ಹಾಲಿ ಮಂತ್ರಿಗಳಿಗೆ ಶಾಕ್ ಕೊಟ್ಟ ಮತದಾರರು – ಚುನಾವಣೆಯಲ್ಲಿ ಸೋತ ಸಚಿವರೆಷ್ಟು ಗೊತ್ತಾ?

ಹಾಲಿ ಮಂತ್ರಿಗಳಿಗೆ ಶಾಕ್ ಕೊಟ್ಟ ಮತದಾರರು – ಚುನಾವಣೆಯಲ್ಲಿ ಸೋತ ಸಚಿವರೆಷ್ಟು ಗೊತ್ತಾ?

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಬಹುಮತ ಪಡೆದುಕೊಂಡಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಭಾರೀ ಮುಖಭಂಗ ಅನುಭವಿಸಿದೆ. ಕೆಲ ಕ್ಷೇತ್ರಗಳಲ್ಲಿ ಅಚ್ಚರಿಯ ರೀತಿಯ ಫಲಿತಾಂಶ ಹೊರಬಿದ್ದಿದೆ. ಅದರಲ್ಲೂ ಕೂಡ ಹಾಲಿ ಸಚಿವರಿಗೇ ಮತದಾರರು ಶಾಕ್ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮ್ಯಾಜಿಕ್ ನಂಬರ್ ದಾಟಿದ್ದು ಅಧಿಕಾರದ ಚುಕ್ಕಾಣಿ ಹಿಡಿಯೋದು ಕನ್ಫರ್ಮ್ ಆಗಿದೆ. ಆದರೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಸೋಲು ಅನುಭವಿಸಿದ್ದಾರೆ. ಬಿಜೆಪಿಯ ನೇತೃತ್ವದಲ್ಲಿದ್ದ ಸರ್ಕಾರದ ವಿರುದ್ಧ ಜನರಿಗೆ ಅಸಮಾಧಾನ ಇದ್ದದ್ದು ಈ ರೀತಿ ಬಯಲಾಗಿದೆ. 2018ರ ವಿಧಾನಭಾ ಚುನಾವಣೆಯಲ್ಲೂ ಸಹ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ಸೋತಿದ್ದರು. ಇದೀಗ ಬೊಮ್ಮಾಯಿ ಸಂಪುಟದ ಸಚಿವರಿಗೂ ಇದೇ ಪರಿಸ್ಥಿತಿ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಯಾವೆಲ್ಲಾ ಸಚಿವರು ಸೋಲು ಅನುಭವಿಸಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಚುನಾವಣೆಯಲ್ಲಿ ಸೋತ ಹಾಲಿ ಸಚಿವರು

  • ಡಾ. ಕೆ ಸುಧಾಕರ್- ಚಿಕ್ಕಬಳ್ಳಾಪುರ
  • ಬಿ. ಶ್ರೀರಾಮುಲು – ಬಳ್ಳಾರಿ ಗ್ರಾಮಾಂತರ
  • ನಾರಾಯಣಗೌಡ – ಕೆ.ಆರ್ ಪೇಟೆ
  • ಗೋವಿಂದ್ ಕಾರಜೋಳ – ಮುಧೋಳ
  • ವಿ. ಸೋಮಣ್ಣ – ಚಾಮರಾಜನಗರ, ವರುಣಾ
  • ಮುರುಗೇಶ್ ನಿರಾಣಿ – ಬೀಳಗಿ
  • ಜೆ.ಸಿ ಮಾಧುಸ್ವಾಮಿ – ಚಿಕ್ಕನಾಯಕನಹಳ್ಳಿ
  • ಆರ್.ಅಶೋಕ್ – ಕನಕಪುರ
  • ಬಿ.ಸಿ ಪಾಟೀಲ್ – ಹಿರೇಕೆರೂರು
  • ಎಂಟಿಬಿ ನಾಗರಾಜ್ – ಹೊಸಕೋಟೆ
  • ಹಾಲಪ್ಪ ಆಚಾರ್ – ಯಲಬುರ್ಗಾ

suddiyaana