ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯ – ವಿರಾಟ್ ಕೊಹ್ಲಿ ಭರ್ಜರಿ ಶತಕ

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯ – ವಿರಾಟ್ ಕೊಹ್ಲಿ ಭರ್ಜರಿ ಶತಕ

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ದಾರೆ. ಮತ್ತೆ ಹಳೆಯ ಫಾರ್ಮ್​ಗೆ ಬಂದಿರೋ ಕೊಹ್ಲಿ ಈಗ ರನ್​​ಮಳೆಯನ್ನೇ ಹರಿಸುತ್ತಿದ್ದಾರೆ. ಕೇವಲ 87 ಎಸೆತಗಳಲ್ಲಿ 12 ಫೋರ್, 1 ಸಿಕ್ಸರ್ ಸಹಿತ ಕೊಹ್ಲಿ 113 ರನ್​ ಪೇರಿಸಿದ್ದಾರೆ. ಇದು ವಿರಾಟ್ ಕೊಹ್ಲಿಯ 45 ನೇ ಏಕದಿನ ಶತಕವಾಗಿದ್ದು, ಒಟ್ಟು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 73 ಶತಕಗಳನ್ನ ಬಾರಿಸಿದ್ದಾರೆ. ಇನ್ನು ಸ್ವದೇಶದಲ್ಲಿ ಕೊಹ್ಲಿ ಪಾಲಿಗೆ 20ನೇ ಶತಕವಾಗಿದೆ. ಈ ಹಿಂದೆ ಸಚಿನ್ ತೆಂಡೂಲ್ಕರ್ ಕೂಡ ಭಾರತದ ನೆಲದಲ್ಲಿ 20 ಶತಕಗಳನ್ನ ಬಾರಿಸಿದ್ರು. ಇದ್ರ ಜೊತೆಗೆ ಕೇವಲ 257 ಇನ್ನಿಂಗ್ಸ್​ಗಳಲ್ಲಿ 12,500ರನ್ ಪೂರೈಸಿದ ಏಕೈಕ ಆಟಗಾರ ಅನ್ನೋ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

ಇದನ್ನೂ ಓದಿ:   ಶತಮಾನಕ್ಕೊಬ್ಬ ಕ್ರಿಕೆಟರ್ ಸೂರ್ಯಕುಮಾರ್ – ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ ಬಣ್ಣನೆ

ಇನ್ನು ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 83 ರನ್ ಗಳಿಸಿ ಶತಕ ವಂಚಿತರಾಗಿದ್ದಾರೆ. ಶುಬ್​ಮನ್ ಗಿಲ್ 70 ರನ್ ಗಳಿಸಿ ಉತ್ತಮ ಆರಂಭ ನೀಡಿದ್ದರು. ವಿರಾಟ್ ಕೊಹ್ಲಿ  ಶತಕದ ನೆರವಿನಿಂದ ಟೀಮ್ ಇಂಡಿಯಾ 7 ವಿಕೆಟ್ ನಷ್ಟಕ್ಕೆ 373 ರನ್​ ಕಲೆಹಾಕಿದೆ. ಈ ಮೂಲಕ ಶ್ರೀಲಂಕಾಗೆ 374 ರನ್​ಗಳ ಕಠಿಣ ಗುರಿ ನೀಡಿದೆ.

suddiyaana