KL ರಾಹುಲ್ ಗೆ ಎಷ್ಟು ಅನ್ಯಾಯ? – ದುರಾದೃಷ್ಟನೋ Or ಮೋಸದಾಟನೋ?
OUT ಇಲ್ಲದಿದ್ರೂ ಕೊಟ್ರಾ ಅಂಪೈರ್?

KL ರಾಹುಲ್ ಗೆ ಎಷ್ಟು ಅನ್ಯಾಯ? – ದುರಾದೃಷ್ಟನೋ Or ಮೋಸದಾಟನೋ?OUT ಇಲ್ಲದಿದ್ರೂ ಕೊಟ್ರಾ ಅಂಪೈರ್?

ಇದನ್ನ ಬ್ಯಾಡ್​ಲಕ್ ಅನ್ಬೇಕೋ ಅಥವಾ ಮೋಸದಾಟ ಅನ್ಬೇಕೋ ಗೊತ್ತಾಗ್ತಿಲ್ಲ. ದುರಾದೃಷ್ಟ ಅನ್ನೋದು ನಮ್ಮ ಕನ್ನಡಿಗ ಕೆಎಲ್ ರಾಹುಲ್​ರನ್ನ ಬೆನ್ನತ್ತಿದಂತಿದೆ. ಆಸ್ಟ್ರೇಲಿಯಾ ನೆಲದಲ್ಲಿ ಮತ್ತೊಮ್ಮೆ ಅಬ್ಬರಿಸೋಕೆ ರೆಡಿಯಾಗಿದ್ದ ರಾಹುಲ್ ಅಂಪೈರ್ ಎಡವಟ್ಟಿಗೆ ಬಲಿಯಾಗಿದ್ದಾರೆ. ಕೆಎಲ್ ರಾಹುಲ್​ರ ಔಟ್ ಕ್ರಿಕೆಟ್ ಅಭಿಮಾನಿಗಳನ್ನೇ ಕೆರಳಿಸಿದೆ. ಬ್ಯಾಕ್ ಟು ಬ್ಯಾಕ್ ವಿಕೆಟ್ ಬೀಳ್ತಿದ್ದ ವೇಳೆ ಭರವಸೆ ಮೂಡಿಸಿದ್ದ ರಾಹುಲ್​ರನ್ನ ಇಂಟೆನ್ಷಿಯಲಿ ಔಟ್ ಮಾಡಿದ್ರಾ? ಅಂಪೈರ್ ಡಿಸಿಷನ್ ಹಿಂದಿದ್ಯಾ ಮಹಾಮೋಸ? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಕೀರ್ತಿ ಸತ್ತಾಗ ಲಕ್ಷ್ಮೀ.. ಲಕ್ಷ್ಮೀ ಸತ್ತಾಗ ಕೀರ್ತಿ.. ಸೀರಿಯಲ್‌ ಟ್ವಿಸ್ಟಾ? ಟಾರ್ಚರಾ?

ಕ್ರಿಕೆಟ್ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಇಂದಿನಿಂದ ಆರಂಭವಾಗಿದೆ. ಆಸ್ಟ್ರೇಲಿಯಾದ ಪರ್ತ್​ನಲ್ಲಿ ನಡೆಯುತ್ತಿರೋ ಫಸ್ಟ್ ಮ್ಯಾಚ್​ನಲ್ಲಿ ಭಾರತಕ್ಕೆ ದೊಡ್ಡ ಆಘಾತವೇ ಆಗಿದೆ.  ಹಿಟ್ ಮ್ಯಾನ್ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಉಪನಾಯಕ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ನಾಯಕರಾಗಿದ್ದಾರೆ. ಪ್ಲೇಯಿಂಗ್ 11ನಲ್ಲಿ ಮೂವರು ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳಿಗೆ ಚಾನ್ಸ್​ ನೀಡಿರೋದೇ ದೊಡ್ಡ ಅಚ್ಚರಿ ಮೂಡಿಸಿತ್ತು. ಇದ್ರ ನಡುವೆ ಜಸ್ಪ್ರೀತ್ ಬುಮ್ರಾ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿಕೊಂಡಿದ್ರು. ಬಟ್ ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಆಟಗಾರರ ಪೆವಿಲಿಯನ್ ಪರೇಡ್ ನಡೆಸಿದ್ರು. ಅದ್ರ ನಡುವೆ ಅಂಪೈರ್​ಗಳ ಮೋಸದಾಟ ಮತ್ತೊಮ್ಮೆ ಸದ್ದು ಮಾಡಿದೆ.

ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಸಾಲು ಸಾಲು ವಿಕೆಟ್ ಶಾಕ್!

ಇನ್ನು ಮೊದ್ಲೇ ಪ್ರೆಡಿಕ್ಟ್ ಮಾಡಿದಂತೆ ರೋಹಿತ್ ಮತ್ತು ಗಿಲ್ ಆಬ್ಸೆನ್ಸ್​​ನಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಕನ್ನಡಿಗ ಕೆಎಲ್ ರಾಹುಲ್ ಓಪನರ್ ಆಗಿ ಇನ್ನಿಂಗ್ಸ್ ಆರಂಭಿಸಿದ್ರು. ಇದೇ ಮೊದಲ ಬಾರಿಗೆ ಆಸ್ಟ್ರೆಲಿಯಾ ಪ್ರವಾಸದಲ್ಲಿರುವ ಜೈಸ್ವಾಲ್ ಮೇಲೆ ತುಂಬಾ ಹೋಪ್ಸ್ ಇತ್ತಾದ್ರೂ 8 ಬಾಲ್ ಫೇಸ್ ಮಾಡಿ ಡಕ್​ಔಟಾದ್ರು. ಇನ್ನು ಒನ್ ಡೌನ್‌ನಲ್ಲಿ ಬಂದ ದೇವದತ್ ಪಡಿಕ್ಕಲ್ ಕೂಡ ಡಕ್ ಔಟ್ ಆಗಿ ನಿರಾಸೆ ಮೂಡಿಸಿದರು. ಆ ನಂತ್ರ ಕ್ರೀಸ್​ಗೆ ಬಂದ ಕಿಂಗ್ ವಿರಾಟ್ ಕೊಹ್ಲಿ 12 ಬಾಲ್​ಗಳನ್ನ ಎದುರಿಸಿ ಕೇವಲ 5 ರನ್​ಗಳಿಗೆ ಪೆವಿಲಿಯನ್ ಸೇರಿದ್ರು. ಇನ್ನು ಐದನೇ ಕ್ರಮಾಂಕದಲ್ಲಿ ಮೈದಾನಕ್ಕೆ ಬಂದ ರಿಷಭ್ ಪಂತ್ ಕೊಂಚ ಭರವಸೆ ಮೂಡಿಸಿದ್ರು. ಒಂದ್ಕಡೆ ಕೆಎಲ್ ರಾಹುಲ್ ಮತ್ತೊಂದ್ಕಡೆ ಪಂತ್ ಇಬ್ಬರೂ ಕೂಡ ಆಡ್ತಿದ್ರಿಂದ ದೊಡ್ಡ ಮೊತ್ತದ ರನ್ ಗಳಿಸೋ ನಿರೀಕ್ಷೆ ಮೂಡಿಸಿದ್ರು. ಬಟ್ ಆಗ್ಲೇ ನೋಡಿ ನಡೆದಿದ್ದು ಮೋಸದಾಟ.

ಥರ್ಡ್ ಅಂಪೈರ್ ವಿವಾದಾತ್ಮಕ ತೀರ್ಪಿಗೆ ರಾಹುಲ್ ಔಟ್!

