ಹುಟ್ಟು ಹಬ್ಬದಂದೇ ನಟಿ ಸಾಯಿ ಧನ್ಶಿಕಾ ಜೊತೆ ನಟ ವಿಶಾಲ್ ನಿಶ್ಚಿತಾರ್ಥ! – ಹೊಸ ಜೀವನ ಆರಂಭಿಸಲು ಸಜ್ಜಾದ ಸ್ಟಾರ್ ಜೋಡಿ

ತಮಿಳು ನಟ ವಿಶಾಲ್ ಅವರು ಕಳೆದ ಎರಡು ದಶಕಗಳಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ವಿಶಾಲ್ ಅವರು ಆ್ಯಕ್ಷನ್ ಸಿನಿಮಾಗಳಿಗೆ ಹೇಳಿ ಮಾಡಿಸಿದ ನಟ. ಈವರೆಗೂ ಮಾಡಿರುವುದೆಲ್ಲಾ ಅಂಥದ್ದೇ ಸಿನಿಮಾಗಳು. ತಮಿಳು ಚಿತ್ರರಂಗದ ಪ್ರಮುಖ ನಟ ವಿಶಾಲ್ ಅವರ ಅಭಿಮಾನಿಗಳು ಅವರು ಯಾವಾಗ ಮದುವೆಯಾಗುತ್ತಾರೆ ಎಂದು ತಿಳಿಯಲು ಕಾತುರದಿಂದ ಕಾಯುತ್ತಿದ್ದರು. ಇದೀಗ ಕಾಲಿವುಡ್ ಸ್ಟಾರ್ ನಟ ವಿಶಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ನಟಿ ಸಾಯಿ ಧನ್ಶಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: IPLಗೆ ಧೋನಿ ಫ್ರೆಂಡ್ಸ್ ಗುಡ್ ಬೈ – ಲೇಟ್ ಆಗಿ ಬಂದ್ರೂ ಮೊದ್ಲೇ ನಿವೃತ್ತಿ!
ಇಂದು ನಟ ವಿಶಾಲ್ ಹುಟ್ಟು ಹಬ್ಬ. ಈ ಶುಭ ದಿನದಂದೇ ವಿಶಾಲ್ ನಟಿ ಸಾಯಿ ಧನ್ಶಿಕಾ ಜೊತೆ ಹೊಸ ಜೀವನ ಆರಂಭಿಸಲು ಸಜ್ಜಾಗಿದ್ದಾರೆ. ಇವತ್ತು ವಿಶಾಲ್ ಅವರು ನಟಿ ಸಾಯಿ ಧನ್ಶಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದೆ. ವಿಶಾಲ್ ಎಂಗೇಜ್‌ಮೆಂಟ್ ಕಾರ್ಯಕ್ರಮ ಸರಳವಾಗಿ ಮಾಡಿಕೊಂಡಿದ್ದಾರೆ. ಇದೀಗ ವಿಶಾಲ್ ಹಾಗೂ ಸಾಯಿ ಧನ್ಶಿಕಾ ಫೋಟೋಗಳು ಸದ್ಯ ವೈರಲ್ ಆಗಿದ್ದು, ನಟನ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಅಂದ್ಹಾಗೆ ಕಳೆದ ಕೆಲ ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ವಿಶಾಲ್ ಚೇತರಿಕೆ ಕಂಡಿದ್ದಾರೆ. ಚೆನ್ನೈನಲ್ಲಿ ನಡೆದ ಯೋಗಿ ದ ಎನ್ನುವ ಸಿನಿಮಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಟ ವಿಶಾಲ್ ಅವರು, ನಾನು ಮದುವೆ ಆಗುತ್ತಿದ್ದೇನೆ. ಹುಡುಗಿ ಯಾರು ಅಲ್ಲ. ಹುಡುಗಿ ಹಾಗೂ ಅವರ ತಂದೆ ಕೂಡ ಇಲ್ಲೇ ಇದ್ದಾರೆ. ನಟಿ ಸಾಯಿ ಅವರ ಜೊತೆ ನಾನು ಸಪ್ತಪದಿ ತುಳಿಯಲಿದ್ದೇನೆ. ನಾವಿಬ್ಬರು ಒಳ್ಳೆಯ ಲೈಫ್ ಲೀಡ್ ಮಾಡಲಿದ್ದೇವೆ ಎಂದು ಹೇಳಿದ್ದರು. ಇದೀಗ ನಟ ವಿಶಾಲ್, ನಟಿ ಸಾಯಿ ಧನ್ಶಿಕಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನೋಡಿರಿ

