ದತ್ತು ಮಗ Vs ಮನೆ ಮಗ.. ಬಾಕಿ ಚುಕ್ತಾ – ಕೆಣಕಿದವರನ್ನು ಅಣಕಿಸದೇ ಬಿಡಲ್ಲ ಚೀಕೂ!
ಟ್ರೆಂಡ್ ಆಯ್ತು ‘ಮೈ ಹೋಮ್ ಗ್ರೌಂಡ್’

ದತ್ತು ಮಗ Vs ಮನೆ ಮಗ.. ಬಾಕಿ ಚುಕ್ತಾ – ಕೆಣಕಿದವರನ್ನು ಅಣಕಿಸದೇ ಬಿಡಲ್ಲ ಚೀಕೂ!ಟ್ರೆಂಡ್ ಆಯ್ತು ‘ಮೈ ಹೋಮ್ ಗ್ರೌಂಡ್’

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಇದು ಬೆಂಗಳೂರಿಗರ ಹೃದಯ ಬಡಿತವೇ ಆಗಿ ಹೋಗಿದೆ. ಹೀಗಿದ್ದಾಗ ಆರ್‌ಸಿಬಿ ತಂಡವನ್ನ ಕೆಣಕಿದರೆ ಉಳಿಗಾಲ ಇಲ್ಲ ಎನ್ನಬಹುದು. ಈಗಾಗಲೇ ಹಲವು ಕ್ರಿಕೆಟ್ ಪ್ಲೇಯರ್ಸ್ ಆರ್‌ಸಿಬಿ ಸಹವಾಸಕ್ಕೆ ಬಂದು, ಐಪಿಎಲ್ ಬಿಟ್ಟು ಓಡಿ ಹೋಗಿದ್ದಾರೆ. ಹೀಗಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹವಾಸಕ್ಕೆ ಬಂದಿದ್ದ ಕನ್ನಡಿಗ ಕೆ.ಎಲ್. ರಾಹುಲ್‌ಗೆ ಕೊಹ್ಲಿ  ಸಖತ್ ಟಾಂಗ್ ಕೊಟ್ಟಿದ್ದಾರೆ. ಆರ್‌ಸಿಬಿಯ ವಿರಾಟ್‌ ಕೊಹ್ಲಿ ಮತ್ತು ಡಿಸಿಯ ಕೆಎಲ್‌ ರಾಹುಲ್‌ ನಡುವೆ ಇದೀಗ “ಮೈ ಹೋಮ್‌ ಗ್ರೌಂಡ್”‌ ಸೆಲೆಬ್ರೆಷನ್‌ ಸ್ಪರ್ಧೆ ಏರ್ಪಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯನ್ನು ಮಣಿಸಿ ಈ ಐಕಾನಿಕ್ ಸೆಲೆಬ್ರೆಷನ್‌ ಮಾಡಿದ್ದ ಕೆಎಲ್‌ ರಾಹುಲ್‌ ಅವರಿಗೆ, ಹೊಸದಿಲ್ಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಅದೇ ಸೆಲೆಬ್ರೆಷನ್‌ ಮಾಡಿ ವಿರಾಟ್‌ ಕೊಹ್ಲಿ ತಿರುಗೇಟು ನೀಡಿದ್ದಾರೆ. ಆದರೆ ವಿರಾಟ್‌ ಕೊಹ್ಲಿ ಅವರ ಸೆಲೆಬ್ರೆಷನ್‌ ಅಗ್ರೆಸ್ಸಿವ್ ಆಗಿರದೇ, ಗೆಳೆಯರ ನಡುವಿನ ಹಾಸ್ಯದಂತಿತ್ತು.

“ದಿಸ್‌ ಈಸ್‌ ಮೈ ಹೋಮ್‌ಗ್ರೌಂಡ್”‌ ಎಂದು ಡೆಲ್ಲಿ ಕ್ಯಾಪಿಟಲ್ಸ್‌  ಸ್ಟಾರ್‌ ಆಟಗಾರ ಕೆಎಲ್‌ ರಾಹುಲ್‌ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟ್‌ ನೆಟ್ಟಾಗ, ಇಡೀ ಕ್ರಿಕೆಟ್‌ ಲೋಕ ಅಚ್ಚರಿಯ ಕಣ್ಣುಗಳಿಂದ ನೋಡಿತ್ತು. ಬೆಂಗಳೂರಿಗೆ ಬಂದು ಚಿನ್ನಸ್ವಾಮಿ ಮೈದಾನದಲ್ಲಿ ತವರು ಅಭಿಮಾನಿಗಳ ಎದುರಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮಣಿಸಿ ಬೀಗಿದ್ದ ಕೆಎಲ್‌ ರಾಹುಲ್‌, “ಚಿನ್ನಸ್ವಾಮಿ ಅಂಗಳ ನನ್ನದು” ಎಂದು ಅಪ್ಪಟ ಕಾಂತಾರಾ ಸ್ಟೈಲ್‌ನಲ್ಲಿ ಎದೆತಟ್ಟಿ ಹೇಳಿದ್ದರು. ಇದು ಆರ್‌ಸಿಬಿ ಅಭಿಮಾನಿಗಳಿಗೆ ಒಂದು ರೀತಿಯ ಖುಷಿ ನೀಡ್ತು..ಯಾಕಂದ್ರೆ ಕನ್ನಡಿಗ ಗೆದ್ದ ಅಂತ. ಆದ್ರೆ ಆರ್‌ಸಿಬಿ ಸೋಲ್ತು ಅನ್ನೋ ಬೇಜಾರ್ ಕೂಡ ಇತ್ತು..ಅಂದ್ರೆ ಇಲ್ಲಿ ಯಾರನ್ನೂ ಬೈಯೋಕೆ ಆಗಲ್ಲ.. ಯಾಕಂದ್ರೆ ಎಲ್ಲಾ ನಮ್ಮವರೇ..

