ದರ್ಶನ್ ಮ್ಯಾಟ್ರಲ್ಲಿ ತಲೆ ಹಾಕಬೇಡ – ಧನ್ವೀರ್‌ಗೆ ಖಾಕಿ ಖಡಕ್ ವಾರ್ನಿಂಗ್
ನರಕ ದರ್ಶನ, ಬಳ್ಳಾರಿಗೆ ದಾಸ ಶಿಫ್ಟ್?

ದರ್ಶನ್ ಮ್ಯಾಟ್ರಲ್ಲಿ ತಲೆ ಹಾಕಬೇಡ – ಧನ್ವೀರ್‌ಗೆ ಖಾಕಿ ಖಡಕ್ ವಾರ್ನಿಂಗ್ನರಕ ದರ್ಶನ, ಬಳ್ಳಾರಿಗೆ ದಾಸ ಶಿಫ್ಟ್?

ದರ್ಶನ್ ರೇಣುಕಾಸ್ವಾಮಿ ಕೇಸ್‌ನಲ್ಲಿ ಮತ್ತೆ ಜೈಲಿಗೆ ಸೇರಿದ್ದಾರೆ.. ಆದ್ರೆ ದರ್ಶನ್ ಜೀವನ ರೇಣುಕಾಸ್ವಾಮಿ ಕೇಸ್ ಆಗೋ ಮುಂಚೆ ತುಂಬಾ ಚೆನ್ನಾಗಿತ್ತು.. ಅವರದ್ದೇ ಒಂದು ಗ್ಯಾಂಗ್ ಕಟ್ಟಿಕೊಂಡಿದ್ರು. ಅವರ ಜೊತೆ ಜಾಲಿ ರೈಡ್ ಮಾಡುತ್ತಿದ್ದರು, ಪಾರ್ಟಿ ಮಾಡುತ್ತಿದ್ದರು.. ಇವರನ್ನ ನೋಡಿದವರು ಇದ್ರೆ ದರ್ಶನ್ ತರ ಇರಬೇಕು ಜೀವನ ಅಂತ ಅಂದ್ಕೊಳ್ಳುತ್ತಿದ್ದರು.. ಆದ್ರೆ ದರ್ಶನ್‌ಗೆ ಕಷ್ಟ ಬಂದಾಗ ಅವರ ಜೊತೆ ಯಾರು ಕೂಡ ಇರಲಿಲ್ಲ.. ಜೊತೆಗೆ ಊಟ ಮಾಡಿ, ಕುಡಿದು ಎಂಜಾಯ್ ಮಾಡಿದವರು ಕಣ್ಣಿಗೆ ಕಾಣಿಸಲೇ ಇಲ್ಲ.. ಆದ್ರೆ ಧನ್ವೀರ್ ಮಾತ್ರ ದರ್ಶನ್ ಜೊತೆ ತಮ್ಮನ ತರ ನಿಂತಿದ್ರು. ವಿಜಯಲಕ್ಷ್ಮೀ ಜೊತೆಯಲ್ಲೇ ಇದ್ದು ಸಾಥ್ ಕೊಡುತ್ತಿದ್ದರು.. ಹೋದ್ ವರ್ಷ ದರ್ಶನ್‌ ಈ ಕೇಸ್‌ನಲ್ಲಿ ಜೈಲು ಸೇರಿದ ಟೈಂನಿಂದಲೂ ಜೊತೆಗಿದ್ರು. ವಿಜಯಲಕ್ಷ್ಮೀ ಜೊತೆ ಜೈಲಿಗೆ ಹೋಗಿ ಭೇಟಿ ಮಾಡುವುದು, ಜೈಲಿನಿಂದ ರಿಲೀಸ್‌ ಆದಾಗ ದರ್ಶನ್‌ ಅವರನ್ನು ಧನ್ವೀರ್‌ ಅವರೇ ಬಳ್ಳಾರಿ ಜೈಲಿಂದ ಕರೆ ತಂದಿದ್ದರು. ನಂತರವೂ ದರ್ಶನ್‌ ಹೋದಲ್ಲಿ ಬಂದಲ್ಲಿ ಕೂಡ ಧನ್ವೀರ್‌ ಜೊತೆಯಲ್ಲೇ ಸಾಥ್‌ ನೀಡಿದ್ದರು.. ಇತ್ತೀಚೆಗೆ ದರ್ಶನ್‌ ಅವರೊಂದಿಗೆ ವಿವಿಧ ದೇವಸ್ಥಾನಗಳಿಗೆ ಹಾಗೂ ಕೋರ್ಟ್‌ ವಿಚಾರಣೆ ವೇಳೆಯೂ ಜೊತೆಯಲ್ಲೇ ಇದ್ದರು. ಮೊನ್ನೆ ಬೇಲ್ ಕ್ಯಾನ್ಸಲ್ ಆದಾಗ ಕೂಡ ದರ್ಶನ್ ಜೊತೆಯಲ್ಲೇ ಧನ್ವೀರ್ ಇದ್ದು ಈ ವೇಳೆ ಪೊಲೀಸರು ಧನ್ವೀರ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.

