ವಿಟಮಿನ್ ಡಿ ಸಿಗಬೇಕಾದರೆ ಯಾವ ಸಮಯದಲ್ಲಿ ಬಿಸಿಲಲ್ಲಿ ನಿಲ್ಲಬೇಕು?

ವಿಟಮಿನ್ ಡಿ ಸಿಗಬೇಕಾದರೆ ಯಾವ ಸಮಯದಲ್ಲಿ ಬಿಸಿಲಲ್ಲಿ ನಿಲ್ಲಬೇಕು?

ಪ್ರತಿಯೊಬ್ಬರಿಗೂ ತಾವು ಆರೋಗ್ಯವಾಗಿರ್ಬೇಕು ಅನ್ನೋ ಬಯಕೆಯಿರುತ್ತೆ. ಒಳ್ಳೆಯ ಆರೋಗ್ಯಕ್ಕೆ ದೇಹದಲ್ಲಿ ಅಗತ್ಯಕ್ಕೆ ತಕ್ಕಷ್ಟು ವಿಟಮಿನ್ ಡಿ ಇರಲೇಬೇಕು..  ಅನೇಕರು ವಿಟಮಿನ್ ಡಿ ಸಿಗುತ್ತೆ ಅಂತಾ ಬಿಸಿಲಿಗೆ ಹೋಗಿ ನಿಲ್ತಾರೆ.. ಆದ್ರೆ ಬಿಸಿಲಲ್ಲಿ ನಿಂತ್ರೆ ವಿಟಮಿನ್ ಡಿ ನಿಜಕ್ಕೂ ಸಿಗುತ್ತಾ? ಯಾವ ಸಮಯದಲ್ಲಿ ಬಿಸಿಲಲ್ಲಿ ನಿಲ್ಬೇಕು.. ಬಿಸಿಲಿನಲ್ಲಿ ನಿಂತ್ರೆ ಏನೆಲ್ಲಾ ಪ್ರಯೋಜನ ಇದೆ ಅನ್ನೋದ್ರ ಬಗ್ಗೆ ಇಲ್ಲಿದೆ..

ಇದನ್ನೂ ಓದಿ: ವಿಷವಾಗುತ್ತಿದೆ ಕುಡಿಯುವ ನೀರು! – ಕಾವೇರಿ, ಕೃಷ್ಣಾ ಸೇರಿ 12 ನದಿ ನೀರು ಸೇವನೆಗೆ ಯೋಗ್ಯವಲ್ಲ!

ವಿಟಮಿನ್​ಗಳು ಆರೋಗ್ಯಕ್ಕೆ ಬಹಳ ಮುಖ್ಯ. ಪ್ರತಿಯೊಂದು ವಿಟಮಿನ್ ನಮ್ಮ‌‌ ದೇಹದಲ್ಲಿ ಅದರದ್ದೇ ಆದ ಅವಶ್ಯಕತೆ ಹೊಂದಿದೆ. ಇದರಲ್ಲಿ ವಿಟಮಿನ್ ಡಿ ಕೂಡ ಆರೋಗ್ಯಕ್ಕೆ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಇದರ ಕೊರತೆಯು ಮೂಳೆಗಳು, ರಕ್ತದೊತ್ತಡ, ಹಲ್ಲುಗಳು ಮತ್ತು ಸ್ನಾಯುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಟಮಿನ್ ಡಿ ಕೊರತೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಆಯಾಸ, ದುಃಖ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ವಿಟಮಿನ್ ಡಿ ಸಿಗಲಿ ಅಂತಾ ಅನೇಕರು ಬಿಸಿಲಿನಲ್ಲಿ ನಿಲ್ತಾರೆ.. ಆದ್ರೆ ಅನೇಕರಿಗೆ ಯಾವಾಗ ಬಿಸಿಲಿನಲ್ಲಿ ನಿಲ್ಬೇಕು ಅಂತಾ ಗೊತ್ತಿಲ್ಲ.. ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆಯಲು, ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದಲ್ಲಿ ಬೆಳಗ್ಗೆ  8 ರಿಂದ 11 ರವರೆಗೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಬೇಸಿಗೆಯಲ್ಲಿ 20 ರಿಂದ 25 ನಿಮಿಷಗಳ ಕಾಲ ಮತ್ತು ಚಳಿಗಾಲದಲ್ಲಿ ಎರಡು ಗಂಟೆಗಳ ಕಾಲ ಸೂರ್ಯನ ಸ್ನಾನವನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ದೇಹವು ವಿಟಮಿನ್ ಡಿ ಅನ್ನು ಹೇರಳವಾಗಿ ಹೀರಿಕೊಳ್ಳುತ್ತದೆ. ಇನ್ನು  ಸೂರ್ಯನ ಬೆಳಕನ್ನು ಹೊರತುಪಡಿಸಿ, ಕೆಲವೊಂದು ಆಹಾರಗಳಲ್ಲೂ ವಿಟಮಿನ್ ಡಿ ಸಿಗುತ್ತದೆ. ಹಸುವಿನ ಹಾಲು, ಮೊಸರು, ಕಿತ್ತಳೆ ಮತ್ತು ನಿಂಬೆ ರಸ, ಸಾಲ್ಮನ್ ಮೀನು, ಮೊಟ್ಟೆ ಯಲ್ಲೂ ವಿಟಮಿನ್ ಡಿ ಸಿಗುತ್ತದೆ.

Shwetha M