ರಶ್ಮೀಕಾ ಜೊತೆ ಸೇರಿ ವಿಜಯ್ ದೇವರಕೊಂಡ ಗಿಫ್ಟ್ – 44 ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಣೆ

ರಶ್ಮೀಕಾ ಜೊತೆ ಸೇರಿ ವಿಜಯ್ ದೇವರಕೊಂಡ ಗಿಫ್ಟ್ – 44 ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಣೆ

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಸೋಮವಾರ (ಮಾ.2) ತೆಲಂಗಾಣದ ತಮ್ಮ ಹುಟ್ಟೂರಾದ ಆಚಂಪೆಟ್ ತಾಲ್ಲೂಕಿನ ತುಮ್ಮನಪೇಟೆಗೆ ಭೇಟಿ ನೀಡಿದ್ದರು. ತುಮ್ಮನಪೇಟೆಯಲ್ಲಿ ವಿಜಯ್‌ ಅವರು ಹೊಸದಾಗಿ ಒಂದು ಫಾರ್ಮ್‌ಹೌಸ್‌ ನಿರ್ಮಾಣ ಮಾಡಿದ್ದಾರೆ. ಹಾಗಾಗಿ, ಮದುವೆ ಬಳಿಕ ಅದರ ʻಗೃಹಪ್ರವೇಶ’ ಮತ್ತು ‘ಸತ್ಯನಾರಾಯಣ ವ್ರತ’ ಪೂಜೆಯನ್ನು ನೆರವೇರಿಸಿದ್ದಾರೆ. ಹುಟ್ಟೂರಿಗೆ ಬಂದ ವಿಜಯ್‌ಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಇದೇ ವೇಳೆ ವಿದ್ಯಾರ್ಥಿಗಳಿಗೆ ಒಂದು ಸೂಪರ್‌ ಗಿಫ್ಟ್‌ ಅನ್ನು ವಿಜಯ್‌ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಇಓ – ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಶಿಕ್ಷಣಾಧಿಕಾರಿ

ತೆಲಂಗಾಣದ ಅಚ್ಚಂಪೇಟೆ ತಾಲ್ಲೂಕಿನ ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿವೇತನ’ ಯೋಜನೆಯನ್ನು ವಿಜಯ್‌ ಘೋಷಿಸಿದ್ದಾರೆ. “ನನ್ನ ದೇವರಕೊಂಡ ಚಾರಿಟಬಲ್ ಟ್ರಸ್ಟ್ ಮೂಲಕ ತೆಲಂಗಾಣದ ಅಚ್ಚಂಪೇಟೆ ವಿಭಾಗದ 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದೇನೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡುವ ಮತ್ತು ಆರ್ಥಿಕ ಹೊರೆಯಿಲ್ಲದೆ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ” ಎಂದು ವಿಜಯ್‌ ದೇವರಕೊಂಡ ಹೇಳಿದ್ದಾರೆ.

ವಿಜಯ್ ದೇವರಕೊಂಡ ಅವರ ನಡೆಯನ್ನು ರಶ್ಮಿಕಾ ಶ್ಲಾಘಿಸಿದ್ದಾರೆ. ವಿಜಯ್ ಅವರ ತಾಯಿ ಕೂಡ ಭಾವುಕರಾದರು. ವಿಜಯ್‌ ಘೋಷಣೆ ಮಾಡುತ್ತಿದ್ದಂತೆಯೇ ಜನರು ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಇದೇ ವೇಳೆ ಗ್ರಾಮಕ್ಕೆ ಆಗಾಗ ಭೇಟಿ ನೀಡುವುದಾಗಿ ತಮ್ಮ ಹುಟ್ಟೂರಿನ ಜನರಿಗೆ ವಿಜಯ್ ಭರವಸೆ ನೀಡಿದ್ದಾರೆ. ವಿಜಯ್‌ ದೇವರಕೊಂಡ ನಡೆಯನ್ನು ಕೊಂಡಾಡಿರುವ ಜನರು, “ನೀವು ನಿಜವಾದ ಹೀರೋ..” ಎಂದು ಹೊಗಳಿದ್ದಾರೆ.

Kishor KV

Leave a Reply

Your email address will not be published. Required fields are marked *