ಇನ್ನುಮುಂದೆ ಈ ದೇಶಕ್ಕೆ ಹೋಗಲು ವೀಸಾ ಅಗತ್ಯವಿಲ್ಲ! – ಭಾರತೀಯರಿಗೂ ಈ ಸೌಲಭ್ಯ ಸಿಗುತ್ತಾ?

ಇನ್ನುಮುಂದೆ ಈ ದೇಶಕ್ಕೆ ಹೋಗಲು ವೀಸಾ ಅಗತ್ಯವಿಲ್ಲ! – ಭಾರತೀಯರಿಗೂ ಈ ಸೌಲಭ್ಯ ಸಿಗುತ್ತಾ?

ವಿದೇಶಗಳಿಗೆ ಪ್ರವಾಸಕ್ಕೆ ಹೋಗಬೇಕು ಅಂತಾ ಪ್ಲಾನ್‌ ಹಾಕುತ್ತಿರುವವರಿಗೆ ಖುಷಿ ಸುದ್ದಿಯೊಂದಿದೆ. ಇನ್ನು ಮುಂದೆ ಈ ದೇಶಕ್ಕೆ ತೆರಳುವ ಭಾರತೀಯರು ಹಾಗೂ ತೈವಾನ್‌ ಪ್ರಜೆಗಳು ವೀಸಾ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ವೀಸಾ ಇಲ್ಲದೇ ಆ ದೇಶಕ್ಕೆ ಹೋಗಬಹುದು ಅಂತಾ ಅಲ್ಲಿನ ಸರ್ಕಾರ ತಿಳಿಸಿದೆ.

ಕೋವಿಡ್‌ ನಂತರ ವಿದೇಶ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಥೈಲ್ಯಾಂಡ್‌ ಸರ್ಕಾರ ಭಾರತೀಯ ಪ್ರಜೆಗಳಿಗೆ ಹಾಗೂ ತೈವಾನ್‌ ಪ್ರಜೆಗಳಿಗೆ ಬಂಪರ್‌ ಆಫರ್‌ವೊಂದನ್ನು ಘೋಷಿಸಿದೆ. ಈ ಎರಡು ದೇಶಗಳ ಪ್ರಜೆಗಳು ವೀಸಾ ಇಲ್ಲದೇ ದೇಶಕ್ಕೆ ಬರಬಹುದು ಅಂತಾ ಘೋಷಿಸಿದೆ.

ದೇಶಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದಾಗಿ ಎರಡು ದೇಶಗಳ ವೀಸಾ ಅಗತ್ಯತೆಯನ್ನು ಥೈಲ್ಯಾಂಡ್‌ ಸರ್ಕಾರ ರದ್ದು ಮಾಡಿದೆ. ನವೆಂಬರ್‌ನಿಂದ ಮೇ 2024 ರವರೆಗೆ ವೀಸಾ ಇಲ್ಲದೇ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ವರ್ಷಾಂತ್ಯ, ಹೊಸ ವರ್ಷಾರಂಭ, ಬೇಸಿಗೆ ಕಾಲದ ರಜೆಗಳು ಸೇರಿ ಋತುವಿನಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಪ್ರಯತ್ನದಲ್ಲಿ ಥೈಲ್ಯಾಂಡ್‌ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತ ವ್ಯಕ್ತಿ – ಆಫೀಸ್‌ ಬೇಗ ತಲುಪಲು ಹೀಗಾ ಮಾಡೋದು?  

ಸೆಪ್ಟೆಂಬರ್‌ನಲ್ಲಿ ಥೈಲ್ಯಾಂಡ್ ಚೀನಾದ ಪ್ರವಾಸಿಗರಿಗೆ ವೀಸಾ ಅವಶ್ಯಕತೆಗಳನ್ನು ರದ್ದುಗೊಳಿಸಿತ್ತು. ಇದಕ್ಕೆ ಕಾರಣ 2019 ರಲ್ಲಿ ದಾಖಲೆಯ 39 ಮಿಲಿಯನ್ (3.9 ಕೋಟಿ) ಪ್ರವಾಸಿಗರ ಪೈಕಿ 11 ಮಿಲಿಯನ್‌ (1.1 ಕೋಟಿ) ಚೀನಾ ಪ್ರವಾಸಿಗರು ಥೈಲ್ಯಾಂಡ್‌ಗೆ ಹೋಗಿದ್ದರು. ಇದು ದೇಶದ ನಂ. 1 ಸಾಂಕ್ರಾಮಿಕ ಪೂರ್ವ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ.

ಇನ್ನು, ಈ ವರ್ಷ ಅಂದರೆ 2023ರ ಜನವರಿಯಿಂದ ಅಕ್ಟೋಬರ್ 29 ರವರೆಗೆ, ಥೈಲ್ಯಾಂಡ್‌ಗೆ 22 ಮಿಲಿಯನ್ ಅಂದರೆ 2.2 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ.  ಇದರಿಂದ 927.5 ಬಿಲಿಯನ್ ಬಹ್ಟ್ ಅಂದರೆ  (25.67 ಬಿಲಿಯನ್‌ ಡಾಲರ್‌) ಆದಾಯ ಹರಿದುಬಂದಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಮಲೇಷ್ಯಾ, ಚೀನಾ ಮತ್ತು ದಕ್ಷಿಣ ಕೊರಿಯಾದ ನಂತರ ಸುಮಾರು 1.2 ಮಿಲಿಯನ್ ಪ್ರವಾಸಿಗರೊಂದಿಗೆ ಭಾರತವು ಈ ವರ್ಷ ಇಲ್ಲಿಯವರೆಗೆ ಪ್ರವಾಸೋದ್ಯಮಕ್ಕಾಗಿ ಥೈಲ್ಯಾಂಡ್‌ನ ನಾಲ್ಕನೇ ಅತಿದೊಡ್ಡ ಮೂಲ ಮಾರುಕಟ್ಟೆಯಾಗಿದೆ.

ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಮತ್ತು ಹಾಸ್ಪಿಟಾಲಿಟಿ ಚೈನ್‌ಗಳು  ಆ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದರಿಂದ ಭಾರತದಿಂದ ಒಳಬರುವ ಪ್ರವಾಸೋದ್ಯಮವು ಬೆಳವಣಿಗೆಯ ಲಕ್ಷಣಗಳನ್ನು ತೋರಿಸಿದೆ.

ಥೈಲ್ಯಾಂಡ್ ಈ ವರ್ಷ ಸುಮಾರು 28 ಮಿಲಿಯನ್ (2.8 ಕೋಟಿ) ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದೆ. ಈ ಹಿನ್ನೆಲೆ ಪ್ರಯಾಣ ವಲಯವು ಆರ್ಥಿಕ ಬೆಳವಣಿಗೆಯನ್ನು ನಿರ್ಬಂಧಿಸಿರುವ ಮುಂದುವರಿದ ದುರ್ಬಲ ರಫ್ತುಗಳನ್ನು ಸರಿದೂಗಿಸಬಹುದು ಎಂದು ಹೊಸ ಸರ್ಕಾರವು ಆಶಿಸುತ್ತಿದೆ.

Shwetha M