ಚೇಸಿಂಗ್ ನಲ್ಲಿ ರಾಕ್ಷಸ ವಿರಾಟ್ – 150+ ಟಾರ್ಗೆಟ್.. ಕೊಹ್ಲಿ ಇರಲೇಬೇಕಾ?
ಭಾರತ ಸೋತಿದ್ದಕ್ಕೆ KING ಟ್ರೆಂಡ್

ಚೇಸಿಂಗ್ ನಲ್ಲಿ ರಾಕ್ಷಸ ವಿರಾಟ್ – 150+ ಟಾರ್ಗೆಟ್.. ಕೊಹ್ಲಿ ಇರಲೇಬೇಕಾ?ಭಾರತ ಸೋತಿದ್ದಕ್ಕೆ KING ಟ್ರೆಂಡ್

ಸೌತ್ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋತ ಮೇಲೆ ಅದೊಬ್ಬ ಲೆಜೆಂಡರಿ ಆಟಗಾರ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್​ನಲ್ಲಿದ್ದಾರೆ. ಆತ ಇದ್ದಿದ್ರೆ ಸೋಲೋ ಮಾತೇ ಇರ್ಲಿಲ್ಲ ಅಂತಿದ್ದಾರೆ ಅಭಿಮಾನಿಗಳು. ಈ ಹಿಂದಿನ ರೆಕಾರ್ಡ್ಸ್ ಕೂಡ ಅದನ್ನೇ ಹೇಳ್ತಿದೆ. ಆಲ್ರೆಡಿ ಯಾರು ಅವ್ರು ಅನ್ನೋದನ್ನ ನೀವು ಗೆಸ್ ಮಾಡೇ ಇರ್ತೀರಿ. ಯೆಸ್.. ಒನ್ ಌಂಡ್ ಓನ್ಲಿ ಚೇಸ್ ಮಾಸ್ಟರ್, ರನ್ ಮಷಿನ್, ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ. ಚೇಸಿಂಗ್ ಅಂತಾ ಬಂದಾಗ ಅಕ್ಷರಶಃ ರನ್ ರಾಕ್ಷಸ ಆಗ್ತಿದ್ದ ಕೊಹ್ಲಿ ಸಿಂಗಲ್ಲಾಗಿ ನಿಂತು ಮ್ಯಾಚ್ ಗೆಲ್ಲಿಸ್ತಿದ್ರು.

ಇದನ್ನೂ ಓದಿ  : ಭಾರತದಲ್ಲಿ ಚಕ್ರವರ್ತಿ ಚಕ್ರವ್ಯೂಹ – ವರುಣ್ ಸ್ಪಿನ್ ಬಲೆಗೆ ಬಿದ್ದವರೆಷ್ಟು?

ವಿರಾಟ್ ಕೊಹ್ಲಿ. ಕ್ರಿಕೆಟ್ ಲೋಕದ ಬ್ರ್ಯಾಂಡ್ ಅಂಬಾಸೆಡರ್ ಅಂದ್ರೂ ತಪ್ಪಿಲ್ಲ. ಆವತ್ತು ಕೊಹ್ಲಿ ಟೆಸ್ಟ್ ಫಾರ್ಮೆಟ್​ಗೆ ಗುಡ್ ಬೈ ಹೇಳ್ದಾಗ ಜಸ್ಪ್ರೀತ್ ಬುಮ್ರಾ ಒಂದು ಮಾತನ್ನ ಹೇಳಿದ್ರು. ಕೊಹ್ಲಿಗೆ ಕ್ರಿಕೆಟ್ ಬೇಡದೇ ಇರಬಹುದು ಆದ್ರೆ ನಮಗೆ ಬೇಕು ಅಂತಾ. ಬುಮ್ರಾ ಹೇಳಿದ್ದ ಮಾತು ನಿಜವಾಗಿದೆ. ಸೌತ್ ಆಫ್ರಿಕಾ ವಿರುದ್ಧ ಟಾರ್ಗೆಟ್ ಚೇಸ್ ಮಾಡೋಕೆ ಆಗದೆ ಭಾರತ ಪಲ್ಟಿ ಹೊಡೆದಿದೆ. ಭಾರತದ ಹೀನಾಯ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಫುಲ್ ಟ್ರೆಂಡಿಂಗ್ ನಲ್ಲಿದ್ದಾರೆ.

