KL ಇಲ್ಲದೇ ಸೋತ IND- ಎದ್ದು ಬಿದ್ದು ಗೆದ್ದ ಬ್ರೂಕ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ರೋಹಿತ್ ಶರ್ಮಾ ಭಾನುವಾರ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತದ ಪರ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ಆಡಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ನಿವೃತ್ತಿಯಾಗಬೇಕೇ ಅಥವಾ ಮುಂದುವರಿಯಬೇಕೇ ಎಂಬ ಅಂತಿಮ ನಿರ್ಧಾರವನ್ನು ಅವರಿಗೇ ಬಿಡಲಾಗಿದೆ. ಆದರೆ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿ ಮುಕ್ತಾಯಗೊಂಡ ಬಳಿಕ 39ರ ವಯಸ್ಸಿನ ಬಲಗೈ ಬ್ಯಾಟ್ಸ್‌ಮನ್ ರೋಹಿತ್‌ರನ್ನ ತಂಡದ ಆಯ್ಕೆಗೆ ಪರಿಗಣಿಸದಿರಲು ಆಯ್ಕೆ ಸಮಿತಿ ಈಗಾಗಲೇ ನಿರ್ಧರಿಸಿದೆ ಎನ್ನಲಾಗಿದೆ
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಕೇವಲ 11 ರನ್‌ಗಳಿಗೆ ಔಟಾಗಿದ್ದ ರೋಹಿತ್ ಎರಡನೇ ಪಂದ್ಯದಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ರೋಹಿತ್ ಈ ಪಂದ್ಯದಲ್ಲಿ ಬರೋಬ್ಬರಿ 47 ಎಸೆತಗಳನ್ನು ಎದುರಿಸಿ ಕೇವಲ 26 ರನ್ ಕಲೆಹಾಕಿದರು. ಕಾರ್ಡಿಫ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶೇ. 29.1 ರಷ್ಟು ಕಳಪೆ ಶಾಟ್ ಆಡಿದ್ದಾರೆ.
ಇದನ್ನೂ ಓದಿ: 2ನೇ ಏಕದಿನ ಪಂದ್ಯದಲ್ಲಿ ಗೆದ್ದ ರೂಟ್ ಪಡೆ – ಕೊಹ್ಲಿ ಶ್ರೇಯಸ್ ಅರ್ಧ ಶಕತ ವ್ಯರ್ಥ
ಅಂತರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಜೋಡಿಗಳ ಪಟ್ಟಿಯಲ್ಲಿ ರೋ-ಕೋ’ ಜೋಡಿ ಹೊಸ ಹೆಜ್ಜೆ ಇಟ್ಟಿದೆ. ಈ ಹಿಂದೆ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಜೋಡಿಯು 6,300ಕ್ಕೂ ಅಧಿಕ ರನ್‌ಗಳ ಜೊತೆಯಾಟ ಹೊಂದಿತ್ತು. ಇದೀಗ ರೋಹಿತ್ ಮತ್ತು ವಿರಾಟ್ ಈ ಮೊತ್ತವನ್ನು ದಾಟುವ ಮೂಲಕ ಈ ಕಿವೀಸ್ ಜೋಡಿಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಜೋಡಿ 8028 ರನ್‌ಗಳ ಜೊತೆಯಾಟವಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ , ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ದಾಖಲೆಯೊಂದನ್ನು ಮುರಿದಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ರನ್ ಗಳಿಸಿ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇಂಗ್ಲೆಂಡ್ ಎದುರು ಎಲ್ಲಾ ಸ್ವರೂಪದಲ್ಲಿಯೂ ಕೊಹ್ಲಿ 2646 ರನ್‌ಗಳನ್ನು ದಾಖಲಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಅಪಾಯಕಾರಿ’ ರೀತಿಯಲ್ಲಿ ಚೆಂಡನ್ನು ಎಸೆದಿದ್ದಕ್ಕಾಗಿ ಭಾರತದ ವೇಗದ ಬೌಲರ್ ಗುರ್ನೂರ್ ಬ್ರಾರ್ ಅವರಿಗೆ ಎಚ್ಚರಿಕೆ ಹಾಗೂ ಒಂದು ಡಿಮೆರಿಟ್ ಪಾಯಿಂಟ್‌ನ್ನ ICC ನೀಡಿದೆ. ಬ್ರಾರ್ ತಮ್ಮ ತಪ್ಪನ್ನು ಒಪ್ಪಿಕೊಂಡು, ವಿಧಿಸಿದ ದಂಡವನ್ನ ಸ್ವೀಕರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ODI ಸರಣಿಲಿ ಮೊದಲ ಪಂದ್ಯದಲ್ಲಿ ಕೇವಲ ಒಂದು ರನ್ನಿಗೆ ಔಟ್ ಆಗಿದ್ದಕ್ಕೆ ಎರಡನೆಯ ಪಂದ್ಯದಲ್ಲಿ ರಾಹುಲ್‌ರನ್ನ ಕೈ ಬಿಡಲಾಗಿತ್ತು. ಒಂದು ವೇಳೆ ಎರಡನೇ ಪಂದ್ಯದಲ್ಲಿ ರಾಹುಲ್‌ಗೆ ಚಾನ್ಸ್ ನೀಡಿದ್ರೆ ಚೆನ್ನಾಗಿ ಆಡುತ್ತಿದ್ದರು ಅಂತ ಫ್ಯಾನ್ಸ್ ಬೇಸರ ಹೊರ ಹಾಕಿದ್ದಾರೆ. ಹಾಗೇ ಇನ್ನೂ ಕೆಲವರು ಕೆಎಲ್‌ಗೆ ಚಾನ್ಸ್ ನೀಡಿದ್ರೆ ಟೀಂ ಇಂಡಿಯಾ ಗೆಲ್ಲುತಿತ್ತು ಅಂತ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ತಮ್ಮ ತಂಡವನ್ನ ಎದ್ದು ಬಿದ್ದು ಗೆಲ್ಲಿಸಿದ್ದಾರೆ. 4 ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಹ್ಯಾರಿ ಬ್ರೂಕ್ 16 ಬಾಲ್‌ಗೆ 16 ರನ್‌ಗಳಿಸಿದ್ದಾರೆ. ಈ ವೇಳೆ ಮೈದಾನದಲ್ಲಿ ಸಾಕಷ್ಟು ಸಲ ಬ್ಯಾಟ್ ಬೀಸುತ್ತಾ ಬ್ರೂಕ್ ಮೈದಾನದಲ್ಲಿ ಬಿದ್ದಿದ್ದಾರೆ . ಪೇದೇ ಪೇದೆ ಮೈದಾನದಲ್ಲಿ ಬೀಳುತ್ತಿದ್ದರು.
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಯೋಜನೆಗಳಿಂದ ರವೀಂದ್ರ ಜಡೇಜಾ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಕೈ ಬಿಟ್ಟಿದೆ ಎಂದು ಹೇಳಾಗುತ್ತಿದೆ. ಜಡೇಜಾ ಬದಲು ಸ್ಪಿನ್ ಆಲ್‌ರೌಂಡರ್ ಆಗಿ ಅಕ್ಷರ್ ಪಟೇಲ್ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ವರದಿಯಾಗಿವೆ. ಅಕ್ಷರ್ ಪಟೇಲ್ ಇದೀಗ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ ರವೀಂದ್ರ ಜಡೇಜಾ ಅವರನ್ನು 50 ಓವರ್‌ಗಳ ಸ್ವರೂಪದಿಂದ ಕೈ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
39ನೇ ವಯಸ್ಸಲ್ಲಿ ಕೀರನ್ ಪೊಲಾರ್ಡ್ ವಿಶೇಷ ದಾಖಲೆ ಬರೆದಿದ್ದಾರೆ. ಪೊಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ 1,000 ಸಿಕ್ಸರ್‌ಗಳನ್ನು ಪೂರ್ಣಗೊಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಮುಂಬೈ ನ್ಯೂಯಾರ್ಕ್ ತಂಡದ ಪರ ಆಡುತ್ತಿರುವ ಪೊಲಾರ್ಡ್, ವಾಷಿಂಗ್ಟನ್ ಫ್ರೀಡಂ ವಿರುದ್ಧದ ‘ಎಲಿಮಿನೇಟರ್ 1’ ಪಂದ್ಯದ ಸಮಯದಲ್ಲಿ ಈ ಸಾಧನೆ ಮಾಡಿದರು.
ಮೇಜರ್ ಲೀಗ್ ಕ್ರಿಕೆಟ್ 2026ರಲ್ಲಿ ವಾಷಿಂಗ್ಟನ್ ಫ್ರೀಡಂ ಮತ್ತು ಎಂಐ ನ್ಯೂಯಾರ್ಕ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಗೆಲುವು ದಾಖಲಿಸಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ 267 ರನ್‌ಗಳ ಅತ್ಯಂತ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದಿರುವುದು ಇದೇ ಮೊದಲು. ಹಾಗೇ ಪುರುಷರ ಟಿ20 ಪಂದ್ಯದಲ್ಲಿ ಮೂರು ಶತಕಗಳು ದಾಖಲಾದ ಮೊದಲ ಪಂದ್ಯ ಇದಾಗಿದೆ. ಎರಡೂ ಇನ್ನಿಂಗ್ಸ್ ಗಳಿಂದ ಬರೊಬ್ಬರಿ 51 ಸಿಕ್ಸರ್ ಗಳು ಹರಿದುಬಂದಿದ್ದು, ಇದು ಟಿ20 ಇತಿಹಾಸದಲ್ಲೇ ಹೊಸ ದಾಖಲೆ ಆಗಿದೆ.

ನೋಡಿರಿ

