ಕೊಹ್ಲಿ ಶ್ರೀಕೃಷ್ಣ, ಪಾಟೀದಾರ್ ಅರ್ಜುನ – ಆರ್‌ಸಿಬಿ ನೂತನ ನಾಯಕನಿಗೆ ಕೊಹ್ಲಿ ಶುಭ ಹಾರೈಕೆ

ಕೊಹ್ಲಿ ಶ್ರೀಕೃಷ್ಣ, ಪಾಟೀದಾರ್ ಅರ್ಜುನ – ಆರ್‌ಸಿಬಿ ನೂತನ ನಾಯಕನಿಗೆ ಕೊಹ್ಲಿ ಶುಭ ಹಾರೈಕೆ

RCBಗೆ ಹೊಸ ನಾಯಕನ ಘೋಷಣೆಯಾಗುತ್ತಿದ್ದಂತೆ ಪ್ರಾಂಚೈಸಿ ಇಂಟ್ರಸ್ಟಿಂಗ್ ಪೋಸ್ಟ್ ಒಂದನ್ನ ಹಾಕಿದೆ. ರಜತ್ ಪಾಟೀದಾರ್ ಆರ್‌ಸಿಬಿ ತಂಡದ ಅರ್ಜುನ ಆದ್ರೆ, ವಿರಾಟ್ ಕೊಹ್ಲಿ ಶ್ರೀಕೃಷ್ಣ ಅಂತಾ ಪೋಸ್ಟ್ ಹಾಕಲಾಗಿತ್ತು. ಆದರೆ ಈ ಟ್ವೀಟ್ ಡಿಲೀಟ್ ಮಾಡಿ, ಇನ್‌ಸ್ಟಾ ಪೋಸ್ಟ್ ಎಡಿಟ್ ಮಾಡಲಾಗಿದೆ. ಇದ್ರಲ್ಲಿ ಮಹಾಭಾರತ ಯುದ್ಧಕ್ಕೆ ವೇದಿಕೆ ಸಜ್ಜಾಗಿದೆ. ಯುದ್ಧಕ್ಕೆ ಹೊರಟ ವಿರಾಟ್ ಕೊಹ್ಲಿ ರಥವನ್ನು ಮುನ್ನಡೆಸುತ್ತಿದ್ದರೆ, ರಜತ್ ಪಾಟೀದಾರ್ ಬತ್ತಳಿಕೆಯಲ್ಲಿ ಬಾಣ ತುಂಬಿಕೊಂಡು ಗುರಿಯತ್ತ ಚಿತ್ತ ನೆಟ್ಟಿದ್ದಾರೆ. ಶ್ರೀಕೃಷ್ಣಾರ್ಜುನರ ಜೋಡಿಯಂತೆ ಆರ್‌ಸಿಬಿ ಈ ಬಾರಿ ಯಶಸ್ವಿಯಾಗಿ ಕಪ್ ಗೆಲ್ಲಲಿದೆ ಎಂಬ ಅರ್ಥ ಈ ಪೋಸ್ಟ್‌ನಲ್ಲಿದೆ.

ಇದನ್ನೂ ಓದಿ:  ರಜತ್ ಪಾಟೀದಾರ್ ಗೆ RCB ಪಟ್ಟಾಭಿಷೇಕ – ಕೊಹ್ಲಿ ಆಪ್ತನಿಗೆ ಕ್ಯಾಪ್ಟನ್ಸಿ ಕಟ್ಟಿದ್ದೇಕೆ?  

ಆರ್​ಸಿಬಿ ನಾಯಕನಾಗಿ ರಜತ್ ಪಾಟಿದಾರ್ ಗೆ ಪಟ್ಟಕಟ್ಟುತ್ತಿದ್ದಂತೆ ನೂತನ ನಾಯಕನಿಗೆ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ. ನಿಮಗೆ ಶುಭ ಹಾರೈಸುತ್ತೇನೆ. ಕಳೆದ ಕೆಲ ವರ್ಷಗಳಿಂದ ನೀವು ಆರ್‌ಸಿಬಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ. ಇದೀಗ ನಿಮಗೆ ನಾಯಕತ್ವ ಕೂಡ ಸಿಕ್ಕಿದೆ. ನಾನು ಮತ್ತು ತಂಡದ ಸದಸ್ಯರು ಸದಾ ನಿಮ್ಮ ಜೊತೆ ಇರಲಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ. ಆರ್​ಸಿಬಿ ಅಭಿಮಾನಿಗಳು ರಜತ್ ಪಾಟಿದಾರ್ ಗೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡಬೇಕೆಂದು ನಾನು ವಿನಂತಿಸುತ್ತೇನೆ. ನಿಮ್ಮೆಲ್ಲರ ಬೆಂಬಲ ಪಾಟಿದಾರ್ ಮೇಲಿರಲಿ ಎಂದು ಕೊಹ್ಲಿ ಕೇಳಿಕೊಂಡಿದ್ದಾರೆ.

ಐಪಿಎಲ್ ಮ್ಯಾಚ್ ಮಾರ್ಚ್​ 22 ರಿಂದ ಆರಂಭವಾಗಲಿದೆ. ಈ ಬಾರಿಯ ಉದ್ಘಾಟನೆ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆಯಲಿದ್ದು ಹಾಲಿ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಆರ್‌ಸಿಬಿ ನಡುವೆ ಮೊದಲ ಪಂದ್ಯ ನಡೆಯಲಿದೆ. ನ್ಯೂ ಕ್ಯಾಪ್ಟನ್ ಪಾಟೀದಾರ್ ಸಾರಥ್ಯ ನೋಡಲು ಫ್ಯಾನ್ಸ್ ಕೂಡಾ ಕಾಯ್ತಿದ್ದಾರೆ.

Sulekha