ಕೈಯ್ಯಲ್ಲೊಂದು.. ಕುತ್ತಿಗೆಯಲ್ಲಿ ಇನ್ನೆರಡು ಹಾವು! – ಇದು ಶಾರುಖ್‌ಖಾನ್‌ ಹೊಸ ಅವತಾರ!

ಕೈಯ್ಯಲ್ಲೊಂದು.. ಕುತ್ತಿಗೆಯಲ್ಲಿ ಇನ್ನೆರಡು ಹಾವು! – ಇದು ಶಾರುಖ್‌ಖಾನ್‌ ಹೊಸ ಅವತಾರ!

ಕೈಯ್ಯಲ್ಲೊಂದು ಹಾವು, ಕುತ್ತಿಗೆಯಲ್ಲಿ ಇನ್ನೆರಡು ಹಾವು.. ಇದು ಶಾರುಖ್‌ಖಾನ್‌ ಹೊಸ ಅವತಾರ.. ಅರೇ.. ಏನಾಪ್ಪಾ ಶಾರುಖ್‌ಖಾನ್‌ ಸದ್ದಿಲ್ಲದೇ ಹೊಸ ಸಿನಿಮಾ ಮಾಡುತ್ತಿದ್ದಾರಾ ಅನ್ನೋ ಪ್ರಶ್ನೆ ಮೂಡೋದು ಸಹಜ. ಆದ್ರೆ ಇದು ಯಾವುದೇ ಸಿನಿಮಾ ಶೂಟಿಂಗ್‌ ನಲ್ಲಿ ಪಾಲ್ಗೊಂಡಿರುವ ದೃಶ್ಯವಲ್ಲ. ಕಿಂಗ್ ಖಾನ್ ಹೀಗೆ ಕಾಣಿಸಿಕೊಂಡಿರುವುದು ಬರ್ತ್ ಡೇ ಪಾರ್ಟಿಯಲ್ಲಿ.

ಹೌದು, ಅಚ್ಚರಿಯಾದ್ರೂ ಸತ್ಯ. ಇಶಾ ಅಂಬಾನಿ ಮತ್ತು ಆನಂದ್ ಪಿರಮಲ್ ಅವರ ಅವಳಿ ಮಕ್ಕಳಾದ ಕೃಷ್ಣ ಮತ್ತು ಆದಿಯಾ ಅವರಿಗೆ ನವೆಂಬರ್ 19ಕ್ಕೆ ಒಂದು ವರ್ಷ ತುಂಬಿತು. ಈ ವಿಶೇಷ ದಿನದಂದು ಅಂಬಾನಿ ಕುಟುಂಬವು ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸಿತ್ತು. ಇದರಲ್ಲಿ ಎಲ್ಲಾ ಬಾಲಿವುಡ್ ತಾರೆಯರು ಕೂಡ ಭಾಗವಹಿಸಿದ್ದರು. ಶಾರುಖ್ ಖಾನ್ ಕೂಡ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಕಿಂಗ್ ಖಾನ್ ಹಿಂದೆಂದೂ ಕಾಣದ ಅವತಾರದಲ್ಲಿ  ಕಾಣಿಸಿಕೊಂಡಿದ್ದಾರೆ. ಕೈಯಲ್ಲೊಂದು, ಹೆಗಲಲ್ಲಿ ಎರಡು ಹಾವುಗಳನ್ನು ಹಾಕಿಕೊಂಡು ಫೋಟೋಸ್‌, ವಿಡಿಯೋಸ್‌ಗೆ ಪೋಸ್‌ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ: ಈ ವಾರ ಡಬಲ್ ಎಲಿಮಿನೇಷನ್ -ಬಿಗ್‌ಬಾಸ್ ಮನೆಯಿಂದ ಇಶಾನಿ ಮತ್ತು ಭಾಗ್ಯಶ್ರೀ ಔಟ್

ವೈರಲ್ ಆಗಿರುವ ವಿಡಿಯೋದಲ್ಲಿ ಕಿಂಗ್ ಖಾನ್ ಪಾರ್ಟಿಯಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. ಶಾರುಖ್ ಜೊತೆ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಕೂಡ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅನಂತ್, ಶಾರೂಖ್ ಜೊತೆ ಮಾತಾಡುತ್ತಾ ಇದ್ದಕ್ಕಿದ್ದಂತೆ ಕಿಂಗ್ ಖಾನ್ ಕೈಗೆ ಹಾವನ್ನು ಕೊಡುತ್ತಾರೆ. ಆಗ ಶಾರೂಖ್ ಶಾಂತವಾಗಿಯೇ ನಿಂತು ನಗುತ್ತಿದ್ದರು. ಇಲ್ಲಿ ರಾಧಿಕಾ ಅವರು ಹಾವನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂದು ಎಸ್‌ಆರ್‌ಕೆಗೆ ತೋರಿಸಲು ಪ್ರಯತ್ನಿಸುತ್ತಾ ತಮಾಷೆ ಮಾಡುತ್ತಿದ್ದಾರೆ. ಸ್ವಲ್ಪ ಸಮಯದ ನಂತರ, ಯಾರೋ ಶಾರುಖ್ ಅವರ ಕುತ್ತಿಗೆಗೂ ಹಾವನ್ನು ಹಾಕುತ್ತಾರೆ. ಆದರೆ ಅವರು ಒಂದು ಇಂಚು ಕೂಡ ಕದಲಲಿಲ್ಲ. ಶಾರೂಖ್ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇದಾದ ನಂತರ ಶಾರುಖ್ ಈ ಹಾವುಗಳೊಂದಿಗೆ ಸಾಕಷ್ಟು ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಆದರೆ, ಹಾವು ನಿಜವೋ, ನಕಲಿಯೋ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Shwetha M