 ದರ್ಶನ್ ವಿಷ್ಯಕ್ಕೆ ತಲೆ ಹಾಕಬೇಡ ಧನ್ವೀರ್‌ಗೆ ವಾರ್ನಿಂಗ್

ಸುಪ್ರೀಂನಿಂದ ಬೇಲ್ ಕ್ಯಾನ್ಸಲ್ ಆದಾಗ ದರ್ಶನ್ ಜೊತೆಯಲ್ಲಿ ಧ್ವನೀರ್ ಇದ್ರು.  ಪೊಲೀಸರು ದರ್ಶನ್‌ ಅವರನ್ನು ಅರೆಸ್ಟ್‌ ಮಾಡಲು ವಿಜಯಲಕ್ಷ್ಮೀ ಫ್ಲಾಟ್ ಹತ್ರ ಹೋಗಿದ್ದರು. ಈ ಟೈಂನಲ್ಲಿ ದರ್ಶನ್‌ ಧನ್ವೀರ್‌ನನ್ನ ಪೊಲೀಸರ ಹತ್ರ ಮಾತಾಡಿಕೊಂಡು ಬಾ ಅಂತ ಕಳುಹಿಸಿದ್ದಾರೆ.. ಸ್ವಲ್ಪ ಟೈಂ ಕೊಡಿ ಅಂತ ಕೇಳುವುದ್ದಕ್ಕೆ ಇರಬಹುದು. ಆಗ ಧನ್ವೀರ್‌ ಜೊತೆ ಪೊಲೀಸರು ಮಾತನಾಡೋಕೆ ಹೋದಾಗ ಪೊಲೀಸರು ಧನ್ವೀರ್‌ಗೆ ನೇರವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ನೀನು ಈ ವಿಚಾರಕ್ಕೆ ತಲೆ ಹಾಕಬೇಡ.  ಈ ವಿಷ್ಯ ಬಂದ್ರೆ  ನಿನ್ನ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ” ಎಂದು ಪೊಲೀಸರು ಖಡರ್‌ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ. ನಂತರ ಧನ್ವೀರ್‌ ಸುಮ್ಮನಾಗಿ ಒಳಗೆ ಹೋಗಿ ಆ ವಿಷಯ ಮುಟ್ಟಿಸಿದ್ದರು ಎನ್ನಲಾಗಿದೆ.

 ಡಿ ಬಾಸ್ ಫ್ಯಾನ್ಸ್ ಮನಸ್ಸು ಗೆದ್ದಿದ್ದ ಧನ್ವೀರ್

ಧನ್ವೀರ್‌ನನ್ನೇ ಬೆಳೆಸಿದ್ದೇ  ದರ್ಶನ್‌..  ಧನ್ವೀರ್  ಸಿನಿಮಾಗಳಿಗೆ ದರ್ಶನ್‌ ಸಾಥ್‌ ನೀಡಿದ್ದರು. ಈ ಕೇಸ್‌ನಲ್ಲಿ ಜೈಲು ಸೇರಿದ ಕಷ್ಟದ ಸಂದರ್ಭದಲ್ಲೂ ದರ್ಶನ್‌ ಹಾಗೂ ಅವರ ಕುಟುಂಬದೊಂದಿಗೆ ಧನ್ವೀರ್‌ ನಿಂತಿದ್ದರು. ಇದನ್ನು ನೋಡಿ ಡಿಬಾಸ್‌ ಫ್ಯಾನ್ಸ್‌ ಕೂಡ ಧನ್ವೀರ್‌ ಅವರನ್ನ ಮೆಚ್ಚಿಕೊಂಡಿದ್ರು.. ದರ್ಶನ್ ತಮ್ಮ ಧನ್ವೀರ್‌ ಅಂತ ಕರೆದಿದ್ರು.. ಆದ್ರೆ ಈಗ ದರ್ಶನ್ ಕೂಡ ಜೈಲಿಗೆ ಹೋಗಿದ್ದು, ಸದ್ಯಕ್ಕಂತೂ ರಿಲೀಸ್ ಆಗಲ್ಲ. ಹೀಗಾಗಿ ಧನ್ವೀರ್‌ ಒಬ್ಬಂಟಿಗನಾಗಿದ್ದಾನೆ. ಪೊಲೀಸರು ಕೂಡ ದರ್ಶನ್ ವಿಷ್ಯದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದು, ಸುಪ್ರೀಂ ಕೋರ್ಟ್‌ ಆದೇಶವನ್ನ ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ. ಹೀಗಾಗಿ ದರ್ಶನ ವಿಷ್ಯದಲ್ಲಿ ನೀನು ತಲೆ ಹಾಕಬೇಡ ಅಂತ ಧನ್ವೀರ್‌ಗೆ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ.

