ಫಿಫ್ಫಿ, ಪಂದ್ಯಶ್ರೇಷ್ಠದಲ್ಲೂ RCB ಚರಿತ್ರೆ – 14 ಮ್ಯಾಚ್.. 10 ವಿನ್.. ದಾಖಲೆಗಳೆಷ್ಟು?
ಅರ್ಧಶತಕ ಸಿಡಿಸಿ ಮೆರೆದವರು ಯಾರು?

ಫಿಫ್ಫಿ, ಪಂದ್ಯಶ್ರೇಷ್ಠದಲ್ಲೂ RCB ಚರಿತ್ರೆ – 14 ಮ್ಯಾಚ್.. 10 ವಿನ್.. ದಾಖಲೆಗಳೆಷ್ಟು?ಅರ್ಧಶತಕ ಸಿಡಿಸಿ ಮೆರೆದವರು ಯಾರು?

ಆರ್​​ಸಿಬಿ ಈ ಸಲ ಫೈನಲ್ ಪ್ರವೇಶ ಪಡೆದಿದೆ ಅನ್ನೋದಕ್ಕಿಂತ ಟೀಂ ಪರ್ಫಾಮೆನ್ಸ್ ಮೇನ್ ಹೈಲೆಟ್ ಆಗಿದೆ. ಲೀಗ್ ಹಂತದ 14 + ಕ್ವಾಲಿಫೈಯರ್ 1 ಸೇರಿ ಟೋಟಲ್ 15 ಮ್ಯಾಚಸ್ ಆಗುತ್ತೆ. ಬಟ್ ಕೆಕೆಆರ್ ವಿರುದ್ಧದ ಮ್ಯಾಚ್ ರದ್ದಾಗಿದ್ರಿಂದ ಆರ್​ಸಿಬಿ ಕಣಕ್ಕಿಳಿದಿರೋದೇ 14 ಮ್ಯಾಚ್​ಗಳಲ್ಲಿ. ಬಟ್ ಈ 14 ಮ್ಯಾಚ್​ಗಳಲ್ಲೂ ಬೆಂಗಳೂರು ಟೀಂ ಸಖತ್ ಸೌಂಡ್ ಮಾಡಿದೆ. ಗೆದ್ರೂ ಸೋತ್ರು ಪಂದ್ಯದಿಂದ ಪಂದ್ಯಕ್ಕೆ ಆರ್​ಸಿಬಿಯ ಬೇರೆ ಬೇರೆ ಪ್ಲೇಯರ್ಸ್ ಶೈನ್ ಆಗಿದ್ದಾರೆ.

ಇದನ್ನೂ ಓದಿ : MIಗೆ ಮ್ಯಾಚ್ ದಾನ ಮಾಡಿದ GT.. ಕ್ಯಾಚ್ ಮಿಸ್.. ಗಿಲ್ ಫೇಲ್.. ಕಾಸ್ಟ್ಲಿ ರನ್ಸ್! – ಫೈನಲ್ ಟಿಕೆಟ್ ಮುಂಬೈಗೆ ಬುಕ್ ಆಯ್ತಾ?

ಆರ್​ಸಿಬಿ ಟೀಂ ಈ ಸಲ ಟೋಟಲಿ ಡಿಫ್ರೆಂಟ್ ಆಗಿರೋದಕ್ಕೆ ಕಾರಣವೇ ಟೀಂ ಪರ್ಫಾಮೆನ್ಸ್.. ಓಪನರ್ ಬ್ಯಾಟರ್​ನಿಂದ ಹಿಡ್ದು ಡೆತ್ ಔವರ್ ಬೌಲರ್​ವರೆಗೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಆರ್‌ಸಿಬಿ ಲೀಗ್‌ ಹಂತದಿಂದ ಹಿಡಿದು ಮೊದಲ ಕ್ವಾಲಿಫೈಯರ್‌ ಸೇರಿ ಒಟ್ಟು 14 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಈ ಪೈಕಿ 10 ಪಂದ್ಯಗಳನ್ನು ಗೆದ್ದಿದೆ. ಇಂಟ್ರೆಸ್ಟಿಂಗ್ ಅಂದ್ರೆ ಒಟ್ಟು ಬೇರೆ ಬೇರೆ ಆಟಗಾರರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗಳು ಲಭಿಸಿವೆ. ಈ ಅಂಕಿ ಅಂಶಗಳೇ ಆರ್‌ಸಿಬಿ ತಂಡದ ಸ್ಟ್ರೆಂಥ್ ಏನು ಅನ್ನೋದನ್ನ ಪ್ರೂವ್ ಮಾಡ್ತಿದೆ.

ಪಂದ್ಯ ಶ್ರೇಷ್ಠ ಸಾಧನೆ!

ಆಟಗಾರರ                              ಎದುರಾಳಿ                   ಸಾಧನೆ

ಕೃನಾಲ್ ಪಾಂಡ್ಯ              ಕೆಕೆಆರ್                    3 ವಿಕೆಟ್

ರಜತ್ ಪಾಟಿದಾರ್           ಸಿಎಸ್ ಕೆ                    51 ರನ್

ರಜತ್ ಪಾಟಿದಾರ್             ಮುಂಬೈ                   64 ರನ್

ಫಿಲ್ ಸಾಲ್ಟ್‌                    ರಾಜಸ್ಥಾನ                 65 ರನ್

ಟಿಮ್ ಡೇವಿಡ್                 ಪಂಜಾಬ್                 50 ರನ್

ವಿರಾಟ್ ಕೊಹ್ಲಿ                  ಪಂಜಾಬ್                   74 ರನ್

ಜೋಶ್ ಹೇಜಲ್ ವುಡ್           ರಾಜಸ್ಥಾನ                  4 ವಿಕೆಟ್

ಕೃನಾಲ್ ಪಾಂಡ್ಯ                   ದೆಹಲಿ                      73 ರನ್

ರೊಮ್ಯಾರಿಯೋ ಶೆಫರ್ಡ್           ಸಿಎಸ್ ಕೆ                  53 ರನ್

ಜಿತೇಶ್ ಶರ್ಮಾ                   ಲಕ್ನೋ                     85 ರನ್

ಸುಯಾಶ್ ಶರ್ಮಾ                  ಪಂಜಾಬ್                3 ವಿಕೆಟ್

ಬರೀ ಪಂದ್ಯ ಶ್ರೇಷ್ಠ ಮಾತ್ರ ಅಲ್ಲ. ಆರ್​ಸಿಬಿ ಪರ 10 ಬೇರೆ ಬೇರೆ ಆಟಗಾರರು ಅರ್ಧಶತಕಗಳನ್ನ ಸಿಡಿಸಿರೋದೇ ತಂಡವನ್ನ ಫಸ್ಟ್ ಫೈನಲಿಸ್ಟ್ ಆಗುವಂತೆ ಮಾಡಿದೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಲಿಯಾಮ್ ಲಿವಿಂಗ್ ಸ್ಟನ್, ರೊಮ್ಯಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಜಿತೇಶ್ ಶರ್ಮಾ ಅರ್ಧಶತಕಗಳನ್ನ ಬಾರಿಸಿದ್ದಾರೆ. ಅಲ್ದೇ ಈ ಸೀಸನ್​ನಲ್ಲಿ ವಿರಾಟ್ ಕೊಹ್ಲಿ 8 ಅರ್ಧಶತಕಗಳನ್ನ ಗಳಿಸಿದ್ದು ಟಾಪ್-1ನಲ್ಲಿದ್ದಾರೆ. ಆರ್​ಸಿಬಿ ಹೊರತುಪಡಿಸಿ ಬೇರೆ ಯಾವುದೇ ಟೀಮ್​ನಲ್ಲಿ 10 ಬೇರೆ ಬೇರೆ ಆಟಗಾರರು ಅರ್ಧಶತಕಗಳನ್ನ ಸಿಡಿಸಿಲ್ಲ.

Shantha Kumari