ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದಾಖಲೆ ಬರೆಯುತ್ತಾರಾ ವಿರಾಟ್ ಕೊಹ್ಲಿ – ದಾಖಲೆಯ ಶತಕಕ್ಕೆ ಕಾಯುತ್ತಿದ್ದಾರೆ ರನ್ ಮೆಷಿನ್ ಫ್ಯಾನ್ಸ್

ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದಾಖಲೆ ಬರೆಯುತ್ತಾರಾ ವಿರಾಟ್ ಕೊಹ್ಲಿ – ದಾಖಲೆಯ ಶತಕಕ್ಕೆ ಕಾಯುತ್ತಿದ್ದಾರೆ ರನ್ ಮೆಷಿನ್ ಫ್ಯಾನ್ಸ್

ವಿರಾಟ್ ಕೊಹ್ಲಿ ಅಂದ ತಕ್ಷಣ ಈಗ ಮೊದಲಿಗೆ ನೆನಪಾಗೋದೆ 50ನೇ ಸೆಂಚೂರಿ. ಕೊಹ್ಲಿ ದಾಖಲೆಯ ಶತಕಕ್ಕಾಗಿ ಎಲ್ಲರೂ ಕಾಯ್ತಾ ಇದ್ದಾರೆ. ಇದೇ ವರ್ಲ್ಡ್​​ಕಪ್​​ನಲ್ಲಿ ಟೀಂ ಇಂಡಿಯಾ ರನ್ ಮಷಿನ್ ವರ್ಲ್ಡ್​ ರೆಕಾರ್ಡ್ ಮಾಡುವ ನಿರೀಕ್ಷೆ ಇದೆ. ಆದ್ರೆ ವಿರಾಟ್ ಕೊಹ್ಲಿ ಮುಂದೆ ಇದೊಂದೇ ವಿಶ್ವದಾಖಲೆಯ ಚಾನ್ಸ್ ಇರೋದಲ್ಲ. ಹೈಯೆಸ್ಟ್ ಸೆಂಚೂರಿ ರೆಕಾರ್ಡ್ ಜೊತೆಗೆ ಇನ್ನೊಂದಷ್ಟು ದಾಖಲೆಗಳನ್ನ ತಮ್ಮ ಹೆಸರಿಗೆ ಬರೆಯುವ ಅವಕಾಶವೂ ವಿರಾಟ್ ಕೊಹ್ಲಿ ಮುಂದಿದೆ. ಕೊಹ್ಲಿ ಬ್ರೇಕ್​ ಮಾಡಲಿರುವ ರೆಕಾರ್ಡ್​ಗಳ ಸರಮಾಲೆ ಯಾವುದೆಲ್ಲಾ ಅನ್ನೋ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ವಿರಾಟ್ ಕೊಹ್ಲಿ – ರನ್ ಮೆಷಿನ್ ಚೇಸಿಂಗ್ ಸ್ಟೈಲ್ ಹೇಗಿದೆ?

ಈ ಬಾರಿಯ ವರ್ಲ್ಡ್​​ಕಪ್​​ನಲ್ಲೇ ವಿರಾಟ್ ಕೊಹ್ಲಿಗೆ ಐದು ರೆಕಾರ್ಡ್​ಗಳನ್ನ ಬ್ರೇಕ್​ ಮಾಡುವ ಅಪಾರ್ಚ್ಯುನಿಟಿ ಇದೆ.

ನಂ.1: ಮೊಟ್ಟ ಮೊದಲ ಬಾರಿಗೆ 50ನೇ ಶತಕ!