ಭಾರತದ ಸೋಲಿನ ಬೆನ್ನಲ್ಲೇ ಕೊಹ್ಲಿ ನೆನಪಿಸಿಕೊಂಡ ಫ್ಯಾನ್ಸ್!

ಅಹಮದಾಬಾದ್​ನಲ್ಲಿ ನಡೆದ ಸೂಪರ್ 8 ಪಂದ್ಯದಲ್ಲಿ ಭಾರತ ಚೇಸಿಂಗ್​ಗೆ ಇಳಿದಾಗ ಅಟ್​ಲೀಸ್ಟ್ ಒಬ್ಬ ಬ್ಯಾಟರ್ ಸೆಟಲ್ ಆಗಿದ್ರೂ ಅಥವಾ ಒಂದೊಳ್ಳೆ ಪಾಟ್ನರ್​ಶಿಪ್ ಬಂದಿದ್ರು ಸಾಕಿತ್ತು. ಆದ್ರೆ ಯಾರಿಂದಲೂ ಬರ್ಲಿಲ್ಲ. ದುಬೆ ಬಿಟ್ರೆ ಉಳಿದವ್ರೆಲ್ಲಾ ಬಿಲೋ 20ಯಲ್ಲೇ ಪಲ್ಟಿ ಹೊಡೆದಿದ್ರು.  ಇಂಥಾ ಟೈಮಲ್ಲಿ ಅಭಿಮಾನಿಗಳಿಗೆ ನೆನಪಾಗಿದ್ದೇ ಕಿಂಗ್ ವಿರಾಟ್ ಕೊಹ್ಲಿ. ಚೇಸಿಂಗ್ ಸಮಯದಲ್ಲಿ ಕೊಹ್ಲಿ ಆಡ್ತಿದ್ದ ಆಟ ನಿಜಕ್ಕೂ ಅತ್ಯಧ್ಭುತ. ಟಿ20 ವಿಶ್ವಕಪ್ ಇತಿಹಾಸದಲ್ಲಿ, ಭಾರತವು 150+ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು ಕೇವಲ ಮೂರು ಬಾರಿ ಮಾತ್ರ. ಈ ಮೂರೂ ಪಂದ್ಯಗಳಲ್ಲೂ ಏಕಾಂಗಿಯಾಗಿ ನಿಂತು ಗೆಲ್ಲಿಸಿದ್ದು ವಿರಾಟ್ ಕೊಹ್ಲಿ.

ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ!

