ಗೆಲ್ಲುವ ಲಕ್ಷ್ಮಣ್.. ಸೋಲುವ ಗಂಭೀರ್ – ಹೆಡ್ ಕೋಚ್ ಹುದ್ದೆಯಲ್ಲಿ ಶುರು ವಾರ್
BCCIನಲ್ಲಿ ನಡೆಯುತ್ತಾ ಸರ್ಜರಿ?

ಜಿಂಬಾಬ್ವೆ ವಿರುದ್ಧ ಭಾರತ ಟಿ-20ಐ ಸರಣಿ ಗೆದ್ಮೇಲೆ ಬಾರೀ ಚರ್ಚೆಯಲ್ಲಿರೋ ಹೆಸರು ವಿವಿಎಸ್ ಲಕ್ಷ್ಮಣ್. ಗೌತಮ್ ಗಂಭೀರ್ ಅವ್ರ ಆಬ್ಸೆನ್ಸ್ನಲ್ಲಿ ಹಂಗಾಮಿ ಕೋಚ್ ಆಗಿ ನೇಮಕವಾಗಿದ್ದ ವಿವಿಎಸ್ ಲಕ್ಷ್ಮಣ್ ಅಡಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಸತತ 2 ಸರಣಿಗಳಲ್ಲಿ ವೈಟ್ ವಾಶ್ ಆಗಿದ್ದ ಭಾರತ ಮೂರನೇ ಮ್ಯಾಚಲ್ಲಿ ಡಾಮಿನೇಷನ್ ಮಾಡಿ ಗೆದ್ಮೇಲೆ ಕೋಚ್ ಹುದ್ದೆ ಬಗ್ಗೆ ಬಾರೀ ಚರ್ಚೆಯಾಗ್ತಿದೆ. ಗಂಭೀರ್ಗಿಂತ ಲಕ್ಷ್ಮಣ್ ಬೆಟರ್ ಅಂತಿದ್ದಾರೆ.
ಇದನ್ನೂ ಓದಿ : ಲಂಕೆ ಗೆದ್ರಷ್ಟೇ WTC ಫೈನಲ್ – ಗಿಲ್ ಮುಂದೆ 9 ಪಂದ್ಯಗಳ ಟಾಸ್ಕ್!
ಕಳೆದ ಎರಡು ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಅತೀ ಹೆಚ್ಚು ಕಾಂಟ್ರವರ್ಸಿಯಾಗಿರೋದು, ವಿರೋಧ ಕೇಳಿ ಬರ್ತಿರೋದು, ಟ್ರೋಲ್ ಆಗಿರೋ ಹೆಸ್ರು ಅಂದ್ರೆ ಅದು ಗೌತಮ್ ಗಂಭೀರ್. ಸ್ಟಿಲ್ ಈಗ್ಲೂ ಕೂಡ ಗಂಭೀರ್ ನಿರ್ಧಾರಗಳ ಬಗ್ಗೆ ಸಾಕಷ್ಟು ಜನರಿಗೆ ವಿರೋಧಗಳಿವೆ. ಕೋಚ್ ಹುದ್ದೆಯಿಂದ ಕೆಳಗಿಳಿಸಿ ಅನ್ನೋ ಕೂಗು ಆಗಾಗ್ಗೆ ಕೇಳಿ ಬರ್ತಾನೇ ಇರುತ್ತೆ. ಈಗ ಜಿಂಜಾಬ್ವೆ ಸರಣಿ ಆದ್ಮೇಲೆ ಈ ಕೂಗು ಜಾಸ್ತಿಯಾಗಿದೆ. ಅದಕ್ಕೆ ಕಾರಣ ವಿವಿಎಸ್ ಲಕ್ಷ್ಮಣ್.
ಗಂಭೀರ್ ಮತ್ತು ಲಕ್ಷ್ಮಣ್ ನಡುವೆ ಬೆಸ್ಟ್ ಕೋಚ್ ವಾರ್!
2024ರ ಜುಲೈನಲ್ಲಿ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ಕೋಚ್ ಹುದ್ದೆಗೇರಿದ್ದು ಅವ್ರ ಅಂಡರ್ನಲ್ಲಿ ಭಾರತ ಎರಡು ಐಸಿಸಿ ಟ್ರೋಫಿಗಳನ್ನ ಗೆದ್ದಿದೆ. 2025ರ ಚಾಂಪಿಯನ್ಸ್ ಟ್ರೋಫಿ ಹಾಗೇ 2026ರ ಟಿ-20 ವಿಶ್ವಕಪ್. ಆದ್ರೂ ಕೂಡ ಸಾಕಷ್ಟು ಸರಣಿಗಳಲ್ಲಿ ಅವಮಾನಕರ ಸೋಲುಗಳನ್ನ ಕಂಡಿದೆ. ಮತ್ತೊಂದೆಡೆ ವಿವಿಎಸ್ ಲಕ್ಷ್ಮಣ್ ಭಾರತದ ಪರ ಸಾಕಷ್ಟು ಬಾರಿ ಹಂಗಾಮಿ ಕೋಚ್ ಆಗಿ ತಂಡವನ್ನ ಮುನ್ನಡೆಸಿದ್ದು ಅದ್ಭುತ ಫಲಿತಾಂಶಗಳನ್ನ ನೀಡಿದ್ದಾರೆ. ಇದೇ ಕಾರಣಕ್ಕೆ ವಿವಿಎಸ್ ಲಕ್ಷ್ಮಣ್ರನ್ನೇ ಫುಲ್ ಟೈಂ ಹೆಡ್ ಕೋಚ್ ಆಗಿ ನೇಮಕ ಮಾಡುವಂತೆ ಒತ್ತಾಯಗಳು ಜಾಸ್ತಿಯಾಗಿದೆ. ಹಾಗೇ ಇಬ್ಬರ ನೇತೃತ್ವದ ಫಲಿತಾಂಶಗಳನ್ನ ಕಂಪೇರ್ ಮಾಡೋ ಮೂಲಕ ಮನವಿ ಮಾಡ್ತಿದ್ದಾರೆ.
ಗಂಭೀರ್ & ಲಕ್ಷ್ಮಣ್ ರೆಕಾರ್ಡ್ಸ್!
ಗೌತಮ್ ಗಂಭೀರ್ ಅಡಿಯಲ್ಲಿ ಮೂರೂ ಮಾದರಿಯಲ್ಲಿ 95 ಪಂದ್ಯ
59 ಪಂದ್ಯಗಳಲ್ಲಿ ಗೆಲುವು, 29 ಪಂದ್ಯಗಳಲ್ಲಿ ಸೋಲು, 5 ಪಂದ್ಯ ರದ್ದು
ಗಂಭೀರ್ ನೇತೃತ್ವದಲ್ಲಿ ತಂಡದ ಗೆಲುವಿನ ಶೇಕಡಾವಾರು 62.11% ರಷ್ಟಿದೆ
ವಿವಿಎಸ್ ಲಕ್ಷ್ಮಣ್ ಅಡಿಯಲ್ಲಿ 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ
2022 ರ ಏಷ್ಯಾಕಪ್ ನಲ್ಲಿ ಸೂಪರ್ 4 ಹಂತಕ್ಕೆ ಮುನ್ನಡೆಸಿದ್ದ ಲಕ್ಷ್ಮಣ್
ಒಟ್ಟಾರೆ 23 ಪಂದ್ಯ ಆಡಿದ್ದು 18 ಗೆಲುವು, 4 ಸೋಲು, 1 ಪಂದ್ಯ ಡ್ರಾ
ಲಕ್ಷ್ಮಣ್ ಕೋಚ್ ಆಗಿದ್ದಾಗ ಗೆಲುವಿನ ಶೇಕಡಾವಾರು ಸುಮಾರು 78.3%
ವಿನ್ನಿಂಗ್ ಪರ್ಸೆಂಟೇಜ್ ಅಂತಾ ಬಂದ್ರೆ ಗಂಭೀರ್ಗೆ ಕಂಪೇರ್ ಮಾಡಿದ್ರೆ ವಿವಿಎಸ್ ಲಕ್ಷ್ಮಣ್ ಅವ್ರ ರೆಕಾರ್ಡ್ಸ್ ಚೆನ್ನಾಗಿ ಕಾಣ್ತಿದೆ. ಇದೇ ಕಾರಣಕ್ಕೆ ಗಂಭೀರ್ ಬದಲು ಲಕ್ಷ್ಮಣ್ ರನ್ನ ಫುಲ್ ಟೈಂ ಹೆಡ್ ಕೋಚ್ ಮಾಡಿ ಅನ್ನೋ ಒತ್ತಾಯಗಳಿವೆ. ಮತ್ತೊಂದೆಡೆ ಬಿಸಿಸಿಐನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಟರ್ಮ್ ಕೂಡ ಈ ವರ್ಷ ಸೆಪ್ಟೆಂಬರ್ನಲ್ಲಿ ಮುಗಿಯುತ್ತೆ. ಇನ್ನೂ ಒಂದು ವರ್ಷ ಕಾಂಟ್ರ್ಯಾಕ್ಟ್ ಕಂಟಿನ್ಯೂ ಮಾಡ್ಬೋದು. ಹಾಗೇನಾದ್ರೂ ಮಾಡದೇ ಇದ್ರೆ ಅವ್ರು ಹುದ್ದೆಯಿಂದ ಕೆಳಗಿಳೀಬೇಕು. ಹೀಗಾಗಿ 2027ಕ್ಕೆ ಟೀಮ್ ಇಂಡಿಯಾ ಹೊಸ ಮುಖ್ಯ ಆಯ್ಕೆದಾರನನ್ನ ಹುಡುಕಲಾಗ್ತಿದೆ. ಒಂದಷ್ಟು ಹೆಸರುಗಳು ಶಾರ್ಟ್ ಲಿಸ್ಟ್ ಆಗಿದೆ. ಟೀಂ ಇಂಡಿಯಾದಲ್ಲಿ ಪ್ಲೇಯರ್ಸ್ ಬದಲಾದಂತೆ ಸ್ಟಾಫ್ಸ್ ಕೂಡ ಚೇಂಜ್ ಆಗ್ತಿರ್ತಾರೆ. ಈಗ ಕೋಚ್ ಹುದ್ದೆ ವಿಚಾರದಲ್ಲಿ ಚರ್ಚೆಗಳು ನಡೀತಿವೆ.

ನೋಡಿರಿ

