ಸಚಿನ್ ಸಾಧನೆಯೇ ಅರ್ಜುನ್ ಗೆ ಅಡ್ಡಿ – ALL-ROUNDER ಆಗಿದ್ದೇ ತಪ್ಪಾ?
ವೀರೂ, ದ್ರಾವಿಡ್ ಪುತ್ರರ ಧಮಾಕಾ!

ಸಚಿನ್ ತೆಂಡೂಲ್ಕರ್.. ಭಾರತ ಕ್ರಿಕೆಟ್ನ ದಂತಕತೆ. ವಿಶ್ವಕ್ರಿಕೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್. ಗಾಡ್ ಆಫ್ ಕ್ರಿಕೆಟ್, ಮಾಸ್ಟರ್ ಬ್ಲಾಸ್ಟರ್ ಅಂತಾನೇ ಕರೆಸಿಕೊಳ್ಳೋ ಸಚಿನ್ ತೆಂಡೂಲ್ಕರ್ 24 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ನ ಜೀವವಾಗಿದ್ರು. ವಿಪರ್ಯಾಸ ಏನಂದ್ರೆ ಇಂಥಾ ದೇವರ ಪುತ್ರನಿಗೆ ಮಾತ್ರ ಕ್ರಿಕೆಟ್ನಲ್ಲಿ ಕೆರಿಯರ್ ಕಟ್ಟಿಕೊಳ್ಳೋಕೆ ಸಾಧ್ಯವಾಗ್ತಿಲ್ಲ. ಈ ಬಗ್ಗೆ ವೀರೇಂದ್ರ ಸೆಹ್ವಾಗ್ ಮಾತನಾಡಿದ್ದಾರೆ. ಅರ್ಜುನ್ ಮೇಲಿರೋ ಪ್ರೆಶರ್ ಎಂಥಾದ್ದು ಅನ್ನೋದನ್ನೂ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ – ಕಬಡ್ಡಿಯಲ್ಲಿ ಚಿನ್ನ ಗೆದ್ದ ಮಹಿಳಾ ತಂಡ
ಭಾರತೀಯ ಕ್ರಿಕೆಟ್ ಜಗತ್ತಿನ ಲೆಜೆಂಡರಿ ಪ್ಲೇಯರ್ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಪುತ್ರರು ಈಗಾಗ್ಲೇ ಭಾರತ ತಂಡದಲ್ಲೂ ಧೂಳೆಬ್ಬಿಸೋಕೆ ಸ್ಟಾರ್ಟ್ ಮಾಡಿದ್ದಾರೆ. ಌಂಡ್ ಇಬ್ರೂ ಒಟ್ಟೊಟ್ಟಿಗೆ ಆಡ್ತಿದ್ದಾರೆ ಅನ್ನೋದು ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ. ಇತ್ತೀಷೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಅಂಡರ್-19 ಸರಣಿಯಲ್ಲಿ ಇಬ್ಬರೂ ಒಟ್ಟಿಗೆ ಭಾರತ ತಂಡದ ಪರ ಕಣಕ್ಕಿಳಿದಿದ್ರು. ಬಟ್ ಅರ್ಜುನ್ ತೆಂಡೂಲ್ಕರ್ ಹಾದಿ ಮಾತ್ರ ಕ್ಲಿಯರ್ ಆಗ್ತಾನೇ ಇಲ್ಲ.
ಸಚಿನ್ ಗೆ ಅರ್ಜುನ್ ಹೋಲಿಕೆ ಮಾಡುವುದು ದೊಡ್ಡ ತಪ್ಪು!
