ಸೆಹ್ವಾಗ್ ಪತ್ನಿ ಪಟಾಯಿಸ್ಕೊಂಡ ಫ್ರೆಂಡ್ – BCCI ಅಧ್ಯಕ್ಷನ ಜತೆ ಆರತಿ ಅಫೇರ್?
ಅಂದು ದಿನೇಶ್ ಕಾರ್ತಿಕ್.. ಈಗ ಸೆಹ್ವಾಗ್!

ಟೀಂ ಇಂಡಿಯಾದ ಸಾಕಷ್ಟು ಸ್ಟಾರ್ ಕ್ರಿಕೆಟಿಗರು ಪರ್ಸನಲ್ ಲೈಫ್ನಲ್ಲಿ ಅಪ್ಸ್ ಌಂಡ್ ಡೌನ್ಸ್ ಕಂಡಿದ್ದಾರೆ. ಕೆಲವ್ರು ಪತ್ನಿಯಿಂದಲೂ ದೂರಾಗಿದ್ದಾರೆ. ಆದ್ರೆ ದಾಂಪತ್ಯದ ವಿಚಾರದಲ್ಲಿ ಮೋಸ ಹೋಗಿದ್ದು ದಿನೇಶ್ ಕಾರ್ತಿಕ್. ಪ್ರಾಣ ಸ್ನೇಹಿತ ಅಂತಾ ನಂಬಿದ್ದವನೇ ಪತ್ನಿಯನ್ನ ಪಟಾಯಿಸಿಕೊಂಡುಬಿಟ್ಟಿದ್ದ. ಈಗ ವೀರೇಂದ್ರ ಸೆಹ್ವಾಗ್ ಬದುಕಲ್ಲೂ ಇಂಥದ್ದೇ ಸಿಚುಯೇಷನ್ ಬಂದಿದೆ. ಪತ್ನಿಯಿಂದಲೇ ಸೆಹ್ವಾಗ್ ಮೋಸ ಹೋಗಿದ್ದಾರೆ. ಇಲ್ಲೂ ಕೂಡ ಗೆಳೆಯನೇ ಮುಳ್ಳಾಗಿದ್ದಾನೆ.
ದಾಂಪತ್ಯದಲ್ಲಿ ಬಿರುಕು ಬಿಡೋದು, ಡಿವೋರ್ಸ್ ಆಗೋದು ಹೊಸದೇನು ಅಲ್ಲ. ಅದ್ರಲ್ಲೂ ಈಗಂತೂ ಸೆಲೆಬ್ರಿಟಿ ಕಪಲ್ಸ್, ವೆಲ್ ಸೆಟಲ್ಡ್ ಫ್ಯಾಮಿಲಿಗಳಲ್ಲಿ ಇದು ಕಾಮನ್ ಆಗೋಗಿದೆ. ಕ್ರಿಕೆಟಿಗರ ಬದುಕುಲ್ಲೂ ಇದು ನಾರ್ಮಲ್ ಆಗಿದೆ. ಟೀಂ ಇಂಡಿಯಾದ ಸಾಕಷ್ಟು ಕ್ರಿಕೆಟಿಗರು ವಿಚ್ಛೇದನ ಪಡೆದಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವ್ರ ವೈವಾಹಿಕ ಜೀವನ ಕೂಡ ಸುದ್ದಿಯಲ್ಲಿದೆ. ಯಾಕಂದ್ರೆ ವೀರೂ ಕೂಡ ಡಿಕೆಯಂತೆ ತಮ್ಮ ಪತ್ನಿಯಿಂದಲೇ ಮೋಸ ಹೋಗಿದ್ದಾರೆ.
ಬಿಸಿಸಿಐ ಅಧ್ಯಕ್ಷನ ಜೊತೆ ಸೆಹ್ವಾಗ್ ಪತ್ನಿಗೆ ಆಫೇರ್?
ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅದೆಷ್ಟೋ ಯುವಕ್ರಿಕೆಟಿಗರಿಗೆ ಸ್ಪೂರ್ತಿ. ಅವ್ರ ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟೈಲ್, ಓಪನಿಂಗ್ನಲ್ಲಿ ಬಿಗ್ ಹಿಟ್ಗಳ ಪವರ್ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಡ್ತಿದ್ರು. ಹೀಗೆ ಭಾರತದ ಪರ ವರ್ಷಗಟ್ಟಲೆ ಸ್ಟಾರ್ ಕ್ರಿಕೆಟಿಗನಾಗಿ ಮೆರೆದ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಕೆಲ ದಿನಗಳ ಹಿಂದೆ ಸೆಹ್ವಾಗ್ ಮತ್ತು ಪತ್ನಿ ಆರತಿ ಅಹ್ಲಾವತ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿತ್ತು. ಹಾಗೇ ಇಬ್ರೂ ಕೂಡ ಸೆಪರೇಟ್ ಆಗಿ ವಾಸ ಮಾಡ್ತಿದ್ದಾರೆ, ಡಿವೋರ್ಸ್ ಕೂಡ ಆಗ್ಬೋದು ಅನ್ನೋ ಸುದ್ದಿ ಹರಿದಾಡಿತ್ತು. ಬಟ್ ಏನ್ ರೀಸನ್ ಅನ್ನೋದು ಮಾತ್ರ ರಿವೀಲ್ ಆಗಿರಲಿಲ್ಲ. ಬಟ್ ಈಗ ಆ ಸತ್ಯ ಹೊರಬಿದ್ದಿದೆ. ಸೆಹ್ವಾಗ್ ಪತ್ನಿಯ ಪರಸಂಗವೇ ಕಾರಣ ಅನ್ನೋದು ಬಯಲಾಗಿದೆ. ಅದೂ ಕೂಡ ಬಿಸಿಸಿಐನ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್ ಇದಕ್ಕೆ ಕಾರಣವಂತೆ. ಮಿಥುನ್ ಮನ್ಹಾಸ್ ಹಾಗೂ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ನಡುವೆ ಆಫೇರ್ ಇದ್ದು, ಇದೇ ಕಾರಣದಿಂದಾಗಿ ಸೆಹ್ವಾಗ್ ತಮ್ಮ ಪತ್ನಿಯಿಂದ ದೂರಾಗಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. ಇದಕ್ಕೆ ಪುಷ್ಠಿ ನೀಡುದಂತೆ ಆರತಿ ಅಹ್ಲಾವತ್ ಹಾಗೂ ಮಿಥುನ್ ಮನ್ಹಾಸ್ ಜೊತೆಗಿರುವ ಫೋಟೋಗಳು ವೈರಲ್ ಆಗಿವೆ. ಪತ್ನಿಯ ಈ ನೌಟಂಕಿ ಆಟ ಗೊತ್ತಾಗಿದ್ದರಿಂದಲೇ ಸೆಹ್ವಾಗ್ ತಮ್ಮ ಪತ್ನಿಯಿಂದ ದೂರಾಗಿದ್ದಾರೆ ಅನ್ನೋ ಸುದ್ದಿ ಇದೆ.
ಸ್ನೇಹಿತನಿಂದಲೇ ಮೋಸ ಹೋದ್ರಾ ಸೆಹ್ವಾಗ್?
