ರಾಕಿಂಗ್‌ ಸ್ಟಾರ್‌ ಯಶ್ ಜೊತೆ ‘ಟಾಕ್ಸಿಕ್’ನಲ್ಲಿ ನಟಿಸಬೇಕಾ? –  ಇಲ್ಲಿದೆ ಅವಕಾಶ!

ರಾಕಿಂಗ್‌ ಸ್ಟಾರ್‌ ಯಶ್ ಜೊತೆ ‘ಟಾಕ್ಸಿಕ್’ನಲ್ಲಿ ನಟಿಸಬೇಕಾ? –  ಇಲ್ಲಿದೆ ಅವಕಾಶ!

ಸ್ಯಾಂಡಲ್​ವುಡ್​ ನಟ ರಾಕಿಂಗ್​ ಸ್ಟಾರ್​ ಯಶ್ ನಟನೆಯ​​ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್​. ಮುಂದಿನ ತಿಂಗಳಲ್ಲಿ ಟಾಕ್ಸಿಕ್ ಶೂಟಿಂಗ್ ಆರಂಭಗೊಳ್ಳಲಿದೆ. ಈ​ ಬೆನ್ನಲ್ಲೇ ಫ್ಯಾನ್ಸ್​ಗೆ ಟಾಕ್ಸಿಕ್ ಚಿತ್ರತಂಡ ಸಿಹಿ ಸುದ್ದಿಯೊಂದು ನೀಡಿದೆ. ನಟ ರಾಕಿಂಗ್​ ಸ್ಟಾರ್​ ಯಶ್​ ಅವರ ಜೊತೆ ನಟಿಸುವ ಅವಕಾಶವನ್ನು ಟಾಕ್ಸಿಕ್ ಟೀಮ್ ಕಲ್ಪಿಸಿ ಕೊಡುತ್ತಿದೆ.

ಇದನ್ನೂ ಓದಿ: ನಟ ಶಿವರಾಜ್‌ ಕುಮಾರ್ ನಟಿಸಿರುವ ಸಿನಿಮಾಗಳಿಗೆ ನಿರ್ಬಂಧ ಹೇರಿ, ಬಿಜೆಪಿ ದೂರು ದಾಖಲು!

ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ನಟಿಸಲು ಯಾರಿಗೆಲ್ಲ ಅವಕಾಶವಿದೆ ಎನ್ನುವುದನ್ನು ಅವರು ಬರೆದುಕೊಂಡಿದ್ದಾರೆ. ಹಾಗಾಗಿ ಅವರ ರೂಲ್ಸ್ ಫಾಲೋ ಮಾಡಿ, ಯಾರು ಬೇಕಾದರೂ ಆಡಿಷನ್ ನಲ್ಲಿ ಭಾಗಿಯಾಗಬಹುದು.

KVN ಟ್ವೀಟರ್​ ಖಾತೆಯಲ್ಲಿ ಚಿತ್ರ ತಂಡ ಆಡಿಷನ್​ ಪೋಸ್ಟ್​ವೊಂದನ್ನು ಶೇರ್ ಮಾಡಿದೆ. 25 ರಿಂದ 75 ವರ್ಷದ ಪುರುಷರಿಗೆ ಆದ್ಯತೆ. 12 ರಿಂದ 16 ವಯಸ್ಸಿನ ಮಕ್ಕಳಿಗೆ ಅವಕಾಶ ಇದೆ. 23 ರಿಂದ 65 ವಯಸ್ಸಿನ ಮಹಿಳೆಯರು ಆಡಿಷನ್​ ಕೊಡಬಹುದು. ಮಾರ್ಚ್ 25ರಂದು ತಮ್ಮ ಬಗ್ಗೆ ಯಾವುದೇ ಭಾಷೆಯಲ್ಲಾದರೂ ಒಂದು ನಿಮಿಷದ ಕಿರು ಪರಿಚಯದ ವಿಡಿಯೋಗಳನ್ನು ಕಳಿಸಲು ಕೊನೆಯ ದಿನ ಎಂದು ಟಾಕ್ಸಿಕ್ ತಂಡ ಕಾಸ್ಟಿಂಗ್ ಕಾಲ್ ಕರೆದಿದೆ.

ಸದ್ಯ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನಟ ರಾಕಿಂಗ್​ ಸ್ಟಾರ್​ ಯಶ್​ ಅವರ ಜೊತೆ ಅಭಿನಯಿಸಲು ಸಾಕಷ್ಟು ಫ್ಯಾನ್ಸ್​ ವಿಡಿಯೋಗಳನ್ನು ಟಾಕ್ಸಿಕ್ ಟೀಮ್​ಗೆ ಕಳಿಸುತ್ತಿದ್ದಾರೆ. ಇನ್ನು, ಟಾಕ್ಸಿಕ್ಸ್​ ಸಿನಿಮಾಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್​ 10ಕ್ಕೆ ರಿಲೀಸ್​ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ.

Shwetha M