ವಿರಾಟ್ ಕೊಹ್ಲಿ ಈಗಾಗ್ಲೇ 49 ಸೆಂಚೂರಿ ಹೊಡೆದು ಸಚಿನ್​ಗೆ ಸಮಾನರಾಗಿ ನಿಂತಿದ್ದಾರೆ. ಇನ್ನೊಂದು ಶತಕ ಬಾರಿಸಿದರೂ ಕೂಡಾ ಕಿಂಗ್ ಕೊಹ್ಲಿ ಹೊಸ ವಿಶ್ವದಾಖಲೆ ಬರೆಯುತ್ತಾರೆ. ಇದುವರೆಗೂ ಅಂತಾರಾಷ್ಟ್ರೀಯ ವಂಡೇ ಕ್ರಿಕೆಟ್​​ನಲ್ಲಿ 50 ಸೆಂಚೂರಿಗಳನ್ನ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಹೊಡೆದಿಲ್ಲ. ಹೀಗಾಗಿ ಇದು ವಿರಾಟ್ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಲಿರುವ ಅತ್ಯಂತ ದೊಡ್ಡ ದಾಖಲೆಯಾಗಿದೆ. ಮುಂದಿನ ಕೆಲ ವರ್ಷಗಳಿಗಂತೂ ಈ ದಾಖಲೆಯಲ್ಲಿ ಬ್ರೇಕ್ ಮಾಡೋಕೆ ಇನ್ಯಾರಿಂದಲೂ ಸಾಧ್ಯವಿಲ್ಲ.

ನಂ.2: ವಿಶ್ವಕಪ್ ​​ನಲ್ಲಿ ಅತೀ ಹೆಚ್ಚು ರನ್​ ಗಳಿಸಿದ ಆಟಗಾರ!

ಇಲ್ಲೂ ವಿರಾಟ್​ ಕೊಹ್ಲಿಗೆ ಹೊಸ ದಾಖಲೆಯನ್ನ ಬರೆಯುವ ಅವಕಾಶ ಇದೆ. ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಈ ಬಾರಿಯ ವರ್ಲ್ಡ್​ಕಪ್​​ನಲ್ಲಿ ವಿರಾಟ್ ಕೊಹ್ಲಿ 594 ರನ್​ ಗಳಿಸಿ, ಹೈಯೆಸ್ಟ್ ಸ್ಕೋರರ್​ ಲಿಸ್ಟ್​ನಲ್ಲಿ ನಂಬರ್​-1 ಪೊಸೀಷನ್​​ನಲ್ಲಿ ಇದ್ದರು. ಒಂದೇ ವರ್ಲ್ಡ್​​ಕಪ್​​ನಲ್ಲಿ ಅತೀ ಹೆಚ್ಚು ಸ್ಕೋರ್ ಮಾಡಿದ ದಾಖಲೆ ಸೃಷ್ಟಿಸೋಕೆ ವಿರಾಟ್​ಗೆ ಇನ್ನು 80 ರನ್​ಗಳ ಅವಶ್ಯಕತೆ ಇದೆ ಅಷ್ಟೇ. 2003ರ ವಿಶ್ವಕಪ್​ನಲ್ಲಿ ಸಚಿನ್ ತೆಂಡೂಲ್ಕರ್ ಬರೋಬ್ಬರಿ 673 ರನ್ ಹೊಡೆದಿದ್ರು. ಹೀಗಾಗಿ ಈ ವಿಶ್ವಕಪ್​ನಲ್ಲಿ ಇನ್ನೊಂದು ಸೆಂಚೂರಿ ಹೊಡೆದ್ರೂ ಸಾಕು ಸಚಿನ್​ ಹೆಸರಲ್ಲಿರೋ ಮತ್ತೊಂದು ರೆಕಾರ್ಡ್ ಕೂಡ ಕೊಹ್ಲಿ ಪಾಲಾಗಲಿದೆ.

ನಂ.3: ಎರಡನೇ ಬಾರಿ ವಿಶ್ವಕಪ್ ಗೆಲ್ತಾರಾ ಕೊಹ್ಲಿ?

