಮಬಲದಿಂದ ಅಂತ್ಯಕಂಡಿದೆ.

ಇದನ್ನೂ ಓದಿ : ಕ್ರಿಕೆಟ್ ದೇವರು ಸಚಿನ್ ಸಾಲಿಗೆ ಸೇರಿದ ಕ್ಯಾಪ್ಟನ್ ಕೂಲ್ – ಧೋನಿಯ ನಂಬರ್ 7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧಾರ

ದಕ್ಷಿಣಾ ಆಫ್ರಿಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಆಟಗಾರರು ಬಸ್​ನಲ್ಲಿ ಹೋಟೆಲ್​ಗೆ ತೆರಳುತ್ತಿದ್ದರು. ಈ  ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಸ್ಟಾರ್ ವೇಗಿ ಅರ್ಶ್​ದೀಪ್ ಸಿಂಗ್ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ವಿಡಿಯೋ ಒಂದು ವೈರಲ್ ಆಗುತ್ತಿದೆ. ಸೂರ್ಯಕುಮಾರ್ ಅವರು ಎಡಗೈ ವೇಗದ ಬೌಲರ್‌ ಅರ್ಶ್​ದೀಪ್​ಗೆ ಗದರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸೂರ್ಯ ಅವರು ಅರ್ಶ್​ದೀಪ್​ನತ್ತ ಬೆರಳು ತೋರಿಸಿ ಕೋಪದಲ್ಲಿ ಮಾತಾಡುತ್ತಿದ್ದಾರೆ. ಯಾದವ್ ಕೋಪಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಇವರಿಬ್ಬರ ನಡುವೆ ನಿಜವಾಗಿಯೂ ಜಗಳವಾಗಿದೆಯೇ ಅಥವಾ ತಮಾಷೆಗಾಗಿ ಈರೀತಿ ಮಾಡಿದ್ದಾರೆಯ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರ ದಾಖಲೆಯ ನಾಲ್ಕನೇ ಶತಕದ ನೆರವಿನಿಂದ 20 ಓವರ್​ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 201 ರನ್​ಗಳನ್ನು ಗಳಿಸಿತು. ಸೂರ್ಯ 56 ಎಸೆತಗಳನ್ನು ಎದುರಿಸಿ ಏಳು ಫೋರ್ ಮತ್ತು ಎಂಟು ಸಿಕ್ಸರ್‌ಗಳ ಸಹಾಯದಿಂದ 100 ರನ್ ಗಳಿಸಿದರು. 202 ರನ್‌ಗಳ ಗುರಿ ಬೆನ್ನಟ್ಟಿದ ಪ್ರೋಟೀಸ್ 13.5 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಕುಲ್ದೀಪ್ ಯಾದವ್ 2.5 ಓವರ್‌ಗಳಲ್ಲಿ 17 ರನ್ ನೀಡಿ ಐದು ವಿಕೆಟ್ ಪಡೆದರು. ಮೂರನೇ ಟಿ20I ಗೆಲುವಿನೊಂದಿಗೆ, ಭಾರತ ಟಿ20I ಸರಣಿಯನ್ನು 1-1 ಸ್ಕೋರ್‌ಲೈನ್‌ನೊಂದಿಗೆ ಪೂರ್ಣಗೊಳಿಸಿತು.

Shantha Kumari