ಮುದ್ದು ಮಗನ ಜೊತೆ ಲಂಡನ್ ಬೀದಿಯಲ್ಲಿ ವಿರಾಟ್ ರೌಂಡ್ಸ್ – ಸಾಮಾನ್ಯನಂತೆ ಕಿಂಗ್ ಕೊಹ್ಲಿ ಸುತ್ತಾಟ

ಮುದ್ದು ಮಗನ ಜೊತೆ ಲಂಡನ್ ಬೀದಿಯಲ್ಲಿ ವಿರಾಟ್ ರೌಂಡ್ಸ್ – ಸಾಮಾನ್ಯನಂತೆ ಕಿಂಗ್ ಕೊಹ್ಲಿ ಸುತ್ತಾಟ

ತಂದೆ ಕ್ರಿಕೆಟ್ ಜಗತ್ತಿನ ಕಿಂಗ್. ಅಮ್ಮ ಬಾಲಿವುಡ್ ಹೀರೋಯಿನ್.. ಇಬ್ಬರೂ ಸೆಲೆಬ್ರಿಟಿಗಳೇ. ಹೌದು. ಕಿಂಗ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸೆಲೆಬ್ರಿಟಿ ದಂಪತಿಗೆ ಭಾರತದಲ್ಲಿ ಸಾಮಾನ್ಯರಂತೆ ಬದುಕಲು ಇಷ್ಟ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಲಂಡನ್ ಸೇರಿದ ವಿರುಷ್ಕಾ ದಂಪತಿ ಅಲ್ಲಿ ತಮ್ಮ ಮಕ್ಕಳ ಜೊತೆ ಫ್ರೀಯಾಗಿ ಓಡಾಡಿಕೊಂಡಿದ್ದಾರೆ.

ಇದನ್ನೂ ಓದಿ:ಆರ್​ಸಿಬಿ ಫ್ಯಾನ್ಸ್​ಗೆ ಗುಡ್‌ನ್ಯೂಸ್ – ಚಿನ್ನಸ್ವಾಮಿಯಲ್ಲೇ ನಡೆಯಲಿದ ಉದ್ಘಾಟನಾ ಪಂದ್ಯ ಸೇರಿ 5 ಪಂದ್ಯ

ಟೀಮ್ ಇಂಡಿಯಾ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ವೈಯಕ್ತಿಕ ಜೀವನವನ್ನು ಸದಾ ಕಾಪಾಡಿಕೊಳ್ಳಲು ಇಷ್ಟಪಡುತ್ತಾರೆ. ಇದೀಗ ಮಕ್ಕಳಾದ ವಮಿಕಾ ಮತ್ತು ಅಕಾಯ್‌ಗಾಗಿ ದೂರದ ಲಂಡನ್ ನಲ್ಲಿ ಹೋಗಿ ನೆಲಿಸಿದ್ದಾರೆ. ಅದಕ್ಕೆ ಕಾರಣನೂ ಇದೆ. ತಮ್ಮ ಮಕ್ಕಳನ್ನು ಸಾಮಾನ್ಯ ಕುಟುಂಬದಂತೆ ಬೆಳೆಸುವ ಸಲುವಾಗಿ ಜೊತೆಗೆ ತಮ್ಮ ಪ್ರಖ್ಯಾತಿಯಿಂದ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಈ ಹಿಂದೆಯೇ ಅನುಷ್ಕಾ ಹಾಗೂ ವಿರಾಟ್ ಸಂದರ್ಶನ ಒಂದರಲ್ಲಿ ಹೇಳಿದ್ದರು. ಜೊತೆಗೆ ವಿರಾಟ್ ಕೊಹ್ಲಿ ಕೂಡಾ ಫ್ಯಾಮಿಲಿ ಗೆ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ. ಇದೀಗ ಲಂಡನ್ ನಲ್ಲಿದ್ದುಕೊಂಡು ಪೂರ್ತಿ ಸಮಯವನ್ನು ಫ್ಯಾಮಿಲಿಗೆ ಮೀಸಲಿಟ್ಟಿದ್ದಾರೆ. ಇದಕ್ಕೆ ಸಾಕ್ಷಿಯಾಗುವಂತಿದೆ ಒಂದು ವಿಡಿಯೋ.

ಹೌದು. ವಿರಾಟ್ ಕೊಹ್ಲಿ ತನ್ನ ಮುದ್ದು ಮಗ ಅಕಾಯ್ ಜೊತೆ ಆರಾಮಾಗಿ ಲಂಡನ್ ಬೀದಿಯಲ್ಲಿ ಸುತ್ತುತ್ತಿದ್ದಾರೆ. ಯಾವ ಕ್ಯಾಮರಾಗಳ ತಲೆಬಿಸಿಯಿಲ್ಲ. ಫ್ಯಾನ್ಸ್ ಬಂದು ಮುತ್ತಿಗೆ ಹಾಕುವುದಿಲ್ಲ. ಅಪ್ಪ ಮಗ ಅವರದ್ದೇ ಲೋಕದಲ್ಲಿ ಆರಾಮಾಗಿ ತಿರುಗಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ.  ವಿರಾಟ್ ತಮ್ಮ ಮಗ ಅಕಾಯ್ ಕೈ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ವಿರಾಟ್ ಹಸಿರು ಬಣ್ಣದ ಶರ್ಟ್ ಹಾಗೂ ಬಿಳಿ ಪ್ಯಾಂಟ್ ಧರಿಸಿದ್ದಾರೆ.

Sulekha

Leave a Reply

Your email address will not be published. Required fields are marked *