ಕೆಲವು ಮತಗಟ್ಟೆಗಳಲ್ಲಿ ಇವಿಎಂ ತಾಂತ್ರಿಕ ದೋಷದಿಂದ ಮತದಾನ ವಿಳಂಬ – ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಗೂಂಡಾಗಿರಿ

ಕೆಲವು ಮತಗಟ್ಟೆಗಳಲ್ಲಿ ಇವಿಎಂ ತಾಂತ್ರಿಕ ದೋಷದಿಂದ ಮತದಾನ ವಿಳಂಬ – ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಗೂಂಡಾಗಿರಿ

2024ರ ಲೋಕಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಆದರೆ ಮತದಾನಕ್ಕೂ ಮುನ್ನ ರಾಜ್ಯದ ಕೆಲವು ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗಿದೆ.

ಶುಕ್ರವಾರ ಬೆಳಗ್ಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಆದರೆ ಕೆಲವ ಮತಗಟ್ಟೆಗಳಲ್ಲಿ ಇವಿಎಂ  ಮೆಷಿನ್​ ಕೈಕೊಟ್ಟಿದೆ. ಇದರಿಂದ ಮತ ಚಲಾವಣೆ ವಿಳಂಬವಾಗಿದೆ. ಇದರಿಂದ ಮತದಾರರು ಕೊಂಚ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ತವರಿನಲ್ಲೇ ಸನ್‌ ರೈಸರ್ಸ್‌ಗೆ ಹೀನಾಯ ಸೋಲು – ಹೈದರಾಬಾದ್​​ ವಿರುದ್ಧ 35 ರನ್​ಗಳಿಂದ ಗೆದ್ದು ಬೀಗಿದ ಬೆಂಗಳೂರು!

ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಮೆಣಸೂರು ಗ್ರಾಮದಲ್ಲಿ ಇವಿಎಂ ಮೆಷಿನ್​ನಲ್ಲಿ ದೋಷ ಕಾಣಿಸಿಕೊಂಡಿತ್ತು. ಪರಿಣಾಮ ಸುಮಾರು ಒಂದು  ಗಂಟೆಯಿಂದ ಮತದಾನ ಪ್ರಕ್ರಿಯೇ ಸ್ಥಗಿತಗೊಂಡಿತ್ತು. ಅತ್ತ ಮತದಾರರು ಮತದಾನಕ್ಕಾಗಿ ಕಾದು ಕುಳಿತ್ತಿದ್ದು, ಅಧಿಕಾರಿಗಳ ವಿರುದ್ಧ ಮತದಾರರು ಆಕ್ರೋಶ ಹೊರಹಾಕಿದ್ದಾರೆ. ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಅರೇನೂರು ಗ್ರಾಮದ ಮತಗಟ್ಟೆಯಲ್ಲೂ ಇವಿಎಂ ಮೆಷಿನ್​ ಕೈಕೊಟ್ಟಿದೆ. ಮತಗಟ್ಟೆ 53 ರಲ್ಲಿ EVM ಮತಯಂತ್ರ ಕೈಕೊಟ್ಟ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಅತ್ತ ತುಮಕೂರು ನಗರದಲ್ಲೂ ಮತಯಂತ್ರ ಕೈಕೊಟ್ಟಿದೆ. ಮತಗಟ್ಟೆ ಸಂಖ್ಯೆ 66ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮತದಾನ ಆರಂಭವಾಗಿ ಅರ್ಧಗಂಟೆ ಕಳೆದ ಬಳಿಕ ದೋಷ ನಿವಾರಣೆಯಾಗಿದೆ. ಮಧುಗಿರಿ ತಾಲೂಕಿನ ಹೊನ್ನಾಪುರದಲ್ಲಿಕೂಡ  ಮತದಾನ ವಿಳಂಬವಾಗಿದೆ. ಮತಗಟ್ಟೆ 49 ರಲ್ಲಿ 45 ನಿಮಿಷಗಳ ಬಳಿಕ ಮತದಾನ ಆರಂಭವಾಗಿದೆ. ವಿವಿ ಪ್ಯಾಡ್ ಸಮಸ್ಯೆ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಿದೆ.

ಇನ್ನು ಮಂಡ್ಯ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿಯಲ್ಲಿ ಮತಗಟ್ಟೆ 100ರಲ್ಲಿ ಮತದಾನ ಕೊಂಚ ವಿಳಂಬವಾಗಿದೆ. ತಾಂತ್ರಿಕ ದೋಷದಿಂದ ಮತಯಂತ್ರ ಕೈಕೊಟ್ಟಿದೆ. ದುರಸ್ತಿ ಬಳಿಕ 7.40 ಕ್ಕೆ ಆರಂಭವಾದ ಮತದಾನ ಆರಂಭವಾಗಿದೆ.

ಮಂಗಳೂರು ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಗೂಂಡಾಗಿರಿ

ಇನ್ನು ಮಂಗಳೂರಿನ ಮತಗಟ್ಟೆಯೊಂದರಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಗೂಂಡಾಗಿರಿ ನಡೆಸಿರುವುದು ಬೆಳಕಿಗೆ ಬಂದಿದೆ. ನಗರದ ಕಂಕನಾಡಿ ಕಪಿತಾನಿಯೋ ಶಾಲಾ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಲು ಬಂದಾಗ ಈ ಘಟನೆ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಜೊತೆ ಜನ ಸೇರಿರೋದನ್ನು ಬಿಜೆಪಿ ಕಾರ್ಯಕರ್ತ ಪ್ರಶ್ನಿಸಿದ್ದಾನೆ. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಕಾರ್ಯಕರ್ತರ ಸಂದೀಪ್ ಎಕ್ಕೂರು ಹಾಗೂ ಕಾರ್ಯಕರ್ತರಿಂದ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆದಿದ್ದು, ಅಧಿಕಾರಿಯನ್ನ ತಳ್ಳಾಡಿ ಪುಂಡಾಟ ಮೆರೆದಿದ್ದಾರೆ. ಇತ್ತ ಇದನ್ನು ಚಿತ್ರೀಕರಣ ಮಾಡಿದ ಮಾಧ್ಯಮದವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದನೆ ಮಡಿದ್ದಾರೆ.

Shwetha M

Leave a Reply

Your email address will not be published. Required fields are marked *