ಭಾರತ ತಂಡದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಇತ್ತೀಚಿನ ಸಂದರ್ಶನವೊಂದರಲ್ಲಿ ಅರ್ಜುನ್ ತೆಂಡೂಲ್ಕರ್ ಮತ್ತು ಸಚಿನ್ ತೆಂಡೂಲ್ಕರ್ ನಡುವಿನ ಹೋಲಿಕೆಗಳ ಬಗ್ಗೆ ಮಾತನಾಡಿದ್ದಾರೆ. ಅರ್ಜುನ್ ತೆಂಡೂಲ್ಕರ್ನನ್ನು ಅವರ ತಂದೆ ಸಚಿನ್ಗೆ ಹೋಲಿಸುವುದು ಸಂಪೂರ್ಣವಾಗಿ ತಪ್ಪು ಮತ್ತು ಅನ್ಯಾಯ ಎಂದಿದ್ದಾರೆ. ಹಾಗೇ ಸಚಿನ್ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಆದರೆ ಅರ್ಜುನ್ ಈಗಷ್ಟೇ ಬೆಳೆಯುತ್ತಿರುವ ಯುವ ಆಟಗಾರ. ಸಚಿನ್ ಬ್ಯಾಟ್ಸ್ಮನ್ ಆಗಿದ್ದರು. ಆದರೆ ಅರ್ಜುನ್ ಒಬ್ಬ ಫಾಸ್ಟ್ ಬೌಲಿಂಗ್ ಆಲ್ರೌಂಡರ್. ಅವರು ಈಗಾಗಲೇ ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ್ದಾರೆ ಮತ್ತು 5 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ. ಹೀಗಿರುವಾಗ ಅವರನ್ನು ಸಚಿನ್ ಜೊತೆ ಹೋಲಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅರ್ಜುನ್ ಯಾರ ಹೆಜ್ಜೆಯನ್ನೂ ಅನುಸರಿಸುವ ಅಗತ್ಯವಿಲ್ಲ, ಅವರು ತಮ್ಮದೇ ಆದ ಶೈಲಿಯಲ್ಲಿ ಆಡಿ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಹೆಸರನ್ನ ಮಾಡ್ತಾರೆ ಅಂತಾ ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮ್ಮ ಮಗನ ಬಗ್ಗೆಯೂ ಮಾತನಾಡಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಕೂಡ ಭಾರತದ U-19 ತಂಡದಲ್ಲಿ ಆಡುತ್ತಿದ್ದಾರೆ. ಈ ಬಗ್ಗೆಯೂ ಸೆಹ್ವಾಗ್ ಮಾತನಾಡಿದ್ದಾರೆ. ಮಕ್ಕಳು ಮೈದಾನಕ್ಕಿಳಿದಾಗ ಮಾಧ್ಯಮಗಳು ಅಥವಾ ಜನರು ತಂದೆಯ ಸಾಧನೆಗಳೊಂದಿಗೆ ಹೋಲಿಸಿದರೆ ಮಕ್ಕಳಿಗೆ ತೀವ್ರ ಬೇಸರ ಮತ್ತು ಒತ್ತಡ ಉಂಟಾಗುತ್ತದೆ. ಮೊದಲು ಅವರಿಗೆ ಮುಕ್ತವಾಗಿ ಆಡಲು ಬಿಡಿ, ಆಮೇಲೆ ಹೋಲಿಕೆ ಮಾಡಿ ಎಂದಿದ್ದಾರೆ.
ಅಷ್ಟಕ್ಕೂ ಇಲ್ಲಿ ಅರ್ಜುನ್ ತೆಂಡೂಲ್ಕರ್ರಲ್ಲೂ ಕೂಡ ಟ್ಯಾಲೆಂಟ್ ಇದ್ದೇ ಇದೆ. ಗೋವಾ ತಂಡದ ಪರ ರಣಜಿ ಆಡುತ್ತಿರುವ ಅರ್ಜುನ್ ತಮ್ಮ ಚೊಚ್ಚಲ ರಣಜಿ ಟ್ರೋಫಿ ಪಂದ್ಯದಲ್ಲೇ ರಾಜಸ್ಥಾನ ವಿರುದ್ಧ 120 ರನ್ ಗಳಿಸಿ ಶತಕ ಬಾರಿಸಿದ್ರು. ಇತ್ತೀಚಿನ ರಣಜಿ ಆವೃತ್ತಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ 5 ವಿಕೆಟ್ ತೆಗೆದು ಬೌಲಿಂಗ್ನಲ್ಲೂ ಮಿಂಚಿದ್ರು. ಹಾಗೇ ಐಪಿಎಲ್ನಲ್ಲಿ 2021ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದ್ದ ಅರ್ಜುನ್ 2023ರಲ್ಲಿ ತಮ್ಮ ಚೊಚ್ಚಲ ಐಪಿಎಲ್ ಪಂದ್ಯ ಆಡಿದರು. 2026ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 30 ಲಕ್ಷ ರೂಪಾಯಿ ಮೊತ್ತಕ್ಕೆ ಟ್ರೇಡ್ ಆಗಿದ್ದಾರೆ. ಌಂಡ್ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಪರ ಆಡಿದ ಚೊಚ್ಚಲ ಪಂದ್ಯದಲ್ಲೂ ವಿಕೆಟ್ ಪಡೆದು ಗಮನ ಸೆಳೆದಿದ್ರು. ಆದ್ರೆ ಅವ್ರಲ್ಲಿರೋ ಟ್ಯಾಲೆಂಟ್ಗೆ ತಕ್ಕಂತೆ ಆಪರ್ಚುನಿಟಿಗಳು ಸಿಗ್ತಿಲ್ಲ ಅನ್ನೋದೇ ಸತ್ಯ.

ನೋಡಿರಿ

