ಮೈಸೂರು ದಸರಾಕ್ಕೆ ಹೋಗ್ತಿದ್ದೀರಾ? ಈ 6 ತಾಣ ಮಿಸ್ ಮಾಡ್ಬೇಡಿ!- ಅರಮನೆ ಮಾತ್ರವಲ್ಲ… ಮೈಸೂರಿನ ಸುತ್ತ ಇಷ್ಟೊಂದು ಜಾಗಗಳಿವೆ!

ನೀವು ಈ ಬಾರಿ ಮೈಸೂರು ದಸರಾ ನೋಡಲು ಹೋಗುತ್ತಿದ್ದೀರಾ? ಹಾಗಾದರೆ ಜಂಬೂಸವಾರಿ, ಅರಮನೆಯ ದೀಪಾಲಂಕಾರ ನೋಡಿಕೊಂಡು ವಾಪಸ್ ಬರುವುದಷ್ಟೇ ಅಲ್ಲ, ಮೈಸೂರಿನ ಸುತ್ತಮುತ್ತ ಇರುವ ಅದ್ಭುತ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ. ಹಾಗಾದರೆ ಬನ್ನಿ, ಆ ಸ್ಥಳಗಳು ಯಾವುವು ಅಂತ ನೋಡೋಣ.
ಮೊದಲಿಗೆ ಚಾಮುಂಡಿ ಬೆಟ್ಟ. ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ಬೆಟ್ಟದಿಂದ ಕಾಣುವ ಸುಂದರ ನಗರವನ್ನು ಕಣ್ತುಂಬಿಕೊಳ್ಳಬಹುದು.
ಎರಡನೆಯದು ಮೈಸೂರು ಮೃಗಾಲಯ. ಕುಟುಂಬದ ಜೊತೆ ಪ್ರವಾಸಕ್ಕೆ ಹೋಗುವವರಿಗೆ ಇದು ಅತ್ಯುತ್ತಮ ಸ್ಥಳ. ವಿವಿಧ ಪ್ರಾಣಿ, ಪಕ್ಷಿಗಳನ್ನು ನೋಡುತ್ತಾ ಸಮಯ ಕಳೆಯಬಹುದು.
ಮೂರನೆಯದು ಬೃಂದಾವನ ಗಾರ್ಡನ್. ಕೆಆರ್ಎಸ್ ಅಣೆಕಟ್ಟಿನ ಸಮೀಪದಲ್ಲಿರುವ ಈ ಉದ್ಯಾನವನದ ಸೌಂದರ್ಯ, ಸಂಗೀತ ಕಾರಂಜಿ ಪ್ರವಾಸಿಗರ ಆಕರ್ಷಣೆಯಾಗಿದೆ. ಆದರೆ ದಸರಾ ಸಮಯದಲ್ಲಿ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಮುಂಚಿತವಾಗಿ ಪರಿಶೀಲಿಸಿ.
ನಾಲ್ಕನೆಯದು ಶ್ರೀರಂಗಪಟ್ಟಣ. ಐತಿಹಾಸಿಕ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ರಂಗನಾಥಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ಪ್ರಸಿದ್ಧ ಸ್ಥಳಗಳನ್ನು ಇಲ್ಲಿ ನೋಡಬಹುದು.
ಐದನೆಯದು ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ. ಹೊಯ್ಸಳ ಶಿಲ್ಪಕಲೆಯ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇದು ಸೂಕ್ತ ತಾಣ.
ಇನ್ನು ಸಮಯವಿದ್ದರೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಬಹುದು. ಮೈಸೂರು ದಸರಾ ಪ್ರವಾಸವನ್ನು ಇನ್ನಷ್ಟು ಸ್ಮರಣೀಯವಾಗಿಸಲು ಈ ತಾಣಗಳನ್ನು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.

ನೋಡಿರಿ