2014 ರಲ್ಲಿ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಮೊದಲ 150+ ಚೇಸ್

ಸೆಮಿಫೈನಲ್ ​ನಲ್ಲಿ ಸೌತ್ ಆಫ್ರಿಕಾ ನೀಡಿದ 173 ರನ್, ಕೊಹ್ಲಿ 72 ರನ್

​ಎರಡನೇ ಬಾರಿ 2016 ರಲ್ಲಿ ಆಸ್ಟ್ರೇಲಿಯಾ ನೀಡಿದ್ದ 161ರನ್​ ಗಳ ಗುರಿ

51 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ

2022ರಲ್ಲಿ ಮೂರನೇ ಬಾರಿ ಭಾರತ ಗೆದ್ದಿದ್ದು ಪಾಕಿಸ್ತಾನ ವಿರುದ್ಧ

160 ರನ್​ ಗಳ ಗುರಿ, ಏಕಾಂಗಿಯಾಗಿ 53 ಎಸೆತಗಳಲ್ಲಿ ಅಜೇಯ 82 ರನ್

ಮೂರೂ ಪಂದ್ಯಗಳಲ್ಲೂ ವಿಕೆಟ್ ಕೊಟ್ಟಿರಲಿಲ್ಲ, ಮ್ಯಾನ್ ಆಫ್ ದಿ ಮ್ಯಾಚ್

ಕೊಹ್ಲಿಯವ್ರ ಇದೇ ಬ್ಯಾಟಿಂಗ್ ಶಕ್ತಿಯಿಂದಲೇ ಇವತ್ತು ಅವ್ರನ್ನ ಕೋಟ್ಯಂತರ ಜನ ರೋಲ್ ಮಾಡೆಲ್ ಅನ್ಕೊಂಡಿರೋದು. ಆಟ ಆಡೋದು ಮುಖ್ಯ ಅಲ್ಲ. ಬಟ್ ಕ್ರೂಶಿಯಲ್ ಟೈಮಲ್ಲಿ ನಾನಿದ್ದೇನೆ ಅಂತಾ ನಿಂತು ಗೆಲ್ಲಿಸೋದು ಇದ್ಯಲ್ಲ ಅದು ಇಂಪಾರ್ಟೆಂಟ್. ಌಕ್ಚುಲಿ ಈಗ ಟೀಂ ಇಂಡಿಯಾದ ಮೇಜರ್ ಪ್ರಾಬ್ಲಂ ಏನಂದ್ರೆ ಎಲ್ರೂ ಕೂಡ ಸಿಕ್ಸ್ ಹೊಡ್ಯೋಕೇ ನೋಡ್ತಾರೆ. ಬಟ್ ಯಾರೂ ಕೂಡ ಜಾಸ್ತಿ ಹೊತ್ತು ಕ್ರೀಸ್​ನಲ್ಲಿ ನಿಂತು ಜವಾಬ್ದಾರಿ ತಗೊಳ್ಳೋಕೆ ರೆಡಿ ಇಲ್ಲ. ಌಂಡ್ ಭಾರತದ ಸ್ಕೌಟಿಂಗ್ ಟೀಂ ಕೂಡ ಐಪಿಎಲ್ ಸ್ಟ್ರೈಕ್ ರೇಟ್‌ಗಳ ಮೇಲೆ ಪ್ಲೇಯರ್​ಗಳನ್ನ ಪಿಕ್ ಮಾಡ್ತಿದೆ. ಪಂದ್ಯ ಅಥವಾ ಸಿಚುಯೇಷನ್ ಅಥವಾ ಮೈಂಡ್​ಸೆಟ್ ಮೇಲೆ ಗಮನ ಕೊಡ್ತಿಲ್ಲ. ಪ್ರಸ್ತುತ ಟಿ-20ಐ ಟೀಮಲ್ಲಿ 8ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಡೆಪ್ತ್ ಇದೆ. ಹೀಗಿದ್ರೂ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್  ಆಗ್ತಾರೆ ಅಂದಾಗ ಪ್ರಶ್ನೆಗಳು ಟೀಕೆಗಳು ಎದುರಾಗೇ ಆಗ್ತಾವೆ. ಮುಂದಿನ ಪಂದ್ಯಗಳಿಗೂ ಒಂದಷ್ಟು ಆತಂಕ ಶುರುವಾಗಿದೆ. ಒಟ್ನಲ್ಲಿ ವಿರಾಟ್ ಕೊಹ್ಲಿ ಟಿ-20ಐ ಎರಾ ಮುಗಿದಿದೆ. ಹೊಸಬರ ಜರ್ನಿ ಸ್ಟಾರ್ಟ್ ಆಗಿ ವರ್ಷಗಳೇ ಕಳೆದಿದೆ. ಹೀಗಿದ್ರೂ ಕೊಹ್ಲಿಯನ್ನೇ ಜನ ನೆನಪು ಮಾಡಿಕೊಳ್ತಾರೆ ಅಂದ್ರೆ ಅದು ವಿರಾಟ್​ ನಡೆದು ಬಂದಿರೋ ದಾರಿಯ ಗತ್ತು, ಗಮ್ಮತ್ತು ತಾಕತ್ತು.

Shantha Kumari

Leave a Reply

Your email address will not be published. Required fields are marked *