ಇನ್ನುಮುಂದೆ ಅಯೋಧ್ಯೆ ಶ್ರೀರಾಮನ ದರ್ಶನ ಮನೆಯಲ್ಲಿಯೇ ಕುಳಿತು ಪಡೆಯುವ ಸೌಭಾಗ್ಯ!
ಅಯೋಧ್ಯೆಯಲ್ಲಿ ರಾಮಮಂದಿರ ಈಗಾಗಲೇ ಲೋಕಾರ್ಪಣೆಗೊಂಡಿದೆ. ಲಕ್ಷಾಂತರ ಭಕ್ತರು ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಇದೀಗ ಶ್ರೀರಾಮನ ಭಕ್ತರಿಗೆ ಗುಡ್‌ನ್ಯೂಸ್‌ವೊಂದಿದೆ. ಇನ್ನುಮುಂದೆ ಮನೆಯಲ್ಲೇ ಕುಳಿತು ಮರ್ಯಾದಾ ಪುರುಷೋತ್ತಮನನ್ನು ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ: ಸೆಲಾ ಸುರಂಗ ಮಾರ್ಗದ ಮೇಲೂ ಚೀನಾ ಕಣ್ಣು! – ನಮ್ಮ ಜಾಗದಲ್ಲಿ ಕಟ್ಟಿದ್ದು ಎಂದು ಕಿರಿಕ್ ಮಾಡಿದ ಡ್ರ್ಯಾಗನ್ ರಾಷ್ಟ್ರ!
ಹೌದು, ರಾಮನನ್ನು ಕಣ್ಣು ತುಂಬಿಕೊಳ್ಳಬೇಕೆಂದು ಪ್ರತಿಯೊಬ್ಬ ಹಿಂದೂವಿನ ಕನಸ. ರಾಮ ಲಲ್ಲಾನ ದರ್ಶನ ಮಾಡುವ ಭಾಗ್ಯ ಒಮ್ಮೆ ಸಿಗಲಿ ಎಂದು ಬಯಸುತ್ತಾರೆ. ಇನ್ನು ಕೆಲವರಿಗೆ ಅಷ್ಟು ದೂರ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ. ಅಂಥವರು ಇನ್ನುಮುಂದೆ ಮೊಬೈಲ್ ಅಥವಾ ಟಿವಿಗಳಲ್ಲಿ ರಾಮನ ದರ್ಶನ ಪಡೆಯಬಹುದು. ಡಿಡಿ ನ್ಯಾಷನಲ್ ಚಾನೆಲ್‌ನಲ್ಲಿ ಇನ್ನುಮುಂದೆ ದೇವರ ಆರತಿಯು ಪ್ರತಿದಿನ ಬೆಳಿಗ್ಗೆ ನೇರ ಪ್ರಸಾರವಾಗಲಿದೆ.
ಅಯೋಧ್ಯೆಯ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ 6:30 ಕ್ಕೆ ಶ್ರೀರಾಮನಿಗೆ ಆರತಿ ಮಾಡಲಾಗುತ್ತಿದೆ. ಇದನ್ನು ಡಿಡಿ ನ್ಯಾಷನಲ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಸಾರ್ವಜನಿಕ ಪ್ರಸಾರಕರು ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.
ಭಗವಾನ್ ರಾಮನ ಪ್ರತಿಷ್ಠಾಪನೆಯ ನಂತರ, ಬೆಳಿಗ್ಗೆ ನೆರವೇರುವ ದೈನಂದಿನ ಆರತಿಯ ನೇರ ಪ್ರಸಾರಕ್ಕೆ ಅನುಮತಿ ಪಡೆಯಲು ಪ್ರಯತ್ನಿಸುತ್ತಿದ್ದೆವು. ಈಗ ಅನುಮೋದನೆ ಸಿಕ್ಕಿದ್ದು, ವಿವಿಧ ಕಾರಣಗಳಿಂದಾಗಿ ಅಯೋಧ್ಯೆಗೆ ಭೇಟಿ ನೀಡಲು ಸಾಧ್ಯವಾಗದ ಎಲ್ಲಾ ಭಕ್ತರು ಡಿಡಿ ನ್ಯಾಷನಲ್ ಮೂಲಕ ಭಗವಾನ್ ರಾಮನ ದರ್ಶನವನ್ನು ಪಡೆಯಬಹುದು” ಎಂದು ಪ್ರಸಾರಕ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.