ಇಲ್ಲೂ ಒಂದು ರೆಕಾರ್ಡ್ ಬರೆಯುವ ಚಾನ್ಸ್ ವಿರಾಟ್ ಕೊಹ್ಲಿಗೆ ಇದೆ. ಇದುವರೆಗೆ ಭಾರತದ ಯಾವೊಬ್ಬ ಪ್ಲೇಯರ್​ ಕೂಡ ಎರಡು ಬಾರಿ ಏಕದಿನ ವರ್ಲ್ಡ್​​ಕಪ್ ಗೆದ್ದಿಲ್ಲ. ಆದ್ರೆ ವಿರಾಟ್ ಕೊಹ್ಲಿಗೆ ಈ ಸಾಧನೆ ಮಾಡಬಹುದು. ಯಾಕಂದ್ರೆ, 2011ರ ವರ್ಲ್ಡ್​​ಕಪ್​ ಟೀಂನಲ್ಲಿ ವಿರಾಟ್ ಕೊಹ್ಲಿ ಇದ್ರು. 12 ವರ್ಷಗಳ ಹಿಂದೆ ತಮ್ಮ ಮೊದಲ ವರ್ಲ್ಡ್​​ಕಪ್​ ಟೂರ್ನಿಯಲ್ಲೇ ವಿರಾಟ್ ಟ್ರೋಫಿ ಎತ್ತಿ ಹಿಡಿದಿದ್ರು. ಇದೀಗ 2ನೇ ಬಾರಿಗೆ ವಿಶ್ವಕಪ್​ ಗೆಲ್ಲುವ ಅವಕಾಶ ವಿರಾಟ್ ಕೊಹ್ಲಿಗೆ ಇದೆ. ಒಂದು ವೇಳೆ ಟೀಂ ಇಂಡಿಯಾ ಈ ಬಾರಿ ವರ್ಲ್ಡ್​​ಕಪ್​ ಗೆದ್ರೆ ಈ ಸಾಧನೆಯನ್ನ ಮಾಡಿದ ಮೊದಲ ಭಾರತೀಯರಾಗ್ತಾರೆ. ಜೊತೆಗೆ ಆರ್. ಅಶ್ವಿನ್ ಕೂಡ ಇದ್ದಾರೆ. ಅಶ್ವಿನ್​​ ಕೂಡ 2011 ವರ್ಲ್ಡ್​ಕಪ್ ಟೀಂನಲ್ಲಿದ್ರು. ಆದ್ರೆ ಇಡೀ ಟೂರ್ನಿಯಲ್ಲಿ ಎರಡು ಮ್ಯಾಚ್​​ಗಳಲ್ಲಷ್ಟೇ ಆಡಿದ್ದರು.

ನಂ.4: ಸ್ವದೇಶದಲ್ಲಿ 2 ಬಾರಿ ವಿಶ್ವಕಪ್ ಗೆದ್ದ ಸಾಧನೆ!

ಈ ಬಾರಿ ಟೀಂ ಇಂಡಿಯಾ ವರ್ಲ್ಡ್​​ಕಪ್​​ ಗೆದ್ರೆ ವಿರಾಟ್ ಕೊಹ್ಲಿ ಮಾತ್ರವಲ್ಲ ಭಾರತೀಯ ಕ್ರಿಕೆಟ್​ ಹೊಸ ವಿಶ್ವದಾಖಲೆಯನ್ನ ಕೂಡ ಬರೆಯಲಿದೆ. ಇದುವರೆಗೆ ಸ್ವದೇಶದಲ್ಲಿ ಯಾವುದೇ ಕ್ರಿಕೆಟರ್​ ಮತ್ತು ಯಾವುದೇ ಟೀಂ ಎರಡು ಬಾರಿ ವರ್ಲ್ಡ್​ಕಪ್ ಗೆದ್ದಿಲ್ಲ. ಆಸ್ಟ್ರೇಲಿಯಾ 5 ಬಾರಿ ವರ್ಲ್ಡ್​​ಕಪ್ ಗೆದ್ರೂ ಕೂಡ ತನ್ನದೇ ನೆಲದಲ್ಲಿ ಎರಡು ಬಾರಿ ವಂಡೇ ವಿಶ್ವಕಪ್​ ಗೆದ್ದಿಲ್ಲ. 2015ರಲ್ಲಿ ಮಾತ್ರ ಆಸ್ಟ್ರೇಲಿಯಾದಲ್ಲೇ ಆಸಿಸ್ ಟೀಂ ಚಾಂಪಿಯನ್ ಆಗಿತ್ತು. 2019ರಲ್ಲಿ ಇಂಗ್ಲೆಂಡ್ ತನ್ನದೇ ನೆಲದಲ್ಲಿ ಮೊದಲ ಬಾರಿ ವರ್ಲ್ಡ್​ಕಪ್ ಗೆದ್ದಿತ್ತು. ಆದ್ರೆ ಇನ್ನೊಂದು ರೆಕಾರ್ಡ್ ಮಾಡುವ ಅಪಾರ್ಚ್ಯುನಿಟಿ ಟೀಂ ಇಂಡಿಯಾಗೆ ಇದೆ. ಈ ಬಾರಿ ಭಾರತ ವಿಶ್ವಕಪ್​ ಗೆದ್ರೆ ತನ್ನದೇ ನೆಲದಲ್ಲಿ 2 ಬಾರಿ ವರ್ಲ್ಡ್​ಗೆದ್ದ ಮೊದಲ ಟೀಂ ಎನ್ನಿಸಿಕೊಳ್ಳುತ್ತೆ. ಜೊತೆಗೆ ವಿರಾಟ್ ಕೊಹ್ಲಿ ಹೆಸರಿಗೂ ಈ ದಾಖಲೆ ಸೇರಿಕೊಳ್ಳುತ್ತದೆ.

ನಂ.5: ವರ್ಲ್ಡ್ ​ಕಪ್ ​ನಲ್ಲಿ ಸೆಕೆಂಡ್ ಹೈಯೆಸ್ಟ್ ಸ್ಕೋರರ್ ಕೊಹ್ಲಿ?

ಈ ವರ್ಲ್ಡ್​​ಕಪ್ ಟೂರ್ನಿಯಲ್ಲೇ ವಿರಾಟ್​ ಕೊಹ್ಲಿಗೆ ಸೆಕೆಂಡ್ ಹೈಯೆಸ್ಟ್ ಸ್ಕೋರ್ ಮಾಡಿದ ಬ್ಯಾಟ್ಸ್​ಮನ್​ ಅನ್ನೋ ರೆಕಾರ್ಡ್ ಕೂಡ ಮಾಡಬಹುದು. ಅಂದ್ರೆ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕ್ಕಿ ಪಾಂಟಿಂಗ್ ದಾಖಲೆಯನ್ನ ಕೊಹ್ಲಿ ಬ್ರೇಕ್ ಮಾಡಬಹುದು. ರಿಕ್ಕಿ ಪಾಂಟಿಂಗ್ 46 ವಿಶ್ವಕಪ್​ ಮ್ಯಾಚ್​ಗಳಲ್ಲಿ ಒಟ್ಟು 1,743 ರನ್ ಗಳಿಸಿದ್ರು. ವಿರಾಟ್ ಕೊಹ್ಲಿ 35 ವಂಡೇ ವರ್ಲ್ಡ್​ಕಪ್ ಮ್ಯಾಚ್​ಗಳಲ್ಲಿ 1,624 ರನ್​ ಗಳಿಸಿದ್ದಾರೆ. ಪಾಂಟಿಂಗ್ ರೆಕಾರ್ಡ್​ ಬ್ರೇಕ್ ಮಾಡೋಕೆ ಕೊಹ್ಲಿಗೆ ಇನ್ನು ಬೇಕಿರೋದು 119 ರನ್​ಗಳು ಮಾತ್ರ. ಆದ್ರೆ ವಿಶ್ವಕಪ್​​ನಲ್ಲಿ ಅತೀ ಹೆಚ್ಚು ರನ್​ ಗಳಿಸಿದ ಆಟಗಾರ ಅಂದ್ರೆ ಅದು ಸಚಿನ್ ತೆಂಡೂಲ್ಕರ್ ಮಾತ್ರ. 45 ವರ್ಲ್ಡ್​ಕಪ್​ ಮ್ಯಾಚ್​ಗಳಲ್ಲಿ ಸಚಿನ್ ಒಟ್ಟು 2,278 ರನ್ ಗಳಿಸಿದ್ದಾರೆ. ಹೀಗಾಗಿ ಈ ಬಾರಿಯ ವರ್ಲ್ಡ್​ಕಪ್​ನಲ್ಲಿ ಒಟ್ಟು ದಾಖಲೆಗಳನ್ನ ಬ್ರೇಕ್ ಮಾಡುವ ಅವಕಾಶ ವಿರಾಟ್ ಕೊಹ್ಲಿಗೆ ಇದೆ.

Sulekha