100ನೇ ಟೆಸ್ಟ್ ಪಂದ್ಯದಲ್ಲಿ 200 ರನ್ ಬಾರಿಸಿದ ವಾರ್ನರ್ – ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ
ಸಂಭ್ರಮದ ಜಂಪ್... ಕಾಲು ನೋವಿಂದ ಬಳಲಿದ ವಾರ್ನರ್.. ಡಬಲ್ ಸೆಂಚುರಿ ವೀರನ ಕಾಲೆಳೆದ ನೆಟ್ಟಿಗರು

ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ನಡೀತಿರೋ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯ ವಾರ್ನರ್ ಪಾಲಿಗೆ 100ನೇ ಟೆಸ್ಟ್ ಪಂದ್ಯವಾಗಿದೆ.
ಇದನ್ನೂ ಓದಿ: ಬಾಂಗ್ಲಾ ಬೌಲರ್‌ಗೆ ವಿರಾಟ್ ಕೊಹ್ಲಿಯಿಂದ ಸ್ಪೆಷಲ್ ಗಿಫ್ಟ್
ಕಳೆದ ಕೆಲ ತಿಂಗಳುಗಳಿಂದ ಫಾರ್ಮ್ ಕಳೆದುಕೊಂಡು ಟೀಕೆಗೊಳಗಾಗಿದ್ದ ವಾರ್ನರ್ ತಮ್ಮ 100ನೇ ಪಂದ್ಯದಲ್ಲೇ ದ್ವಿಶತಕ ಬಾರಿ ಬ್ಯಾಟ್ ಮೂಲಕವೇ ಉತ್ತರ ಕೊಟ್ರು. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ವಾರ್ನರ್ ಸರಿಗಟ್ಟಿದ್ದಾರೆ. ಅಲ್ಲದೇ ರಿಕ್ಕಿ ಪಾಂಟಿಂಗ್ ಸಾಧನೆಯನ್ನೂ ವಾರ್ನರ್ ಸರಿಗಟ್ಟಿದ್ದಾರೆ. ಈ ಹಿಂದೆ ಸಚಿನ್ ಮತ್ತು ಪಾಂಟಿಂಗ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ರು.
ಈ ಸಂಭ್ರಮಾಚರಣೆಯಲ್ಲಿ ವಾರ್ನರ್ ಎಡವಟ್ಟು ಮಾಡಿಕೊಂಡಿದ್ದಾರೆ. ದ್ವಿಶತಕದ ಖುಷಿಯಲ್ಲಿ ತಮ್ಮ ಎಂದಿನ ಸ್ಟೈಲ್‍ನಲ್ಲಿ ಹಾರಿ ಸಂಭ್ರಮಿಸುತ್ತಿದ್ದಂತೆ ಕಾಲು ನೋವು ಮಾಡಿಕೊಂಡಿದ್ದಾರೆ. ಇದರಿಂದಾಗಿ ಕಡೆಗೆ ವಾರ್ನರ್‌ರನ್ನು ಫಿಸಿಯೋ ಕೈ,ಕೈ ಹಿಡಿದು ಪೆವಿಲಿಯನ್‍ಗೆ ಕರೆ ತರುವಂತಾಯಿತು. ಈ ವೀಡಿಯೋ ಇದೀಗ ವೈರಲ್ ಆಗುತ್ತಿದ್ದು, ಸಂಭ್ರಮದ ಜಂಪ್ ಬೆಲೆ ತೆರುವಂತಾಗಿದೆ ಎಂಬ ಮಾತು ನೆಟ್ಟಿಗರಿಂದ ಕೇಳಿ ಬರುತ್ತಿದೆ.
A double century for David Warner!
But his #OhWhatAFeeling jump comes at a cost! 😬#AUSvSA | @Toyota_Aus pic.twitter.com/RqJLcQpWHa
— cricket.com.au (@cricketcomau) December 27, 2022