ತಮಾಷೆಯಾಗಿ “ಮೈ ಹೋಮ್‌ ಗ್ರೌಂಡ್”‌ ಸೆಲೆಬ್ರೆಷನ್‌ ಮಾಡಿದ ಕೊಹ್ಲಿ

ಆರ್‌ಸಿಬಿ ಡೆಲ್ಲಿ ವಿರುದ್ಧ ಗೆದ್ದ ಬಳಿಕ ವಿರಾಟ್‌ ಕೊಹ್ಲಿ ಅವರು ಕೆಎಲ್‌ ರಾಹುಲ್‌ ಅವರ ಮುಂದೆಯೇ “ಮೈ ಹೋಮ್‌ ಗ್ರೌಂಡ್”‌ ಸೆಲೆಬ್ರೆಷನ್‌ ಮಾಡಿದರು. ಈ ಮೂಲಕ ಚಿನ್ನಸ್ವಾಮಿಯಲ್ಲಿ ಕೆಎಲ್‌ ರಾಹುಲ್‌ ಮಾಡಿದ್ದ ಸೆಲೆಬ್ರೆಷನ್‌ಗೆ ವಿರಾಟ್‌ ಕೊಹ್ಲಿ ಪ್ರತ್ಯುತ್ತರ ನೀಡಿದರು. ಆದರೆ ವಿರಾಟ್‌ ಕೊಹ್ಲಿ ಅವರ ಸೆಲೆಬ್ರೆಷನ್‌ ಕೆಎಲ್‌ ರಾಹುಲ್‌ ಅವರಷ್ಟು ಅಗ್ರೆಸ್ಸಿವ್‌ ಆಗಿರಲಿಲ್ಲ ಎಂಬುದು ನಿಜ. ಪಂದ್ಯದ ಬಳಿಕ ಕೆಎಲ್‌ ರಾಹುಲ್‌ ಅವರತ್ತ ಆಗಮಿಸಿದ ವಿರಾಟ್‌ ಕೊಹ್ಲಿ, ಮೈದಾನತ್ತ ಕೈ ತೋರಿಸುತ್ತಾ “ಇದು ನನ್ನಮೈದಾನ” ಎಂದು ನಗುತ್ತಲೇ ಹೇಳಿದರು. ಅಲ್ಲದೇ ಕೆಎಲ್‌ ರಾಹುಲ್‌ ಅವರನ್ನು ಅಪ್ಪಿಕೊಂಡು ಆಪ್ತತೆ ಮೆರೆದರು. ಕೆಎಲ್‌ ರಾಹುಲ್‌ ಕೂಡ ವಿರಾಟ್‌ ಕೊಹ್ಲಿ ಅವರ ಸೆಲೆಬ್ರೆಷನ್‌ ಕಂಡು ನಗೆ ಬೀರಿದರು. ಅಲ್ಲದೇ ಕೊಹ್ಲಿ ಆಲಿಂಗನವನ್ನು ಸ್ವೀಕರಿಸಿದರು.

 

ಒಟ್ನಲ್ಲಿ ಕೆಎಲ್ ರಾಹುಲ್ ಅವರ ಮೈ ಹೋಮ್‌ ಗ್ರೌಂಡ್ ಸೆಲೆಬ್ರೆಷನ್‌ಗೆ ಕೊಹ್ಲಿ ರಿಪ್ಲೈ ಮಾಡಿದ್ದು  ನೋಡುಗರಿಗೆ  ಇದು ಒಂದು ರೀತಿಯ ಮಾಜಾ ನೀಡ್ತು ಹೊರತು. ಎಲ್ಲೂ ಕೂಡ ಕೊಹ್ಲಿ ಹೀಗ್ ಮಾಡಬಾರದಿತ್ತು ಅಂತ ಅನ್ಸಿಲ್ಲ.. ಟಾಂಗ್ ಕೊಟ್ರು ನಗುವಿನ ಲೇಪನ ಹಚ್ಚಿ ಕೊಟ್ಟಿದ್ರಿಂದ ನೋಡೋಕೆ ಸುಂದರವಾಗಿ ಕಾಣುತಿತ್ತು..

Kishor KV

Leave a Reply

Your email address will not be published. Required fields are marked *