15 ವರ್ಷಗಳ ಬಳಿಕ ಮತ್ತೆ ಶ್ರೀಶಾಂತ್, ಹರ್ಭಜನ್ ಫೈಟ್! – ವಿಡಿಯೋ ಲೀಕ್..

2008 ರಲ್ಲಿ ಹರ್ಭಜನ್ ಸಿಂಗ್ ಹಾಗೂ ವೇಗದ ಬೌಲರ್ ಎಸ್ ಶ್ರೀಶಾಂತ್ ಅವರ ನಡುವೆ ನಡೆದ ಜಗಳ ದೊಡ್ಡ ಸೌಂಡ್ ಮಾಡಿತ್ತು. ಶ್ರೀಶಾಂತ್ ಗೆ ಹರ್ಭಜನ್ ಮೈದಾನದಲ್ಲೇ ಕಪಾಳ ಮೋಕ್ಷ ಮಾಡಿದ್ದರು. ಪಂದ್ಯ ಸೋತಿದ್ದಕ್ಕೆ ಹರ್ಭಜನ್ ಸಿಂಗ್ ಕೋಪದಲ್ಲಿ ಈ ರೀತಿ ಮಾಡಿದ್ದರು. ಇನ್ನೂ ಕ್ರಿಕೆಟ್ ಲೋಕದಲ್ಲಿ ಈ ಗಲಾಟೆ ಅಚ್ಚಳಿಯದೇ ಉಳಿದಿದೆ. ಇದೀಗ ಮತ್ತೆ ಇವರಿಬ್ಬರು ಜಗಳವಾಡಿಕೊಂಡಿದ್ದು, ಇದರ ವಿಡಿಯೋವನ್ನು ರಿಷಭ್ ಪಂತ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಪೃಥ್ವಿ ಶಾ ವಿರುದ್ಧ ದಾಖಲಾಯ್ತು ಪ್ರಕರಣ – IPL ತೊರೆಯಬೇಕಾಗುತ್ತಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡ್ಯಾಶಿಂಗ್ ಓಪನರ್
15 ವರ್ಷದ ಬಳಿಕ ಮತ್ತೆ ಹರ್ಭಜನ್ ಸಿಂಗ್-ಶ್ರೀಶಾಂತ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ಬಾರಿ ಯಾವುದೇ ಪಂದ್ಯದ ವಿಚಾರವಾಗಿ ಜಗಳವಾಡಿಕೊಂಡಿಲ್ಲ. ಝೊಮ್ಯಾಟೊ ವಿಚಾರವಾಗಿ ಲಿಫ್ಟ್ನಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಇದರ ವಿಡಿಯೋವನ್ನು ರಿಷಭ್ ಪಂತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಆರಂಭದಲ್ಲಿ ಲಿಫ್ಟ್ ನಲ್ಲಿ ಝೊಮ್ಯಾಟೊ ಡೆಲವರಿ ಬಾಯ್ ಆಹಾರ ತೆಗೆದುಕೊಂಡು ಹೋಗುತ್ತಾನೆ. ಇದನ್ನು ಕಂಡ ಹರ್ಭಜನ್ ಸಮಯಕ್ಕೆ ವಸ್ತುಗಳನ್ನು ತಲುಪಿಸುವುದು ಹೇಗೆ ಎಂಬುದನ್ನು ಕಲಿಯಿರಿ ಅಂತಾ ಹೇಳುತ್ತಾರೆ. ಇದು ಶ್ರೀಶಾಂತ್ ನನ್ನು ಕೆರಳಿಸುವಂತೆ ಮಾಡುತ್ತದೆ. ಬಳಿಕ ಝೊಮ್ಯಾಟೊ ಪದದ ಉಚ್ಚಾರಣೆಯ ಬಗ್ಗೆ ಇಬ್ಬರಲ್ಲೂ ಚರ್ಚೆ ಪ್ರಾರಂಭವಾಗುತ್ತದೆ. ಝೊಮ್ಯಾಟೊ ಪದವನ್ನು ನಾನು ಹೇಳಿದ್ದು ಸರಿ, ನಾನು ಹೇಳಿದ್ದು ಸರಿ ಅಂತಾ ಚರ್ಚೆ ಮಾಡುತ್ತಾರೆ. ಈ ಚರ್ಚೆ ತಾರಕಕ್ಕೇರುತ್ತದೆ. ಈ ವೇಳೆ ಲಿಫ್ಟ್‌ನಲ್ಲಿದ್ದ ಯುವತಿಯೊಬ್ಬಳು ಈ ಘಟನೆಯನ್ನು ವಿಡಿಯೋ ಮಾಡುತ್ತಿದ್ದಾಳೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇವರಿಬ್ಬರು ನಿಜವಾಗಿಯೂ ಕಿತ್ತಾಡಿಕೊಂಡಿಲ್ಲ. ಇದು ಒಂದು ಜಾಹೀರಾತಿನ ವಿಡಿಯೋ. ಝೊಮ್ಯಾಟೊ ಫುಡ್ ಆರ್ಡರ್ ಆ್ಯಪ್ ಮಾಡಿರುವ ಕ್ರಿಯೆಟಿವ್ ಜಾಹೀರಾತಿನಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಪಂತ್, 15 ವರ್ಷವಾದ್ರೂ ಇನ್ನೂ ಜಿದ್ದು ಮುಗಿದಿಲ್ವಾ ಎಂದು ಇವರಿಬ್ಬರ ಕಾಲೆಳೆದಿದ್ದಾರೆ. “ಭಜ್ಜಿ ಪಾ ಮತ್ತು ಶ್ರೀ ಮತ್ತೊಮ್ಮೆ ಜಗಳವಾಡಿರುವುದನ್ನು ನಂಬಲು ಸಾಧ್ಯವಿಲ್ಲ” ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.
Can’t believe Bhajji pa and Sree fought once again 😪@harbhajan_singh @sreesanth36 #zomatovszomato #Ad pic.twitter.com/sVvIoT9tvL
— Rishabh Pant (@RishabhPant17) April 12, 2023