ಪ್ರೀತಿ ಕಲಿಸಿದ ವಿಜಯ್ ಬಗ್ಗೆ ಪುಸ್ತಕ ಬರೆಯಬಲ್ಲೆ – ಬೆಸ್ಟ್ ಫ್ರೆಂಡ್ ಈಗ ಹೆಂಡತಿ- ಭಾವುಕ ಸಾಲುಗಳನ್ನು ಹಂಚಿಕೊಂಡ ವಿರೋಶ್
ಅಭಿಮಾನಿಗಳ ಮನಗೆದ್ದ ರಶ್ಮಿಕಾ - ವಿಜಯ್ ಭಾವುಕ ಸಂದೇಶ

ಪ್ರೀತಿ ಕಲಿಸಿದ ವಿಜಯ್ ಬಗ್ಗೆ ಪುಸ್ತಕ ಬರೆಯಬಲ್ಲೆ – ಬೆಸ್ಟ್ ಫ್ರೆಂಡ್ ಈಗ ಹೆಂಡತಿ- ಭಾವುಕ ಸಾಲುಗಳನ್ನು ಹಂಚಿಕೊಂಡ ವಿರೋಶ್ಅಭಿಮಾನಿಗಳ ಮನಗೆದ್ದ ರಶ್ಮಿಕಾ - ವಿಜಯ್ ಭಾವುಕ ಸಂದೇಶ

ಸೆಲೆಬ್ರಿಟಿ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಅದ್ದೂರಿಯಾಗಿ ನಡೆದಿದೆ. ವಿವಾಹದ ಸುಂದರ ಫೋಟೋಗಳು ಮದುವೆಯ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಇದರ ಜೊತೆಗೆ ರಶ್ಮಿಕಾ ಮತ್ತು ವಿಜಯ್ ಪರಸ್ಪರ ಒಬ್ಬರಿಗೊಬ್ಬರು ಭಾವುಕ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಪ್ರೀತಿಯಲ್ಲಿ ಎಂಥಾ ಶಕ್ತಿಯಿದೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

ಇದನ್ನು ಓದಿ:ಬಂಗಾರದಲ್ಲಿ ಮಿಂಚಿದ ವಿಜಯ್, ರಶ್ಮಿಕಾ- ವಿರೋಶ್ ಧರಿಸಿರುವ ಆಭರಣಗಳ ವೈಶಿಷ್ಟ್ಯತೆಯೇನು?

