ವಿವಾಹ ಆಗ್ತಾರಂತೆ ನಟ ವಿಶಾಲ್ – ಮದುವೆ ಮುಹೂರ್ತವೂ ರೆಡಿಯಂತೆ..!
ಮದುವೆಗೆ ಯೆಸ್ ಅಂದ ನಟ ವಿಶಾಲ್

ವಿವಾಹ ಆಗ್ತಾರಂತೆ ನಟ ವಿಶಾಲ್ – ಮದುವೆ ಮುಹೂರ್ತವೂ ರೆಡಿಯಂತೆ..!ಮದುವೆಗೆ ಯೆಸ್ ಅಂದ ನಟ ವಿಶಾಲ್

ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಯಾವಾಗ ಮದುವೆಯಾಗ್ತಾರೆ ಅಂತಾ ಅಭಿಮಾನಿಗಳು ಪದೇ ಪದೇ ಕೇಳ್ತಿದ್ರು. ವಿಶಾಲ್ ಈಗ ತನ್ನ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ. ಸದ್ಯದಲ್ಲೇ ಮದುವೆಯಾಗುವ ಸೂಚನೆ ಕೊಟ್ಟಿದ್ದಾರೆ. 45 ವರ್ಷದ ವಿಶಾಲ್ , ತನ್ನ ಮದುವೆ ಬಗ್ಗೆ ಕಾರ್ಯಕ್ರಮವೊಂದರ ವೇಳೆ ವೇದಿಕೆಯಲ್ಲೇ ಮಾತಾಡಿದ್ದಾರೆ. ಪ್ರತಿ ವಿಚಾರಕ್ಕೂ ಒಂದು ಟೈಮ್​ ಬರಬೇಕು. ದಕ್ಷಿಣ ಭಾರತದ ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಆದ ಬಳಿಕ ಮೊದಲ ಮುಹೂರ್ತದಲ್ಲಿ ನಾನು ಮದುವೆ ಆಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಸೆಟ್ಟೇರಲಿದ್ಯಾ “ಆರ್ ಆರ್ ಆರ್ 2”-ರಾಜಮೌಳಿ ಹೇಳಿದ್ದೇನು?

ವಿಶಾಲ್ ನಟಿಸಿರುವ ‘ಲಾಠಿ’ ಚಿತ್ರದ ಟೀಸರ್​ ಲಾಂಚ್​ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಈ ಈ ಕಾರ್ಯಕ್ರಮದಲ್ಲಿ ಮದುವೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ನೇರವಾಗಿ ಉತ್ತರಿಸಿದ ವಿಶಾಲ್, ದಕ್ಷಿಣ ಭಾರತದ ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಆದ ಬಳಿಕ ಮೊದಲ ಮುಹೂರ್ತದಲ್ಲಿ ನಾನು ಮದುವೆ ಆಗುತ್ತೇನೆ. ಆ ಕಟ್ಟಡದಿಂದ 3500 ಕಲಾವಿದರ ಕುಟುಂಬಗಳಿಗೆ ಸಹಾಯ ಆಗಲಿದೆ’ ಎಂದು ​ ಹೇಳಿದ್ದಾರೆ.  ನಟ ವಿಶಾಲ್ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ನಟ ವಿಶಾಲ್ ಈಗಾಗಲೇ ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅಗಲಿಕೆ ವೇಳೆ ವಿಶಾಲ್ ತನ್ನ ಶಕ್ತಿಧಾಮದ ಮಕ್ಕಳ ಜವಾಬ್ದಾರಿಯನ್ನ ನಾನೂ ಹೊತ್ತುಕೊಳ್ಳುತ್ತೇನೆ ಅನ್ನೋ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದರು. ಅಲ್ಲದೇ ವಿಶಾಲ್ ಅವ್ರು ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ​ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದ ಕಾರ್ಮಿಕರು ಮತ್ತು ಕಲಾವಿದರಿಗಾಗಿ ಶ್ರಮಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗಾಗಲೇ ವಿಶಾಲ್​ ಅವರ ಮದುವೆ ನಡೆದಿರಬೇಕಿತ್ತು. ಹೈದರಾಬಾದ್​ ಬೆಡಗಿಯೊಬ್ಬರ ಜೊತೆ ಈ ಮೊದಲು ವಿವಾಹ ನಿಶ್ಚಯ ಆಗಿತ್ತು. ನಂತರದಲ್ಲಿ ಆ ಸಂಬಂಧ ಮುರಿದು ಬಿತ್ತು. ಈಗ ವಿಶಾಲ್​ ಅವರು ಯುವತಿಯೊಬ್ಬರ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಮಾತು ಆಗಾಗ ಕೇಳಿಬರುತ್ತಿದೆ. ವಿಶಾಲ್​ಅವರ ವಿವಾಹದಿಂದ ಎಲ್ಲಾ ಗಾಸಿಪ್‌ ಸುದ್ದಿಗೆ ತೆರೆ ಬೀಳಲಿದೆ ಅಂತಿದ್ದಾರೆ ಅಭಿಮಾನಿಗಳು.

suddiyaana