ಸಾಲು ಸಾಲು ವಿಕೆಟ್​ಗಳು ಉರುಳಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಭರವಸೆಯ ಆಟಗಾರನಾಗಿ ಕಂಡಿದ್ದೇ ಕೆಎಲ್ ರಾಹುಲ್. ಉತ್ತಮ ಲಯದಲ್ಲಿ ಕಾಣಿಸಕೊಂಡಿದ್ದ ಕೆಎಲ್ ರಾಹುಲ್ ಅವರಿಂದ ಬಿಗ್ ಇನ್ನಿಂಗ್ಸ್‌ ನಿರೀಕ್ಷೆ ಮಾಡಲಾಗಿತ್ತು. ಭಾರತದ ಮೊದಲ ಇನ್ನಿಂಗ್ಸ್‌ನ 23ನೇ ಓವರ್‌ನಲ್ಲಿ ಮಿಚೆಲ್ ಸಾರ್ಕ್‌ ಬೌಲಿಂಗ್‌ನಲ್ಲಿ ಕೆಎಲ್ ರಾಹುಲ್ 26 ರನ್‌ಗಳಿಗೆ ಔಟಾದ್ರು. ಔಟ್ ಆದ್ರು ಅನ್ನೋದಕ್ಕಿಂತ ಮೋಸದಿಂದ ಔಟ್ ಮಾಡಿದ್ರು ಅಂದ್ರೇನೇ ಕರೆಕ್ಟ್ ಅನ್ಸುತ್ತೆ. ಮಿಚೆಲ್ ಸಾರ್ಕ್‌ ಬೌಲಿಂಗ್‌ನಲ್ಲಿ ಕೆಎಲ್ ರಾಹುಲ್ ಡಿಫೆಂಡ್​ಗೆ ಮುಂದಾದ್ರು. ಆದರೆ ಚೆಂಡು ಮಿಸ್​ ಆಗಿ ನೇರವಾಗಿ ಕೀಪರ್​ ಕೈ ಸೇರಿತ್ತು. ಆದರೆ ಆಸೀಸ್​ ಆಟಗಾರರು ಚೆಂಡು ಬ್ಯಾಟ್‌ಗೆ ತಾಗಿದೆ ಎಂದು ಕ್ಯಾಚ್ ಔಟ್​ಗೆ ಮನವಿ ಮಾಡಿದರು. ಬಟ್ ಫೀಲ್ಡ್ ಅಂಪೈರ್‌ ರಿಚರ್ಡ್​ ಕ್ಯಾಟಲ್​ಬರೋ ಇದನ್ನ ತಿರಸ್ಕರಸಿದ್ರು. ಈ ವೇಳೆ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್​ ಡಿಆರ್​ಎಸ್​ ತೆಗೆದುಕೊಂಡರು.

ಎಲ್ಲಾ ಆಂಗಲ್ ಗಳಲ್ಲಿ ಚೆಕ್ ಮಾಡದೇ ಔಟ್ ಕೊಟ್ಟ ಥರ್ಡ್ ಅಂಪೈರ್!

ಇಲ್ಲೇ ನೋಡಿ ಆಗಿದ್ದು ಎಡವಟ್ಟು. ಥರ್ಡ್ ಅಂಪೈರ್ ಚೆಂಡು ಬ್ಯಾಟ್ ಪ್ಯಾಡ್‌ಗೆ ತಾಗಿತ್ತೋ ಅಥವಾ ಬಾಲ್‌ಗೆ ತಗುಲಿತ್ತೋ ಅನ್ನೋದನ್ನ ನೋಡ್ಬೇಕಿತ್ತು. ಸ್ನಿಕೋಮೀಟರ್‌ನಲ್ಲಿ ಶಬ್ಧ ಎಲ್ಲಿಂದಲೋ ಬಂದಿರುವುದು ಸ್ಪಷ್ಟವಾಗಿ ಕೇಳಿಸಿತು. ಥರ್ಡ್ ಅಂಪೈರ್ ನೋಡಿದ ರಿಪ್ಲೇನಲ್ಲಿ ಬ್ಯಾಟ್ ಪ್ಯಾಡ್ ಹತ್ತಿರ ಇದೆಯೋ ಇಲ್ಲವೋ ಅನ್ನೋದು ಕ್ಲಿಯರ್ ಆಗಿ ಕಾಣ್ತಿರಲಿಲ್ಲ. ಯಾಕಂದ್ರೆ ಸ್ಟೇಡಿಯಮ್​ನಲ್ಲಿ ಕಡಿಮೆ ಕ್ಯಾಮೆರಾಗಳಿದ್ದವು. ಹೀಗಾಗಿ ಹೆಚ್ಚಿನ ಆಂಗಲ್‌ಗಳಿಂದ ರಾಹುಲ್ ಔಟಾ ಅಥವಾ ನಾಟೌಟಾ ಎಂದು ಪರಿಶೀಲಿಸೋಕೆ ಸಾಧ್ಯವಾಗಲಿಲ್ಲ. ಬಟ್ ದೂರದಿಂದ ನೋಡಿದ್ರೆ ಚೆಂಡು ಬ್ಯಾಟ್‌ಗೆ ಬಡಿದ ರೀತಿ ಕಾಣಿಸುತ್ತಿತ್ತು. ಹೀಗಾಗಿ ಥರ್ಡ್ ಅಂಪೈರ್ ರಾಹುಲ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ಈ ತೀರ್ಪು ಕೇಳಿದ ಕೂಡ್ಲೇ ಕೆಎಲ್ ರಾಹುಲ್ ಕೂಡ  ಶಾಕ್ ಆದ್ರು. ಯಾಕಂದ್ರೆ ಅದು ಔಟಿಲ್ಲ ಅನ್ನೋದು ಅವ್ರಿಗೂ ಗೊತ್ತಿತ್ತು. ಬಟ್ ಅದನ್ನ ಪ್ರಶ್ನೆ ಮಾಡೋಕೂ ಆಗ್ದೇ ಮೈದಾನದಿಂದ ಹೊರಬಂದ್ರು. ಇದಾದ ಬಳಿಕ ಸೋಶಿಯಲ್ ಮೀಡಿಯಾಗಳಲ್ಲೂ ಥರ್ಡ್ ಅಂಪೈರ್ ವಿವಾದಾತ್ಮಕ ತೀರ್ಪಿಗೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಸಿಟ್ಟಾಗಿದ್ದಾರೆ.

