ಭಾರತಕ್ಕೂ ಕಾಲಿಡುತ್ತಾ ಹೈಡ್ರೋಜನ್ ಬಸ್? – ‘ಟೆಸ್ಟ್ ಡ್ರೈವ್’ ಹೊರಟ ಕೇಂದ್ರ ಸಚಿವ ನಿತಿನ್ ಗಡ್ಕರಿ!
ಕೇಂದ್ರ ರಸ್ತೆ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸದ್ಯ ಯುರೋಪ್‌ನ ಸೆಜ್ ರಿಪಬ್ಲಿಕ್ ಗೆ ತೆರಳಿದ್ದಾರೆ. ಈ ವೇಳೆ ಅವರು ಹೈಡ್ರೋಜನ್ ಬಸ್ನ ಟೆಸ್ಟ್ ಡ್ರೈವ್ ನಡೆಸಿದ್ದಾರೆ. ಈ ಬಸ್‌ಗಳನ್ನು ಭಾರತದಲ್ಲಿಯೂ ಬಿಡುವ ಆಲೋಚನೆ ಇದೆ ಅಂತಾ ಹೇಳಿದ್ದಾರೆ.
ನಿತಿನ್ ಗಡ್ಕರಿಯವರು ಟೆಸ್ಟ್ ಡ್ರೈವ್ಗೆ ತೆರಳುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹೈಡ್ರೋಜನ್ ಬಸ್‌ಗಳು ಭರವಸೆಯ ದಾರಿದೀಪವಾಗಿದ್ದು, ಸ್ವಚ್ಛ, ಹಸಿರು ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ಭಾರತದಲ್ಲಿಯೂ ಇಂತಹ ಬಸ್ಗಳನ್ನ ಪರಿಚಯಿಸುವ ಚಿಂತನೆಯಿದೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೊದ ಈ ಮಾರ್ಗದಲ್ಲಿ ಹಳಿತಪ್ಪಿದ ರೀ ರೈಲ್ – ಸಂಚಾರದಲ್ಲಿ ಭಾರಿ ವ್ಯತ್ಯಯ
ನಿತಿನ್ ಗಡ್ಕರಿಯವರು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಅನೇಕ ಅಧಿಕಾರಿಗಳು ನಿತಿನ್ ಗಡ್ಕರಿಯನ್ನ ಸುತ್ತುವರೆದಿದ್ದಾರೆ. ಭಾರತದಲ್ಲಿ ಪರಿಸರ ಸ್ನೇಹಿ ಸಾರಿಗೆಯ ಬಳಕೆ ಹೆಚ್ಚು ಆಗಬೇಕು ಎಂಬ ಉದ್ದೇಶದಿಂದ ಸಚಿವರು ಟೆಸ್ಟ್ ಡ್ರೈವ್ ಅನ್ನು ನಡೆಸಿದ್ದು, ಅಧಿಕಾರಿಗಳು ಬಸ್ನ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಪರಿಶೀಲನೆ ನಡೆಸಿದ್ದಾರೆ.
Union Minister Shri @nitin_gadkari Ji took a test drive in a Hydrogen Bus by Skoda in Prague, Czech Republic today, showcasing India’s commitment to exploring sustainable and eco-friendly mobility solutions. #HydrogenBus pic.twitter.com/V5YFykiJfR
— Office Of Nitin Gadkari (@OfficeOfNG) October 2, 2023
ಹೈಡ್ರೋಜನ್ ಬಸ್ನ ಪ್ರಯೋಜನವೇನು?
ಹೈಡ್ರೋಜನ್ ಇಂಧನವನ್ನು ಬಳಸಿಕೊಂಡು ಚಲಿಸುವಂತಹ ಬಸ್ ಹೈಡ್ರೋಜನ್ ಮತ್ತು ಗಾಳಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯನ್ನ ಮಾಡುತ್ತೆ. ಹೈಡ್ರೋಜನ್ ಇಂಧನ ಚಾಲಿತ ವಾಹನಗಳು ಭಾರತದಲ್ಲಿ ಪ್ರಯೋಗ ಹಂತದಲ್ಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಟೋಯೋಟಾ ಮಿರಾಯ್ ಕಾರು ಅನಾವರಣ ಮಾಡಿದ್ದರು. ಇದು ಭಾರತದ ಮೊದಲ ಹೈಡ್ರೋಜನ್ ಇಂಧನ ಕಾರಾಗಿತ್ತು.
ಹೈಡ್ರೋಜನ್ ಫ್ಯುಯೆಲ್ ಸೆಲ್ ವಾಹನಗಳು ಯಾವುದೇ ಕಾರ್ಬನ್ ಅಥವ ಇತರ ಮಾರಕ ಹೊಗೆಗಳನ್ನು ಉಗುಳುವುದಿಲ್ಲ. ಇದರಿಂದ ಕೇವಲ ಸಣ್ಣ ಪ್ರಮಾಣದ ಶಾಖ ಗಾಳಿಯೂ ಹೊರಸೂಸುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಅಪಾಯ ಇಲ್ಲ. ಶಾಖಾಗಾಳಿಯಿಂದ ವಾತಾವರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ಇಂಟರ್ನಲ್ ಕಂಬಶನ್ ಎಂಜಿನ್‌ಗಿಂತ ದಕ್ಷ ಹಾಗೂ ಪರಿಣಾಮಕಾರಿಯಾಗಿದೆ.
ಹೈಡ್ರೋಜನ್ ವಾಹನದ ಮತ್ತೊಂದು ವಿಶೇಷತೆ ಎಂದರೆ ಇಂಧನ. ಎಲೆಕ್ಟ್ರಿಕ್ ವಾಹನಗಳಾದರೆ ಅದೆಷ್ಟೇ ತಂತ್ರಜ್ಞಾನ ಮುಂದುವರಿದರೂ ಬ್ಯಾಟರಿ ಚಾರ್ಜ್ ಆಗಲು ಕನಿಷ್ಟ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಹೈಡ್ರೋಜನ್ ಕೆಲವೆ ನಿಮಿಷಗಳಲ್ಲಿ ಅಂದರೆ ಪೆಟ್ರೋಲ್ ಫಿಲ್ ಮಾಡುವ ರೀತಿಯಲ್ಲಿ ತುಂಬಿಸಿಕೊಳ್ಳಲುಸಾಧ್ಯವಿದೆ. ಹೈಡ್ರೋಜನ್ ಖಾಲಿಯಾಗಿದೆ ಎಂದರೆ ಅಷ್ಟೇ ಸುಲಭವಾಗಿ ತುಂಬಿಸಿಕೊಂಡು ಪ್ರಯಾಣ ಮುಂದುವರಿಸಬಹುದು.