ಬಿಜೆಪಿ ಉಚ್ಛಾಟಿತ ಶಾಸಕರಿಂದ ಕಾಂಗ್ರೆಸ್‌ಗೆ ವೋಟ್ – ಸಿಎಂ ಡಿಕೆಶಿ ಜೊತೆ ಹೆಬ್ಬಾರ್, ಸೋಮಶೇಖರ್ ಫೋಟೋ ಶೂಟ್

ಬಿಜೆಪಿ ಉಚ್ಛಾಟಿತ ಶಾಸಕರಿಂದ ಕಾಂಗ್ರೆಸ್‌ಗೆ ವೋಟ್ – ಸಿಎಂ ಡಿಕೆಶಿ ಜೊತೆ ಹೆಬ್ಬಾರ್, ಸೋಮಶೇಖರ್ ಫೋಟೋ ಶೂಟ್

ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಈ ಬಾರಿಯ ಪರಿಷತ್ ಚುನಾವಣೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್​​ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. 5 ಸ್ಥಾನ ಗೆಲ್ಲಲು ಡಿಕೆ ಶಿವಕುಮಾರ್ ಉಚ್ಛಾಟಿತ ಶಾಸಕರನ್ನ ಸೆಳೆಯುವಲ್ಲಿ ಸಿಎಂ ಸಕ್ಸಸ್ ಆಗಿದ್ದಾರೆ.

ಇದನ್ನೂ ಓದಿ:ಮುಂಗಾರಿನ ಕೊರತೆಯಿಂದ ಕಂಗೆಟ್ಟ ರೈತರು – ಉಪಗ್ರಹ ಚಿತ್ರಗಳಲ್ಲಿ ಮೋಡಗಳು ಸುಳಿವೇ ಇಲ್ಲ!

ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್​ಗೆ ವೋಟ್ ಹಾಕಿದ್ದಾಗಿ ಬಿಜೆಪಿ ಉಚ್ಛಾಟಿತ ಶಾಸಕರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ಪಕ್ಷದಿಂದ ಉಚ್ಛಾಟಿತಗೊಂಡಿರುವ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಶಾಸಕ ಎಸ್.ಟಿ ಸೋಮಶೇಖರ್ ಅವರು ಕಾಂಗ್ರೆಸ್​ ಶಾಸಕರ ಜೊತೆಯೇ ರೆಸಾರ್ಟ್ ಸೇರಿದ್ದರು. ಕಾಂಗ್ರೆಸ್ ಶಾಸಕರ ಸಭೆಯಲ್ಲೂ ಭಾಗಿಯಾಗಿದ್ದರು. ಜೊತೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಮತ ಚಲಾಯಿಸಿರೋದಾಗಿ ಬಹಿರಂಗವಾಗಿ ತಿಳಿಸಿದ್ದಾರೆ. ವೋಟ್ ಹಾಕಿದ ನಂತರ ಬಿಜೆಪಿ ಉಚ್ಛಾಟಿತರು ಸಿಎಂ ಡಿ.ಕೆ ಶಿವಕುಮಾರ್ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

​ಇದೇ ವೇಳೆ ಮಾತಾಡಿದ ಶಾಸಕ ಎಸ್.ಟಿ ಸೋಮಶೇಖರ್ ಅವರು, ಮತದಾನ ಮಾಡುವಂತಹ ಹಕ್ಕು ಎಲ್ಲಾ ಶಾಸಕರದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಅವರು ಅಪ್ರೋಚ್ ಮಾಡಬೇಕು. ಬಿಜೆಪಿ, ಜೆಡಿಎಸ್ ಅಪ್ರೋಚ್ ಮಾಡಲಿಲ್ಲ. ಸಿಎಂ ಡಿಕೆ ಶಿವಕುಮಾರ್​ ಕರೆ ಮಾಡಿದ್ದರು. ಹೀಗಾಗಿ ವಂಡರ್ ಲಾ ರೆಸಾರ್ಟ್​ಗೆ ಹೋಗಿದ್ದೆ ಎಂದಿದ್ದಾರೆ. ನಮ್ಮ‌ಕ್ಷೇತ್ರದ ಅಭಿವೃದ್ಧಿ, ಸಮಸ್ಯೆ ಬಗೆಹರಿಸಲು ಮನವಿ ಮಾಡಿ ಕಾಂಗ್ರೆಸ್​ಗೆ ವೋಟ್ ಹಾಕೋದಾಗಿ ಹೇಳಿದ್ದೆ. ಹಂತ ಹಂತವಾಗಿ ಸಮಸ್ಯೆ ಬಗೆಹರಿಸೋದಾಗಿ ಭರವಸೆ ಕೊಟ್ಟಿದ್ದಾರೆ. ಈ ನಾನು ಆತ್ಮಸಾಕ್ಷಿ ಮತ ಹಾಕಿದ್ದು, ಯಾರಿಗೆ ಹಾಕಬೇಕೋ ಅವರಿಗೆ ಹಾಕಿದ್ದೇನೆ ಅಂತ ಕಾಂಗ್ರೆಸ್ ಪಕ್ಷದ ಹೆಸರೇಳದೆ ಮತ ಹಾಕಿರೋದಾಗಿ ಸೋಮಶೇಖರ್ ಸುಳಿವು ಕೊಟ್ಟಿದ್ದಾರೆ. ಮತ್ತೆ ಬಿಜೆಪಿ ಸಂಪರ್ಕ ಮಾಡಬಹುದಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್ ಅವ್ರು, ಅವರು ಮಾಡೋದು ಬೇಡ, ಅವರ ಸಹವಾಸವೂ ಬೇಡ ಎಂದಿದ್ದಾರೆ.

ಮತ್ತೊಂದೆಡೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ ಯಾರಿಗೆ ಅನ್ನೋ ಚರ್ಚೆ ಜೋರಾಗಿದೆ. ವಿಪಕ್ಷ ನಾಯಕ ಆರ್ ಅಶೋಕ್ ಮಾತ್ರ ಯತ್ನಾಳ್ ಕೂಡ ನಮಗೆ ಮತ ಹಾಕಿದ್ದಾರೆ ಎಂದಿದ್ದಾರೆ.

Sulekha

Leave a Reply

Your email address will not be published. Required fields are marked *