ವಿಜಯ್ ದೇವರಕೊಂಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಭಾವುಕರಾಗಿದ್ದಾರೆ. ರಶ್ಮಿಕಾ ಭಾವುಕತೆಗೆ ಕೆಲವು ಫೋಟೋಗಳು ಕೂಡಾ ಸಾಕ್ಷಿಯಾಗಿದೆ. ಇದರ ಜೊತೆಗೆ ತಮ್ಮ ಬದುಕಿನಲ್ಲಿ ವಿಜಯ್ ದೇವರಕೊಂಡ ಎಷ್ಟು ಮುಖ್ಯವಾದ ವ್ಯಕ್ತಿ ಎಂಬುದನ್ನು ರಶ್ಮಿಕಾ ವಿವರಿಸಿದ್ದಾರೆ. ‘ನನ್ನ ಪತಿ, ವಿಸ್ಟರ್ ವಿಜಯ್ ದೇವರಕೊಂಡ ಅವರನ್ನು ನಾನು ನಿಮಗೆ ಪರಿಚಯಿಸುತ್ತಿದ್ದೇನೆ. ನಿಜವಾದ ಪ್ರೀತಿ ಎಂದರೆ ಏನು ಅಂತ ಕಲಿಸಿದ ವ್ಯಕ್ತಿ. ನೆಮ್ಮದಿಯಿಂದ ಇರುವುದು ಅಂದ್ರೆ ಹೇಗಿರುತ್ತದೆ ಎಂಬುದನ್ನು ಕಲಿಸಿದ ವ್ಯಕ್ತಿ. ದೊಡ್ಡ ಕನಸು ಕಾಣುವುದನ್ನು ಕಲಿಸಿದ ವ್ಯಕ್ತಿ. ಯಾರೂ ನೋಡುತ್ತಿಲ್ಲ ಎಂಬಂತೆ ನಾನು ಕುಣಿಯುವುದನ್ನು ಎಂದಿಗೂ ತಡೆಯದ ವ್ಯಕ್ತಿ. ಸ್ನೇಹಿತರ ಜೊತೆ ಪ್ರಯಾಣ ಮಾಡುವುದು ಎಂದಿಗೂ ಅತ್ಯುತ್ತಮ ಸಂಗತಿ ಎಂಬುದನ್ನು ತೋರಿಸಿದ ವ್ಯಕ್ತಿ. ನಾನು ಈ ವ್ಯಕ್ತಿಯ ಕುರಿತು ಒಂದು ಪುಸ್ತಕವನ್ನೇ ಬರೆಯಬಹುದು’ ಎಂದು ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ವ್ಯಕ್ತಿತ್ವದ ಬಗ್ಗೆ ವಿವರಣೆ ನೀಡಿದ್ದಾರೆ. ‘ನಾನು ಯಾವಾಗಲೂ ಕನಸು ಕಂಡಿದ್ದ ಮಹಿಳೆಯಾಗಿದ್ದೇನೆ, ಏಕೆಂದರೆ ನೀನು ಅವಳನ್ನು ಇಂದಿನ ಸ್ಥಿತಿಗೆ ತಂದಿರುವೆ. ನಾನು ನಿಜವಾಗಿಯೂ ಧನ್ಯಳು. ನಿನ್ನ ಬಗ್ಗೆ ನನಗೆ ಇರುವ ಫೀಲಿಂಗ್ಸ್ ವಿವರಿಸಲು ನನಗೆ ಪದಗಳೇ ಸಾಲುವುದಿಲ್ಲ. ಅದನ್ನು ನಾನು ನಿನಗೆ ಈಗಾಗಲೇ ಹೇಳಿದ್ದೇನೆ’ ಎಂದು ರಶ್ಮಿಕಾ ಮಂದಣ್ಣ ಭಾವುಕವಾಗಿ ಈ ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ. ‘ನನ್ನ ಸಾಧನೆ, ಕಷ್ಟಗಳು, ಖುಷಿ, ದುಃಖ, ಬದುಕು ಎಲ್ಲದಕ್ಕೂ ಈಗ ಒಂದು ಅರ್ಥ ಬಂದಿದೆ. ಯಾಕೆಂದರೆ, ಈಗ ನಾನು ನಿನ್ನನ್ನು ಪಡೆದಿರುವೆ. ಇದನ್ನೆಲ್ಲ ನೀನು ನೋಡುತ್ತಿರುವೆ. ಇದರ ಭಾಗವಾಗಿರುವೆ. ನಿನ್ನ ಹೆಂಡತಿಯಾಗಿದ್ದಕ್ಕೆ ನನಗೆ ಬಹಳ ಸಂತೋಷ ಆಗುತ್ತಿದೆ. ಇದು ಪಾರ್ಟಿ ಮಾಡುವ ಸಮಯ’ ಎನ್ನುವ ಮೂಲಕ ರಶ್ಮಿಕಾ ಸಂತಸ ವ್ಯಕ್ತಪಡಿಸಿದ್ದಾರೆ. ‘ಅತ್ಯುತ್ತಮವಾದ ಬದುಕನ್ನು ಜೊತೆಯಾಗಿ ನಡೆಸೋಣ. ಐ ಲವ್ ಯೂ’ ಎನ್ನುವ ಮೂಲಕ ರಶ್ಮಿಕಾ ಮಂದಣ್ಣ ಅವರು ಈ ಬರಹ ಪೂರ್ಣಗೊಳಿಸಿದ್ದಾರೆ.

ಇನ್ನು ವಿಜಯ್ ದೇವರಕೊಂಡ ಕೂಡ ತಮ್ಮ ಬಾಳಿನಲ್ಲಿ ರಶ್ಮಿಕಾ ಮಂದಣ್ಣ ಎಷ್ಟು ಮುಖ್ಯವಾದ ವ್ಯಕ್ತಿ ಎಂಬುದನ್ನು ಪೋಸ್ಟ್ ಮೂಲಕ ವಿವರಿಸಿದ್ದಾರೆ. ಒಂದು ದಿನ ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಂಡೆ. ಅವಳು ನನ್ನ ಜೊತೆಗಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು ಎನಿಸಿತು. ಊಟ ಮಾಡುವಾಗ ಅವಳು ನನ್ನ ಎದುರು ಕುಳಿತಿದ್ದರೆ ಆ ಊಟಕ್ಕೆ ಮತ್ತಷ್ಟು ಅರ್ಥವಿರುತ್ತಿತ್ತು. ವರ್ಕೌಟ್ ಮಾಡುವಾಗ ಅವಳಿದ್ದರೆ ಅದು ಶಿಕ್ಷೆಯಂತೆ ಕಾಣದೆ ಮೋಜಿನಿಂದ ಕೂಡಿರುತ್ತಿತ್ತು ಎನಿಸಿತು. ನಾನು ಎಲ್ಲೇ ಇದ್ದರೂ, ನನಗೆ ಮನೆಯೆಂಬ ನೆಮ್ಮದಿ ಮತ್ತು ಶಾಂತಿ ಸಿಗಲು ಅವಳು ಬೇಕೇ ಬೇಕು ಎನಿಸಿತು. ಹಾಗಾಗಿ, ನಾನು ನನ್ನ ಬೆಸ್ಟ್ ಫ್ರೆಂಡ್ ಅನ್ನು ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ… 26.02.2026 ಎಂದು ವಿಜಯ್ ದೇವರಕೊಂಡ ಪ್ರೀತಿಯಿಂದ ಬರೆದುಕೊಂಡಿದ್ದಾರೆ.

Sulekha

Leave a Reply

Your email address will not be published. Required fields are marked *