ಜಿಮ್, ಬಾರ್, ರೂಮ್, ಚಿನ್ನದ ಟಾಯ್ಲೆಟ್ ಇರುವ ವಿಮಾನ.. ₹7,800 ಕೋಟಿಯ ಬಂಗಲೆ – ರಷ್ಯಾ ಅಧಿಪತಿ ಪುಟಿನ್ ವಿಲಾಸಿ ಜೀವನ

ಪುಟಿನ್ ಹೆಸರು ಕೇಳುತ್ತಿದ್ದಂತೆ ನೆನಪಾಗುವುದೇ ರಷ್ಯಾ ಉಕ್ರೇನ್ ದೇಶಗಳ ನಡುವಿನ ಯುದ್ಧ. ಉಭಯದೇಶಗಳ ನಡುವೆ ವರ್ಷದಿಂದಲೂ ಕದನ ನಡೆಯುತ್ತಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಅನಾರೋಗ್ಯ, ಖಾಸಗಿ ಜೀವನ, ಐಷಾರಾಮಿ ಜೀವನ, ಕೈಗೊಳ್ಳುವ ನಿರ್ಧಾರಗಳು ಸೇರಿದಂತೆ ಹಲವು ವಿಚಾರಗಳಲ್ಲಿ ಸದ್ದು ಮಾಡುತ್ತಾರೆ. ಸದಾ ವಿವಾದಗಳಿಂದಲೇ ಚರ್ಚೆಗೆ ಗ್ರಾಸವಾಗುವ ಪುಟಿನ್ ರ ಜೀವನ ಶೈಲಿಯೇ ಹುಬ್ಬೇರಿಸುವಂತಿದೆ.
ವ್ಲಾಡಿಮಿರ್ ಪುಟಿನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕೆಲವು ಸುದ್ದಿ ಸಂಸ್ಥೆಗಳು ತಿಳಿಸಿವೆ. ಅಲ್ಲದೆ ಪುಟಿನ್ ಅವರ ಜೀವನ ಶೈಲಿಯ ಬಗ್ಗೆ ಮಾಧ್ಯಮ ಸಂಸ್ಥೆಗಳು ಕುತೂಹಲಕಾರಿ ವರದಿಗಳನ್ನು ಪ್ರಕಟಿಸಿವೆ. ಅವರ ಬಳಿ ಐಷಾರಾಮಿ ಮನೆಗಳು, ವಿಮಾನಗಳು, ಕಾರುಗಳು ಮತ್ತು ಕೈಗಡಿಯಾರಗಳಿವೆ ಎಂದು ಹೇಳಲಾಗುತ್ತದೆ. ಪುಟಿನ್ ಅವರ ಅತ್ಯಂತ ಪ್ರಸಿದ್ಧ ಆಸ್ತಿಗಳಲ್ಲಿ ಪುಟಿನ್ ಅರಮನೆ ಎಂದು ಕರೆಯಲ್ಪಡುವ ಅಧಿಕೃತ ನಿವಾಸ ಕೂಡ ಒಂದಾಗಿದೆ. ಇದರ ಮೌಲ್ಯ ಸುಮಾರು 78 ಬಿಲಿಯನ್ ಡಾಲರ್ (ರೂ.7800 ಕೋಟಿ). ರಷ್ಯಾದ ಕಪ್ಪು ಸಮುದ್ರದ ಸೌಂದರ್ಯವನ್ನು ಈ ಭವ್ಯವಾದ ಮನೆಯಿಂದ ನೋಡಬಹುದು. ಈ ಅರಮನೆಯು 17,700 ಚದರ ಮೀಟರ್‌ಗಳಷ್ಟು (191,000 ಚದರ ಅಡಿ) 74-ಹೆಕ್ಟೇರ್ (180-ಎಕರೆ) ಪ್ರದೇಶದಲ್ಲಿದೆ. ಇದನ್ನು ನಿಷೇಧ ವಲಯವೆಂದು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : 400 ಕಾರಿನ ಬೆಂಗಾವಲು ಪಡೆ ಜೊತೆ 300 ಕಿ.ಮೀ. ಪ್ರಯಾಣ – ಸಿನಿಮಾ ಸ್ಟೈಲ್ ನಲ್ಲಿ ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕ
ಪ್ರಯಾಣದ ವಿಷಯಕ್ಕೆ ಬಂದಾಗ, ಪುಟಿನ್ ಖಾಸಗಿ ಜೆಟ್‌ಗಳನ್ನು ಹೆಚ್ಚು ಬಳಸುತ್ತಾರೆ. ಅವರು ಸುಮಾರು 42 ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆಂದು ವರದಿಗಳು ತಿಳಿಸಿವೆ. ಅವರು ಹೆಚ್ಚಾಗಿ ಕ್ಲಾಸಿಕಲ್ ಸ್ಟೈಲ್ ವಿಮಾನಗಳಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರಂತೆ. ‘ಫ್ಲೈಯಿಂಗ್ ಕ್ರೆಮ್ಲಿನ್’ ಎಂದು ಹೆಸರಿಸಲಾದ ಈ ವಿಮಾನವು 3000 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ನ್ಯೂಸ್‌ವೀಕ್ ವರದಿ ಮಾಡಿದೆ. ಇನ್ನೂ ಅಚ್ಚರಿಯ ವಿಚಾರ ಅಂದರೆ ವಿಮಾನವು ಜಿಮ್, ಬಾರ್, ಮಲಗುವ ಕೋಣೆ ಮತ್ತು ಚಿನ್ನದ ಶೌಚಾಲಯದಂತಹ ಸೌಲಭ್ಯಗಳನ್ನು ಹೊಂದಿದೆ. ಗಂಟೆಗೆ 600 ಮೈಲಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಪುಟಿನ್‌ಗೆ ಐಷಾರಾಮಿ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ.
ಪುಟಿನ್ ಐಷಾರಾಮಿ ವಸ್ತುಗಳನ್ನು ಸಹ ಹೊಂದಿದ್ದಾರೆ ಅವರ ಬಳಿ ಅತ್ಯಂತ ದುಬಾರಿ ವಾಚ್‌ಗಳಿವೆಯಂತೆ. ಮೊಸಳೆ ಚರ್ಮದ ಬೆಲ್ಟ್, ಪ್ಲಾಟಿನಂ ನಿಂದ ಮಾಡಲ್ಪಟ್ಟಿರುವ ಲ್ಯಾಂಜ್ ಅಂಡ್ ಸೊಹ್ನ್ 1815 ವಿಶೇಷವಾದ ವಾಚ್ ಆಗಿದೆ. ಈ ಅಂದವಾದ ವಾಚ್‌ನ ಬೆಲೆ ಸುಮಾರು 1.50 ಕೋಟಿ ರೂಪಾಯಿ, ಇವುಗಳ ಹೊರತಾಗಿ ಪುಟಿನ್ ಹಲವು ಐಷಾರಾಮಿ ವಸ್ತುಗಳೊಂದಿಗೆ ಶ್ರೀಮಂತ ಜೀವನಶೈಲಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ. ಅದಷ್ಟೇ ಅಲ್ಲದೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಗೆಳತಿ ಅಲಿನಾ ಕಬಾಯೆವಾ (39) ಜಿಮ್ನಾಸ್ಟ್ ಹಾಗೂ ಹಿಂದೆ ಒಲಿಂಪಿಕ್ ಚಾಂಪಿಯನ್. ಇದೇ ಅಲಿನಾ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಹೊಸ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಗುಸು ಗುಸು ಕೇಳಿ ಬಂದಿತ್ತು. ಸುಮಾರು 1,000 ಕೋಟಿ ರೂ ಮೌಲ್ಯದ ಐಷಾರಾಮಿ ಮನೆಯನ್ನು ಖರೀದಿಸಿ ತಮ್ಮ ಗೆಳತಿ ಜೊತೆಗೆ ಪುಟಿನ್ ರಹಸ್ಯವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿತ್ತು.