ಕಾನ್ ಫೆಸ್ಟಿವಲ್‌ ನಲ್ಲಿ ವಿಚಿತ್ರ ಗೌನ್‌ ಧರಿಸಿದ್ದ ನಟಿ ಐಶ್ವರ್ಯಾ ರೈ – ‘ಕಾಸ್ಟ್ಯೂಮ್ ಗುಲಾಮರುʼ ಎಂದಿದ್ಯಾಕೆ ವಿವೇಕ್‌ ಅಗ್ನಿಹೋತ್ರಿ

ಕಾನ್ ಫೆಸ್ಟಿವಲ್‌ ನಲ್ಲಿ ವಿಚಿತ್ರ ಗೌನ್‌ ಧರಿಸಿದ್ದ ನಟಿ ಐಶ್ವರ್ಯಾ ರೈ – ‘ಕಾಸ್ಟ್ಯೂಮ್ ಗುಲಾಮರುʼ ಎಂದಿದ್ಯಾಕೆ ವಿವೇಕ್‌ ಅಗ್ನಿಹೋತ್ರಿ

ಫ್ಯಾನ್ಸ್‌ನಲ್ಲಿ 76ನೇ ಕಾನ್ ಫೆಸ್ಟಿವಲ್  ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಮೇ 16ರಿಂದ ಶುರುವಾಗಿರುವ ಈ ಕಾರ್ಯಕ್ರಮ ಮೇ 27ಕ್ಕೆ ಅಂತ್ಯವಾಗಲಿದೆ. ಕಾನ್ ಚಿತ್ರೋತ್ಸವದಲ್ಲಿ ಐಶ್ವರ್ಯ ರೈ, ಊರ್ವಶಿ ರೌಟೇಲಾ, ಮೃಣಾಲ್ ಠಾಕೂರ್ ಕೂಡ ಪಾಲ್ಗೊಂಡಿದ್ದಾರೆ. ಈ ಸಮಾರಂಭದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ವಿಚಿತ್ರ ಕಾಸ್ಟ್ಯೂಮ್ ಧರಿಸಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದರು. ಇದೀಗ ಐಶ್ವರ್ಯ ರೈ ಅವರನ್ನು ʼದಿ ಕಾಶ್ಮೀರ್ ಸ್ಟೋರಿʼ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಲವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ದಾಖಲೆ ಬರೆದ ʼದಿ ಕೇರಳ ಸ್ಟೋರಿʼ – 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

ಕಾನ್ ಫೆಸ್ಟಿವಲ್‌ ನಲ್ಲಿ ಕರಾವಳಿ ಬೆಡಗಿ ಐಶ್ವರ್ಯಾ ರೈ ಅವರು ಕಪ್ಪು- ಸಿಲ್ವರ್ ಮಿಶ್ರಿತ ಕಲರ್ ಗೌನ್‌ನಲ್ಲಿ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಭಾರಿ ಸುದ್ದಿಯಾಗಿತ್ತು. ಇದೀಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಐಶ್ವರ್ಯ ರೈ ಅವರ ಕಾಸ್ಟ್ಯೂಮ್ ಎತ್ತಿಕೊಂಡು ಬರುವ ವ್ಯಕ್ತಿಗಳ ಕುರಿತು ‘ಕಾಸ್ಟ್ಯೂಮ್ ಗುಲಾಮರು’ ಎಂದು ಅವರು ಕರೆದಿದ್ದಾರೆ. ಈ ಸಂಸ್ಕೃತಿ ಸರಿಯಲ್ಲ ಎಂದೂ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಕಾಸ್ಟ್ಯೂಮ್ ಗುಲಾಮರು ಎನ್ನುವ ಪದವನ್ನು ನೀವು ಕೇಳಿದ್ದೀರಾ? ಈ ರೀತಿಯ ಗುಲಾಮರು ಹೆಚ್ಚಾಗಿ ಮಹಿಳೆಯರೇ ಇರುತ್ತಾರೆ. ಹೊಂದಿಕೆ ಆಗದೇ ಇರುವ ಕಾಸ್ಟ್ಯೂಮ್ ಏನನ್ನು ಸೂಚಿಸುತ್ತದೆ? ಆ ರೀತಿಯ ಕಾಸ್ಟ್ಯೂಮ್ ಗಳಿಗೆ ಯಾಕೆ ನಾವು ಮೂರ್ಖರಾಗುತ್ತಿದ್ದೇವೆ. ಬಾಲಿವುಡ್ ನಲ್ಲೂ ಇಂತಹ ಘಟನೆಗಳು ನಡೆಯುತ್ತವೆ’ ಎಂದು ಅವರು ಬರೆದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಈ ರೀತಿ ಬರೆದುಕೊಂಡರೆ, ಐಶ್ವರ್ಯಾ ರೈ ಫ್ಯಾನ್ಸ್ ವಿವೇಕ್ ಅವರಿಗೆ ತಿರುಗೇಟು ಕೂಡ ನೀಡಿದ್ದಾರೆ.

ಊರ್ವಶಿ ರೌಟೇಲಾ ಅವರು ಬಾದಮ್ ಮತ್ತು ನೀಲಿ ಕಲರ್ ಮಿಕ್ಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ತುಟಿಗೆ ನೀಲಿ ಬಣ್ಣದ ಲಿಪ್‌ಸ್ಟಿಕ್ ಹಾಕಿದ್ದಾರೆ. ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ‘ಸೀತಾ ರಾಮಂ’ ಸುಂದರಿ ಮೃಣಾಲ್ ಠಾಕೂರ್ ಅವರು ಬಿಳಿ ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

suddiyaana