ಅಸಲಿಗೆ ರಾಹುಲ್ ಆಸ್ಟ್ರೇಲಿಯನ್ನರ ಕಾಡೋಕೆ ಶುರು ಮಾಡಿದ್ರು. ಹೆಚ್ಚು ಬಾಲ್​ಗಳನ್ನ ಫೇಸ್ ಮಾಡಿದ್ರೂ ಕೂಡ ಕ್ರೀಸ್ ಕಚ್ಚಿ ದೊಡ್ಡ ಇನ್ನಿಂಗ್ಸ್​ನ ನಿರೀಕ್ಷೆ ಮೂಡಿಸಿದ್ರು. ಈ ಹಿಂದಿನ ತಪ್ಪುಗಳನ್ನು ಮಾಡದೆ ಜವಾಬ್ದಾರಿಯುತ ಇನ್ನಿಂಗ್ಸ್ ಆಡುತ್ತಿದ್ರು. 74 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ನೆರವಿನಿಂದ 26 ರನ್ ಗಳಿಸಿದ್ರು. ಬಟ್ ಮೂರನೇ ಅಂಪೈರ್ ನೀಡಿದ ಕೆಟ್ಟ ತೀರ್ಪು, ಆಸ್ಟ್ರೇಲಿಯಾಕ್ಕೆ ವರವಾದರೆ, ಭಾರತಕ್ಕೆ ದುಬಾರಿಯಾಗಿದೆ. ಈ ಗೊಂದಲ, ನೋವು, ಹತಾಶೆ ನಡುವೆ  ಕೆಎಲ್ ರಾಹುಲ್ ಟೆಸ್ಟ್‌ನಲ್ಲಿ ಮೂರು ಸಾವಿರ ರನ್ ಪೂರೈಸಿದ್ದಾರೆ. ಟೆಸ್ಟ್‌ನಲ್ಲಿ ಇದುವರೆಗೆ 54 ಪಂದ್ಯಗಳನ್ನಾಡಿರುವ ರಾಹುಲ್, ಸುಮಾರು 34ರ ಸರಾಸರಿಯಲ್ಲಿ ಎಂಟು ಶತಕ ಹಾಗೂ 15 ಅರ್ಧಶತಕಗಳೊಂದಿಗೆ ಈ ದಾಖಲೆ ಮಾಡಿದ್ದಾರೆ.

ಇನ್ನು ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೊದಲ ಟೆಸ್ಟ್​ನ ಮೊದಲ ದಿನದ ಮೊದಲ ಸೆಷನ್​​ನಲ್ಲೇ ಟೀಂ ಇಂಡಿಯಾ ಎಡವಿದೆ. ಪಂದ್ಯದ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ನ್ಯೂಸ್​ ಪೇಪರ್​ಗಳಲೆಲ್ಲಾ ಕೊಹ್ಲಿಯೇ ರಾರಾಜಿಸಿದ್ದಾರೆ. ವಿರಾಟ್​ನ ಆಸಿಸ್​ ಮೀಡಿಯಾಗಳು ಹಾಡಿ ಹೊಗಳಿದ್ವು. ಬಟ್ ವಿರಾಟ್ ಕೂಡ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸದೇ ಇರೋದು ನಿರಾಸೆ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *