ಅಭಿಮಾನಿಗಳಿಗೆ ಬೇಸರ ತಂದ ವಿರಾಟ್ ಕೊಹ್ಲಿ ಕೈ ಸನ್ನೆ – RCB ಸ್ಟಾರ್ ಆಟಗಾರ ಮಾಡಿದ್ದು ಸರಿನಾ?

ಅಭಿಮಾನಿಗಳಿಗೆ ಬೇಸರ ತಂದ ವಿರಾಟ್ ಕೊಹ್ಲಿ ಕೈ ಸನ್ನೆ – RCB ಸ್ಟಾರ್ ಆಟಗಾರ ಮಾಡಿದ್ದು ಸರಿನಾ?

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತರೂ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ಮೊದಲ ಪಂದ್ಯ ದೇವ್ರಿಗೆ ಅಂತಾ ಫ್ಯಾನ್ಸ್ ಕೂಡಾ ಸಮಾಧಾನ ಮಾಡಿಕೊಂಡಿದ್ದಾರೆ. ಇದರ ನಡುವೆ ಕೊಹ್ಲಿಯ ಆ ಒಂದು ಸನ್ನೆ ಅಭಿಮಾನಿಗಳಿಗೆ ಬೇಸರವಾಗುವಂತೆ ಮಾಡಿದೆ.

ಇದನ್ನೂ ಓದಿ: IPLಗೂ ಮುನ್ನ ದೇವರ ಮೊರೆ ಹೋದ ಕೆ.ಎಲ್‌ ರಾಹುಲ್​​ – IPLನಲ್ಲಿ ಭಕ್ತನ ಕೈಹಿಡಿತಾನಾ ಮಹಾಕಾಳೇಶ್ವರ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೈದಾನದಲ್ಲಿ ಇದ್ದಾರೆ ಅಂದರೆ ಅಭಿಮಾನಿಗಳ ಕಣ್ಣು ಕೊಹ್ಲಿ ಮೇಲೆಯೇ ಇರುತ್ತದೆ. ಇದೀಗ ಕೊಹ್ಲಿ ಮಾಡಿರುವ ಕೈ ಸನ್ನೆ ಅಭಿಮಾನಿಗಳಿಗೆ ಬೇಸರ ತಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಮೊದಲ ಪಂದ್ಯವು ಶುಕ್ರವಾರ  ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಚೇಸ್ ಮಾಡುವ ಸಮಯದಲ್ಲಿ, ಯುವ ಬ್ಯಾಟರ್ ರಚಿನ್ ರವೀಂದ್ರ ಔಟಾದಾಗ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗಾಯಕ್ವಾಡ್ 15 ಎಸೆತಗಳಲ್ಲಿ 15 ರನ್ ಗಳಿಸಿದ ನಂತರ ರನ್ ವೇಗವನ್ನು ಮುಂದುವರಿಸಿದ ರಚಿನ್ ಕೇವಲ 15 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ಗಳನ್ನು ಸಿಡಿಸಿದರು. ನಂತರ ರಚಿನ್ ಸ್ಲಾಗ್ ಸ್ವೀಪ್ ಸರಿಯಾಗಿ ಕನೆಕ್ಟ್ ಆಗದೆ ರಜತ್ ಪಾಟಿದಾರ್‌ಗೆ ಕ್ಯಾಚ್ ನೀಡಿ ಔಟಾದರು ಸಿಎಸ್ಕೆಯ ದೊಡ್ಡ ವಿಕೆಟ್ ಪತನಗೊಂಡಿದ್ದಕ್ಕೆ ಆರ್‌ಸಿಬಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಆದರೆ, ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ ಅವರು ರಚಿನ್‌ಗೆ ಎಕ್ಸ್-ರೇಟೆಡ್ ಸೆಂಡ್-ಆಫ್ನಲ್ಲಿ ತಮ್ಮ ಬೆರಳಿನಿಂದ ಸನ್ನೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಕೊಹ್ಲಿಯ ನಡೆಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

Sulekha