ಅಷ್ಟಕ್ಕೂ ಮಿಥುನ್ ಮತ್ತು ಸೆಹ್ವಾಗ್ ಸ್ನೇಹಿತರು. ಅಷ್ಟೇ ಅಲ್ಲದೆ ಇಬ್ಬರು ಕೂಡ ದೆಹಲಿ ಪರ ಜೊತೆಯಾಗಿ ಆಡಿದ್ದರು. ಸ್ನೇಹಿತನೇ ನಂಬಿಕೆ ದ್ರೋಹ ಎಸೆಗಿದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಗೆಳೆಯನ ಜೊತೆಯೇ ಹೆಂಡ್ತಿಯ ಚೆಲ್ಲಾಟ ಕಂಡು ಬೇಸತ್ತಿದ್ದ ಸೆಹ್ವಾಗ್ ಇದೇ ಕಾರಣಕ್ಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ರು ಅನ್ನೋ ಮಾತುಗಳು ಇವೆ. ಇನ್ನು 1999ರಲ್ಲಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ ವೀರೇಂದ್ರ ಸೆಹ್ವಾಗ್, 2004ರ ಏಪ್ರಿಲ್‌ನಲ್ಲಿ ಆರತಿ ಅಹ್ಲಾವತ್‌ರನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ ಆರ್ಯವೀರ್ ಮತ್ತು ವೇದಾಂತ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಈ ಇಬ್ಬರು ಮಕ್ಕಳು ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. 21 ವರ್ಷಗಳ ಕಾಲ ಜೊತೆಯಾಗಿ ಬಾಳಿದ್ದ ವೀರೇಂದ್ರ ಸೆಹ್ವಾಗ್ ಹಾಗೂ ಆರತಿ ಅಹ್ಲಾವತ್ ಸದ್ಯ ಪತ್ಯೇಕವಾಗಿ ವಾಸಿಸುತ್ತಿದ್ದು, ಶೀಘ್ರದಲ್ಲೇ ಇಬ್ಬರು ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಗೆಳೆಯನಿಂದಲೇ ಮೋಸ ಹೋಗಿದ್ದ ದಿನೇಶ್ ಕಾರ್ತಿಕ್!
ಇನ್ನು ಈ ವಿಚಾರದಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ, ಆರ್ ಸಿಬಿಯ ಮೆಂಟರ್ ದಿನೇಶ್ ಕಾರ್ತಿಕ್ ಕೂಡ ಮೋಸ ಹೋದವರೇ. 2007 ರಲ್ಲಿ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದ ಮೂರು ವರ್ಷಗಳ ನಂತರ ತಮ್ಮ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು ವಿವಾಹವಾಗಿದ್ರು. ಸುಮಾರು 5 ವರ್ಷಗಳ ಕಾಲ ಸ್ವರ್ಗಕ್ಕೆ ಕಿಚ್ಚು ಹಚ್ಚು ಎನ್ನುವಂತೆಯೇ ಚೆನ್ನಾಗಿದ್ದ ಜೋಡಿ ಇದು. ಬಟ್ 2012 ರಲ್ಲಿ ವಿಚ್ಛೇದನದ ಮೂಲಕ ದಾಂಪತ್ಯ ಮುರಿದು ಬಿತ್ತು. ಅದಕ್ಕೆ ಕಾರಣ ದಿನೇಶ್ ಕಾರ್ತಿಕ್ ಅವರ ಆಪ್ತಮಿತ್ರ ಮುರಳಿ ವಿಜಯ್. ನಿಕಿತಾ ಮತ್ತು ಮುರಳಿ ನಡುವೆ ಬೇರೆಯದ್ದೇ ಸಂಬಂಧ ಶುರುವಾಗಿತ್ತು. ಇದು ಗೊತ್ತಾಗ್ತಾ ಇದ್ದಂತೆ ದಿನೇಶ್ ಕಾರ್ತಿಕ್ ತಕ್ಷಣ 2012ರಲ್ಲಿ ನಿಕಿತಾಗೆ ವಿಚ್ಛೇದನ ನೀಡಿದ್ದರು. ಬಳಿಕ ನಿಕಿತಾ ಕೂಡ ಮುರಳಿ ವಿಜಯ್ ಜೊತೆ ಎರಡನೇ ಮದುವೆಯಾಗಿದ್ರು. ಇದ್ರಿಂದ ಕೆಲಕಾಲ ಡಿಪ್ರೆಶನ್ಗೆ ಹೋಗಿದ್ದ ಡಿಕೆ ಬಾಳಲ್ಲಿ ಬಂದಿದ್ದೇ ಭಾರತದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್. 2015 ರಲ್ಲಿ ಇಬ್ಬರೂ ವಿವಾಹವಾದರು.. ಸದ್ಯ ಇಬ್ಬರಿಗೂ ಇಬ್ಬರು ಅವಳಿ ಮಕ್ಕಳಿದ್ದಾರೆ. ದಿನೇಶ್ ಕಾರ್ತಿಕ್ ಎಲ್ಲವನ್ನೂ ಮರೆತು ದೀಪಿಕಾ ಜೊತೆ ಖುಷಿಯಾಗಿದ್ದಾರೆ.

ನೋಡಿರಿ

