ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದರಾ ಶ್ರೀದೇವಿ? – ನಟಿಯ ಕೆಲ ರಹಸ್ಯ ವಿಚಾರಗಳನ್ನು ಹಂಚಿಕೊಂಡ ಪತಿ ಬೋನಿಕಪೂರ್

ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದರಾ ಶ್ರೀದೇವಿ? – ನಟಿಯ ಕೆಲ ರಹಸ್ಯ ವಿಚಾರಗಳನ್ನು ಹಂಚಿಕೊಂಡ ಪತಿ ಬೋನಿಕಪೂರ್

ಖ್ಯಾತ ನಟಿ ಶ್ರೀದೇವಿ ಒಂದು ಕಾಲದಲ್ಲಿ ತನ್ನ ಸೌಂದರ್ಯದಿಂದಲೇ ಬಾಲಿವುಡ್ ಜಗತ್ತನ್ನು ಆಳಿದವರು. ಬಾಲಿವುಡ್‌ನ ಚಾಂದಿನಿ ಶ್ರೀದೇವಿ ಸೌಂದರ್ಯಕ್ಕೆ ಫಿದಾ ಅದವರು ಅದೆಷ್ಟೋ ಮಂದಿ. ಇಂದಿಗೂ ಎಂದೆಂದಿಗೂ ಶ್ರೀದೇವಿ ಬಾಲಿವುಡ್ ಲೋಕದಲ್ಲಿ ಅಮರ. ಇದೀಗ ಶ್ರೀದೇವಿ ಬಗ್ಗೆ ಮಾತನಾಡಿರುವ ಬೋನಿ ಕಪೂರ್ ಅಭಿಮಾನಿಗಳ ಅನೇಕ ಗೊಂದಲಗಳನ್ನು ದೂರ ಮಾಡಿದ್ದಾರೆ. ಅದರಲ್ಲೊಂದು ಬಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಮದುವೆಗೂ ಮೊದಲು ಗರ್ಭಿಣಿಯಾಗಿರುವ ಬಗ್ಗೆ.

ಇದನ್ನೂ ಓದಿ: ‘ಶ್ರೀದೇವಿಯದ್ದು ಸಹಜ ಸಾವಲ್ಲ’ – ನಟಿಯ ಸಾವಿನ ಬಗ್ಗೆ ಕೊನೆಗೂ ಸತ್ಯ ಬಹಿರಂಗಪಡಿಸಿದ ಬೋನಿ ಕಪೂರ್

ನಟಿ ಶ್ರೀದೇವಿ ನಿಧನರಾಗಿ ನಾಲ್ಕು ವರ್ಷಗಳ ನಂತರ ಪತ್ನಿಯ ಬಗ್ಗೆ ಹಲವಾರು ವಿಚಾರಗಳನ್ನು ಬೋನಿ ಕಪೂರ್ ಹಂಚಿಕೊಂಡಿದ್ದಾರೆ. ತೊಂಬತ್ತರ ದಶಕದಲ್ಲಿ ಅಭಿಮಾನಿಗಳ ಹೃದಯದರಸಿಯಾಗಿರುವ ಶ್ರೀದೇವಿ ಬೋನಿ ಕಪೂರ್ ಅವರನ್ನು ಮದುವೆ ಆಗಿ ಎಲ್ಲರಿಗೂ ಶಾಕ್ ನೀಡಿದ್ದರು. ಬೋನಿ ಕಪೂರ್ ಅವರಿಗೆ ಶ್ರೀದೇವಿ ಜೊತೆ ಎರಡನೇ ಮದುವೆ. 1996 ಜೂನ್ 2ರಂದು ಶಿರಡಿಯಲ್ಲಿ ಮದುವೆ ಆಗುವುದರ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದರು ಶ್ರೀದೇವಿ. ಕೆಲ ತಿಂಗಳ ಬಳಿಕ ಶ್ರೀದೇವಿ ಗರ್ಭಿಣಿ ಆಗಿರುವ ವಿಚಾರವನ್ನು ಕಪೂರ್ ಕುಟುಂಬ ಬಹಿರಂಗಪಡಿಸಿತ್ತು. ಮದುವೆಗೂ ಮುನ್ನ ಶ್ರೀದೇವಿ ಪ್ರಗ್ನೆಂಟ್ ಆಗಿದ್ದರು. ಆ ಕಾರಣಕ್ಕಾಗಿ ಬೇಗ ಬೇಗ ಮದುವೆಯಾದರು ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಭಾರೀ ಸದ್ದು ಮಾಡಿತ್ತು. ಮದುವೆಗೂ ಮುನ್ನ ಜಾನ್ವಿ ಕಪೂರ್ ಹುಟ್ಟಿದ್ದು ಅಂತ ಈಗಲೂ ಬಿಟೌನ್ ಮಾತನಾಡಿಕೊಳ್ಳುತ್ತಿದೆ. ಇದಕ್ಕೆ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ ಬೋನಿ ಕಪೂರ್. ಮದುವೆಗೂ ಮುನ್ನ ಶ್ರೀದೇವಿ ಗರ್ಭಿಣಿ ಆಗಿದ್ದರು ಎನ್ನುವುದು ಸುಳ್ಳು. 1996 ಜೂನ್ ನಲ್ಲಿ ನಮ್ಮಿಬ್ಬರ ಮದುವೆ ಆಯಿತು. ಶ್ರೀದೇವಿ ಪ್ರಗ್ನೆಂಟ್ ಆಗಿದ್ದು 1997 ಜನವರಿಯಲ್ಲಿ. ಶ್ರೀದೇವಿ ಅವರ ಬಗ್ಗೆ ಸುಖಾಸುಮ್ಮನೆ ಅಪಪ್ರಚಾರ ಮಾಡಿದರು. ಅದೆಲ್ಲವೂ ಸುಳ್ಳು. ಮದುವೆ ನಂತರವೇ ಜಾನ್ವಿ ಹುಟ್ಟಿದ್ದು ಎಂದು ಹೇಳಿದ್ದಾರೆ ಬೋನಿ ಕಪೂರ್.

Sulekha