 15 ನಿಮಿಷ ಟೈಮ್‌, ಬಂದು ಜೀಪ್‌ ಹತ್ತಬೇಕು ಅಷ್ಟೇ..!

ಇನ್ನು ಧನ್ವೀರ್ ನಂತರ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಇಲ್ಲ ನಾವು ನಮ್ಮ ವಕೀಲರ ಜೊತೆ ಬರ್ತೀವಿ ಎಂದು ಪೊಲೀಸರಿಗೆ ಹೇಳಲು ಮುಂದಾದಾಗಲೂ ಅದಕ್ಕೂ ಪೊಲೀಸರು ಒಪ್ಪಿಲ್ಲ. ನೋ ವೇ ಚಾನ್ಸ್ ಇಲ್ಲ.. 15 ನಿಮಿಷ ಟೈಮ್‌ ಅಷ್ಟೇ, ಬಂದು ಜೀಪ್‌ ಹತ್ತಬೇಕು, ಇಲ್ಲದಿದ್ದರೆ ನಾವೇ ನಮ್ಮ ರೀತಿಯಲ್ಲಿ ಕರೆದುಕೊಂಡು ಹೋಗ್ತೀವಿ ಎಂದು ಖಾಕಿ ಸ್ಟೈಲಲ್ಲಿ ಹೇಳಿದ್ದರು. ಆಮೇಲೆ ಇದು ದೊಡ್ಡಕ್ಕೆ ಆಗುತ್ತೆ ಅಂತ ಗೊತ್ತಾಗುತ್ತಿದ್ದಂತೆ  ದರ್ಶನ್‌ ಸೈಲೆಂಟ್ ಆಗಿ ಪೊಲೀಸರು ಗಾಡಿ ಹತ್ತಿದ್ದಾರಂತೆ.

 ಬಳ್ಳಾರಿಯಲ್ಲಿ ನರಕ ‘ದರ್ಶನ’

ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿರೋ ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್  ಆಗೋ ಸಾಧ್ಯತೆ ಇದೆ. ಕಳೆದ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ ರೌಡಿಗಳ ಜೊತೆ ಸಂಪರ್ಕ ಬೆಳಸಿ ರಾಜಾತಿಥ್ಯ ಪಡೆದಿದ್ದಕ್ಕೆ ಸಾಕ್ಷಿ ಸಿಕ್ಕಿತ್ತು. ಸ್ಪೆಷಲ್​ ಟ್ರೀಟ್​ಮೆಂಟ್​ ಕೊಡದಂತೆ ಸುಪ್ರೀಂ ಕೋರ್ಟ್​ ಕೂಡ ಖಡಕ್​ ವಾರ್ನಿಂಗ್​ ನೀಡಿದ್ದು, ಈ ಬಾರಿಯೂ ಮತ್ತೆ ಅದೇ ರೀತಿ ಆಗಬಾರದೆಂದು ಅಧಿಕಾರಿಗಳು ಅಲರ್ಟ್​ ಆಗಿದ್ದಾರೆ. ಈ ಹಿಂದೆ ಆದ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಜೈಲಾಧಿಕಾರಿಗಳಿಗೆ ಸೂಚನೆ ಸಿಕ್ಕಿದೆ. ಇನ್ನೊಂದೆಡೆ ದರ್ಶನ್​ನ ಮತ್ತೆ ಬಳ್ಳಾರಿಗೆ ಶಿಫ್ಟ್​ ಮಾಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.    ಒಂದ್ವೇಳೆ ಕೋರ್ಟ್‌ ಆಯಾ ಜೈಲಿಗೆ ಕಳಿಸಿ ಅಂತ ಆದೇಶ ಕೊಟ್ಟಿದ್ದೇ ಆದ್ರೆ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಲ್ಲೇ ಇರ್ತಾರೆ. ಯಾಕಂದ್ರೆ ಮೊದಲು ಆಕೆ ಇಲ್ಲೇ ಇದ್ದಿದ್ದು.  ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದು, ಅಲ್ಲಿ ಕನಿಷ್ಠ ಸೌಲಭ್ಯ ಇಲ್ಲದೆ ದರ್ಶನ ಶಿಕ್ಷೆ ಅನುಭವಿಸಬೇಕಿದೆ..

Kishor KV