ಶಾರುಖ್ ಖಾನ್ ಪುತ್ರನ ಡ್ರಗ್ಸ್ ಕೇಸ್‌ಗೆ ಬಿಗ್ ಟ್ವಿಸ್ಟ್ – ಹಣ ವಸೂಲಿಗಾಗಿಯೇ ಆರ್ಯನ್ ಖಾನ್ ಬಂಧಿಸಿದ್ರಾ?
2021ರ ಅಕ್ಟೋಬರ್‌ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನ ಡ್ರಗ್ಸ್ ಸೇವನೆ ಪ್ರಕರಣದಡಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅರೆಸ್ಟ್ ಮಾಡಿತ್ತು. ಆದ್ರೆ ಆರ್ಯನ್ ಬಂಧನಕ್ಕೆ ಸಂಬಂಧಿಸಿ ಈಗ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಇಡೀ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: ಸಿನಿಮಾ ಆಫರ್ ನಿರಾಕರಿಸಿದ ಶಾರುಖ್ ಪುತ್ರ ಆರ್ಯನ್ ಖಾನ್
ಎನ್ಸಿಬಿ ಜೋನಲ್ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ, ನಟ ಶಾರುಖ್ ಖಾನ್ ಅವರಿಂದ ಹಣ ವಸೂಲಿ ಮಾಡುವುದಕ್ಕಾಗಿಯೇ ಡ್ರಗ್ಸ್ ಕೇಸ್‌ನಲ್ಲಿ ಆರ್ಯನ್‌ನನ್ನು ಬಂಧಿಸಿದ್ದಾರೆ ಎಂಬ ವಿಚಾರ ತನಿಖೆಯಿಂದ ಬಹಿರಂಗವಾಗಿದೆ. ಪ್ರೈವೇಟ್ ಡಿಟೆಕ್ಟಿವ್ ಅಂತಾ ಹೇಳಿಕೊಂಡಿದ್ದ ಕೆಪಿ ಗೋಸಾವಿ ಜೊತೆ ಸೇರಿ ಸಮೀರ್ ವಾಂಖೆಡೆ, ಕಿಂಗ್ ಖಾನ್ ಶಾರುಖ್ ಕುಟುಂಬದಿಂದ 25 ಕೋಟಿ ರೂಪಾಯಿ ವಸೂಲಿಗೆ ಮುಂದಾಗಿದ್ದರಂತೆ. ಮಾತುಕತೆ ಬಳಿಕ 18 ಕೋಟಿ ರೂಪಾಯಿಗೆ ಒಪ್ಪಿಕೊಂಡಿದ್ದರಂತೆ. ಈ ಎಲ್ಲಾ ಸಂಗತಿಗಳು ಸಿಬಿಐನ ಎಫ್ಐಆರ್‌ನಲ್ಲಿ ದಾಖಲಾಗಿದೆ. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು, ಈಗಾಗಲೇ ಎನ್ಸಿಬಿ ಜೋನಲ್ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ ವಿರುದ್ಧ ಕೇಸ್ ದಾಖಲಿಸಿದೆ. ಇನ್ನು ಶಾರುಖ್ ಪುತ್ರನ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲದೇ ಇರುವುದರಿಂದ ಕೋರ್ಟ್ ಕೂಡ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಿದೆ.