ನಂದಿನಿ ಉತ್ಪನ್ನಗಳಿಗೂ ತಟ್ಟಿದ ಯುದ್ದದ ಎಫೆಕ್ಟ್!‌ – ಮಾರುಕಟ್ಟೆಗೆ ಬರಲ್ವಾ ನಂದಿನಿ ಉತ್ಪನ್ನ?

ನಂದಿನಿ ಉತ್ಪನ್ನಗಳಿಗೂ ತಟ್ಟಿದ ಯುದ್ದದ ಎಫೆಕ್ಟ್!‌ – ಮಾರುಕಟ್ಟೆಗೆ ಬರಲ್ವಾ ನಂದಿನಿ ಉತ್ಪನ್ನ?

ನಂದಿನಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್.‌ ಬೆಂಗಳೂರು, ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶಗಳಿಗೆ ಪೂರೈಕೆ ಆಗುವ ನಂದಿನಿ ಬ್ರ್ಯಾಂಡ್ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ರುಚಿ, ಶುಚಿ ವಿಚಾರದಲ್ಲೂ  ವಿಶ್ವಾಸಾರ್ಹತೆಯನ್ನು ಕಂಪನಿ ಉಳಿಸಿಕೊಂಡಿದೆ. ಆದ್ರೀಗ ನಂದಿನಿ ಉತ್ಪನ್ನ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸಿಗೋದು ಡೌಟ್‌ ಎನ್ನಲಾಗ್ತಿದೆ.

ಇದನ್ನೂ ಓದಿ: ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಕ್ಯಾಬ್‌ ಚಾರ್ಜ್ 285ರೂ. ಅಲ್ಲ.. 5,950ರೂ.! – ಕನ್ನಡ ಗೊತ್ತಿಲ್ಲದವರೇ ಈ ಕ್ಯಾಬ್ ಡ್ರೈವರ್‌ ಟಾರ್ಗೆಟ್!

ಹೌದು, ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದದ ಎಫೆಕ್ಟ್‌  ಕೆಎಂಎಫ್ ಗೂ ತಟ್ಟಿದೆ.  ಕಮರ್ಷಿಯಲ್ LPG ಸಿಲಿಂಡರ್ ಕೊರತೆಯ ಪರಿಣಾಮ ನಂದಿನಿ ಹಾಲು ಉತ್ಪನ್ನಗಳ ಮೇಲೆ ಬಿದ್ದಿದೆ. ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆಯೇ ಇದಕ್ಕೆ ಕಾರಣವಾಗಿದ್ದು, ಇದೀಗ ಕೆಎಂಎಫ್ ಕೂಡ ಈ ಸಮಸ್ಯೆ ಎದುರಿಸುವಂತಾಗಿದೆ.

ನಂದಿನಿ ಉತ್ಪನ್ನ ತಯಾರಿಸಲು ಕೆಎಂಎಫ್‌ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಸಿಲಿಂಡರ್ ಗಳನ್ನು ಬಳಸುತ್ತಿದೆ. ಯುದ್ದದ ಎಫೆಕ್ಟ್‌ನಿಂದಾಗಿ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅಗತ್ಯ ಪ್ರಮಾಣದಲ್ಲಿ ಎಲ್‌ಪಿಜಿ ಸಿಲಿಂಡರ್‌ ಸಿಗದೇ ಇರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಗ್ಯಾಸ್ ಸಿಲಿಂಡರ್ ಗಳ ಸಂಗ್ರಹವು ಇನ್ನೆರೆಡು ದಿನಗಳಿಗೆ ಲಭ್ಯವಿದ್ದು, ಇವು ಖಾಲಿಯಾದ ಬಳಿಕವೂ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಾಗದಿದ್ದಲ್ಲಿ, ನಂದಿನ ಬ್ರ್ಯಾಂಡ್ ನ ಹಲವು ಉತ್ಪನ್ನಗಳ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಈ ಸಮಸ್ಯೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದ್ದು, ಸೂಕ್ತ ಕ್ರಮಕೈಗೊಳ್ಳಲು ಮನವಿ ಮಾಡಲಾಗಿದೆ. ಇನ್ನೆರೆಡು ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದೇ ಇದ್ದರೆ, ನಂದಿನ ಉತ್ಪನ್ನಗಳ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *