ಬಿಜೆಪಿ, ಜೆಡಿಎಸ್  ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ? : ದೇವೇಗೌಡ್ರು, ಮೋದಿ ಸಾಹೇಬ್ರು ಮಾತಾಡ್ಕೊಂಡವ್ರೆ – ಪ್ರೀತಂ ಗೌಡ
ಜೆಡಿಎಸ್‌ಗೆ ಮತ ಹಾಕಿದರೂ ಬಿಜೆಪಿಗೆ ಹಾಕಿದಂತೆ!

ಬಿಜೆಪಿ, ಜೆಡಿಎಸ್  ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ? : ದೇವೇಗೌಡ್ರು, ಮೋದಿ ಸಾಹೇಬ್ರು ಮಾತಾಡ್ಕೊಂಡವ್ರೆ – ಪ್ರೀತಂ ಗೌಡಜೆಡಿಎಸ್‌ಗೆ ಮತ ಹಾಕಿದರೂ ಬಿಜೆಪಿಗೆ ಹಾಕಿದಂತೆ!

ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ರಚಾರದ ವೇಳೆ ರಾಜಕೀಯ ನಾಯಕರು ಮಾತಿನ ಅಬ್ಬರ ಜೋರಾಗಿಯೇ ಇದೆ. ಈ ಚುನಾವಣೆಯ ಫಲಿತಾಂಶದ ನಂತರ ಮತ್ತೆ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದ್ಯಾ? ಮತ್ತೆ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ ಅನ್ನೋ ಪ್ರಶ್ನೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಶಾಸಕ ಪ್ರೀತಂ ಗೌಡ ಅವರ ಹೇಳಿಕೆ.

ಇದನ್ನೂ ಓದಿ: ಮೋದಿ ನಾಗರ ಹಾವಾದರೆ ಸೋನಿಯಾ ಗಾಂಧಿ ವಿಷಕನ್ಯೆನಾ? – ಖರ್ಗೆ ಹೇಳಿಕೆಗೆ ಯತ್ನಾಳ್ ಟಾಂಗ್

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಹಾಸನ ಕ್ಷೇತ್ರವೂ ಒಂದು. ಇಲ್ಲಿ ಬಿಜೆಪಿಯ ಪ್ರೀತಂ ಗೌಡ ಮತ್ತು ಜೆಡಿಎಸ್ ನ ಸ್ವರೂಪ್ ಮಧ್ಯೆ ಪ್ರಬಲ ಪೈಪೋಟಿಯಿದೆ. ಚುನಾವಣಾ ಪ್ರಚಾರದ ವೇಳೆ  ಶಾಸಕ ಪ್ರೀತಂ ಗೌಡ ಚರ್ಚಾಸ್ಪದ ಹೇಳಿಕೆಯೊಂದನ್ನು ನೀಡಿದ್ದಾರೆ.  ಜೆಡಿಎಸ್​ಗೆ ಮತ ನೀಡಿದರೂ ಬಿಜೆಪಿಗೆ ನೀಡಿದಂತೆಯೇ, ಹಾಗಾಗಿ ಬಿಜೆಪಿಗೆ ಮತ ನೀಡಿ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಜೆಡಿಎಸ್‌ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಬಹುಮತ ಬರುವುದಿಲ್ಲ. ಈಗಾಗಲೇ ದೆಹಲಿಯಲ್ಲಿ ಮೋದಿ ಸಾಹೇಬ್ರು ಹಾಗೂ ದೇವೇಗೌಡ್ರು ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ನೀವು ಜೆಡಿಎಸ್‌ಗೆ ಮತ ಹಾಕಿದರೂ ಬಿಜೆಪಿಗೆ ಹಾಕಿದಂತೆ ಎಂದು ಜೆಡಿಎಸ್ ಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ.

ನೀವು ಹಾಸನದಿಂದ ಬೆಂಗಳೂರಿಗೆ ಹೋಗುವುದಾದರೆ ಬೆಳ್ಳೂರು ಕ್ರಾಸ್‌ ಮೇಲೆಯೇ ಹೋಗಬೇಕು. ಅದನ್ನು ಬಿಟ್ಟು ಮೈಸೂರು ಸುತ್ತಿಕೊಂಡು ಹೋಗುತ್ತೇನೆ ಎಂದರೆ ನಾನೇನು ಮಾಡಲು ಆಗಲ್ಲ. ಎಲ್ಲಾ ಹಳ್ಳದ ನೀರು ಹರಿದು ಸಮುದ್ರಕ್ಕೇ ಬರೋದು. ಹಾಗಾಗಿ ನೀವು ಸುತ್ತಾಡಿಕೊಂಡು ನನ್ನ ಬಳಿ ಬರುವುದಕ್ಕಿಂತ ನೇರವಾಗಿ ಬನ್ನಿ. ಜೆಡಿಎಸ್‌ ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಯಾಕೆಂದ್ರೆ ಈಗಾಗ್ಲೇ ದೇವೇಗೌಡ್ರು ಮತ್ತು ಮೋದಿ ಸಾಹೇಬ್ರು ಮಾತಾಡ್ಕೊಂಡಿದ್ದಾರೆ ಎಂದರು.

suddiyaana