ಶುಭ್ ಮನ್ ಗಿಲ್ ಕೆನ್ನೆಗೆ ಬಾರಿಸಿದ್ರಾ ಇಶಾನ್ ಕಿಶನ್? – ಡ್ರೆಸ್ಸಿಂಗ್ ರೂಮ್​ನಲ್ಲಿ ನಡೆದಿದ್ದೇನು?

ಶುಭ್ ಮನ್ ಗಿಲ್ ಕೆನ್ನೆಗೆ ಬಾರಿಸಿದ್ರಾ ಇಶಾನ್ ಕಿಶನ್? – ಡ್ರೆಸ್ಸಿಂಗ್ ರೂಮ್​ನಲ್ಲಿ ನಡೆದಿದ್ದೇನು?

ಟೀಮ್ ಇಂಡಿಯಾ ಆಟಗಾರರು ಪಂದ್ಯದ ವೇಳೆ ಮೈದಾನದಲ್ಲಿ ಎಷ್ಟು ಲವಲವಿಕೆಯಿಂದ ಇರುತ್ತಾರೋ ವಿರಾಮದ ವೇಳೆಯೂ ಹಾಗೆ ಇರುತ್ತಾರೆ. ರಿಲ್ಯಾಕ್ಸ್ ಮೂಡ್ ನಲ್ಲಿರೋ ವೇಳೆ ಆಟಗಾರರು ತಮ್ಮ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ, ಏನಾದರೊಂದು ಚೇಷ್ಟೆ ಮಾಡುತ್ತಿರುತ್ತಾರೆ. ಇವರ ಫನ್ನಿ ಮೂಮೆಂಟ್ಸ್ ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್ ಎಮು ಪಕ್ಷಿಯನ್ನು ಇಮಿಟೇಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಶುಭ್​ಮನ್ ಗಿಲ್, ಇಶಾನ್ ಕಿಶನ್ ಹಾಗೂ ಯುಜ್ವೇಂದ್ರ ಚಹಲ್ ವಿಡಿಯೋವೊಂದು ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಶುಭ್ ಮನ್ ಗಿಲ್ ಕೆನ್ನೆಗೆ ಇಶಾನ್ ಕಿಶನ್ ಬಾರಿಸಿದ್ದಾರೆ.

ಇದನ್ನೂ ಓದಿ:  ಕೊಹ್ಲಿ ದಾಖಲೆ ಮುರಿದು ದಿಲ್ ಗೆದ್ದ ಗಿಲ್ – ಶುಭ್ ಮನ್ ಆಟಕ್ಕೆ ರೆಕಾರ್ಡ್ ಗಳೇ ಉಡೀಸ್!

ಗಿಲ್ ಮೂರನೇ ಟಿ20 ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದರು. ಮೂರೂ ಫಾರ್ಮೆಟ್​ನಲ್ಲಿ ಶತಕ ಸಿಡಿಸಿದ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಕೇವಲ 63 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ನೊಂದಿಗೆ ಅಜೇಯ 126 ರನ್​ ಬಾರಿಸಿದ ಗಿಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದಾರೆ. ಇದಾದ ಬಳಿಕ ಗಿಲ್ ಡ್ರೆಸ್ಸಿಂಗ್ ರೂಮ್​ನಲ್ಲಿ ಸ್ನೇಹಿತರೊಂದಿಗೆ ಫನ್ನಿಯಾಗಿ ಹೊಡೆದಾಡಿಕೊಂಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಕಿಶನ್ ಅವರು ”ನೀವು ಚುರುಕಾಗಿರಬೇಕು ಮತ್ತು ಉತ್ಸಾಹದಿಂದ ಇರಬೇಕು” ಎಂದು ಗಿಲ್​ಗೆ ಕೋಪದಿಂದ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಗಿಲ್, ”ನಾನು ಚುರುಕಾಗಿದ್ದೇನೆ ಮತ್ತು ಉತ್ಸಾಹ ಕೂಡ ನನ್ನಲ್ಲಿದೆ” ಎನ್ನುತ್ತಾರೆ. ನಂತರ, ಕಿಶನ್ ಕುಪ್ಪಳಿಸುತ್ತಾ ಬಂದು ಗಿಲ್ ಮೇಲೆ ಜಿಗಿದು ಬೆಡ್ ಮೇಲೆ ನಿಂತು ಕುಣಿದಾಡುತ್ತಾರೆ. ಅಲ್ಲಿಂದ, ಗೊರಿಲ್ಲಾದ ಹಾಗೆ, ಬಾಯಿಯಿಂದ ಶಬ್ದ ಮಾಡುತ್ತಾ ಬೆಡ್ ಮೇಲಿಂದ ಕೆಳಗೆ ಇಳಿದು ಗಿಲ್‌ ರನ್ನು ದೂಡುತ್ತಾರೆ. ಬಳಿಕ ಗಿಲ್ ನಿನಗೆ ನೀನೇ ಕಪಾಳಕ್ಕೆ ಹೊಡೆದುಕೋ ಎಂದು ಹೇಳುತ್ತಾರೆ. ಆಗ ಗಿಲ್‌ ತನ್ನ ಕಪಾಳಕ್ಕೆ ಹೊಡೆದುಕೊಳ್ಳುತ್ತಾರೆ. ಇಲ್ಲಿಗೆ ನಿಲ್ಲದ ಕಿಶನ್ ನೇರವಾಗಿ ಶುಭ್‌ಮನ್‌ ಗಿಲ್​ಗೆ ಕಪಾಳಕ್ಕೆ ಹೊಡೆಯುವಂತೆ ಮಾಡುತ್ತಾರೆ. ಯುಜ್ವೇಂದ್ರ ಚಹಲ್ ಕೂಡ ಈ ವಿಡಿಯೋದಲ್ಲಿ ಇದ್ದು ಇವರಿಬ್ಬರ ಜಗಳವನ್ನು ನೋಡುತ್ತಾ ಸುಮ್ಮನೆ ಕುಳಿತಿದ್ದಾರೆ.

ಈ ವಿಡಿಯೋವನ್ನು ಗಿಲ್ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ”ರೋಡಿಸ್ ರಿಲೋಡೆಡ್, ನಮ್ಮ ನೆಚ್ಚಿನ ಕ್ಷಣವನ್ನು ಮರುಸೃಷ್ಟಿಸಿದ್ದೇವೆ” ಎಂದು ಗಿಲ್ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

View this post on Instagram

 

A post shared by Ꮪhubman Gill (@shubmangill)

suddiyaana